Untitled Document
Sign Up | Login    
Dynamic website and Portals
  
January 10, 2015

ಇಂಡಿಯನ್ ಮುಜಾಹಿದ್ದೀನ್ ಬೆಳೆಯಲು ಬಿಜೆಪಿಯೇ ಕಾರಣ: ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್ ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ : 'ಇಂಡಿಯನ್ ಮುಜಾಹಿದ್ದೀನ್' ಸಂಘಟೆನೆ ಬೆಳೆಯಲು ಬಿಜೆಪಿ ಕಾರಣ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.

ಜ.10ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಗನ್ನಾಥ ಶೆಟ್ಟಿ ಆಯೋಗ 1997ರಲ್ಲಿ ಭಟ್ಕಳದಲ್ಲಿ ಒಂದು ವರ್ಷ ಅಧ್ಯಯನ ಮಾಡಿ ಭಯೋತ್ಪಾದಕ, ದೇಶದ್ರೋಹಿ ಚಟುವಟಿಕೆ ಬಗ್ಗೆ ಮಾಹಿತಿ ಕಲೆ ಹಾಕಿ ಭಯೋತ್ಪಾದನೆ ನಿಗ್ರಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಈ ವರದಿಯನ್ನು ಜಾರಿಗೊಳಿಸಲಿಲ್ಲ. ಒಂದು ವೇಳೆ ಜಾರಿ ಗೊಳಿಸಿದ್ದರೆ ಇಂಥ ಸಂಘಟನೆ ಹುಟ್ಟಿಕೊಳ್ಳುತ್ತಿರಲಿಲ್ಲ ಎಂದು ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ.

ಜಗನ್ನಾಥ ಶೆಟ್ಟಿ ಆಯೋಗ ರಚನೆಗೆ ಒತ್ತಾಯಿಸಿದ್ದೇ ಬಿಜೆಪಿ. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಆಯೋಗದ ವರದಿ ಜಾರಿಗೆ ಇಚ್ಛಾಶಕ್ತಿ ತೋರಲಿಲ್ಲ. ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೂಡ ಆಯೋಗದ ವರದಿ ಜಾರಿಗೆ ಮುಂದಾಗಲಿಲ್ಲ. ಅಂದೇ ವರದಿ ಜಾರಿಗೆ ತಂದು ಕಾನೂನು ಬಿಗಿಗೊಳಿಸಿದ್ದರೆ ಬಹುಶಃ ಇಂಡಿಯನ್ ಮುಜಾಹಿದ್ದೀನ್ ಹುಟ್ಟುತ್ತಿರಲಿಲ್ಲ. ಇದಕ್ಕೆ ಬಿಜೆಪಿಯೇ ಹೊಣೆ ಎಂದರು. ವರದಿ ಜಾರಿಗೆ ಒತ್ತಾಯಿಸಿ ಶ್ರೀರಾಮ ಸೇನೆ ಭಟ್ಕಳದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲು ನಿಶ್ಚಯಿಸಿದೆ ಎಂದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited