ಜಕಾರ್ತಾ : ಮಲೇಷ್ಯಾ ಎಂಹೆಚ್ 370 ಬೊಯಿಂಗ್ ವಿಮಾನ ನಿಗೂಢವಾಗಿ ಕಣ್ಮರೆಯಾದಂತೆ ಏರ್ ಏಷ್ಯಾ ಕಂಪನಿಗೆ ಸೇರಿದ ಕ್ಯೂಝಡ್-8501 ವಿಮಾನವೊಂದು ನಾಪತ್ತೆಯಾಗಿದೆ.
162 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ ಇಂಡೋನೇಷ್ಯಾದ ಸುರಬಯಾ ಏರ್ಪೋರ್ಟ್ನಿಂದ 5.30ಕ್ಕೆ ಟೇಕ್ ಆಫ್ ಆಗಿದ್ದ ವಿಮಾನ 8.30ಕ್ಕೆ ಸಿಂಗಾಪುರಕ್ಕೆ ಬಂದಿಳಿಯಬೇಕಿತ್ತು. ಆದರೆ 9.30 ಕಳೆದರೂ ವಿಮಾನ ನಿಲ್ದಾಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ವಿಮಾನ ರಾಡಾರ್ ಸಂಪರ್ಕ ಕಳೆದುಕೊಂಡಿರುವುದರಿಂದ ವಿಮಾನ ಎಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ. ದಟ್ಟ ಮಂಜು ಆವರಿಸಿರುವುದರಿಂದ ವಿಮಾನ ಪತನಗೊಂಡಿರುವ ಅಥವಾ ಉಗ್ರರು ವಿಮಾನವನ್ನು ಹೈಜಾಕ್ ಮಾಡಿರುವ ಶಂಕೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.