Untitled Document
Sign Up | Login    
Dynamic website and Portals
  
January 13, 2015

ಏರ್ ಏಷ್ಯಾ ವಿಮಾನ ಪತನ: ವಾಯು ಒತ್ತಡದಿಂದ ಸ್ಫೋಟ

ಸಿಂಗಾಪುರ : ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟಗೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಮಾನವು ಸಮುದ್ರದಲ್ಲಿ ಬೀಳುವುದಕ್ಕೂ ಮೊದಲೇ ಆಗಸದಲ್ಲೇ ಸ್ಫೋಟಗೊಂಡಿದೆ. ವಿಮಾನದಲ್ಲಿ ವಾಯು ಒತ್ತಡ ತೀವ್ರ ಪ್ರಮಾಣದಲ್ಲಿ ಏರುಪೇರಾಗಿದ್ದರಿಂದ ವಿಮಾನ ಸ್ಫೋಟಗೊಂಡಿರಬಹುದು ಎಂದು ಹಿರಿಯ ತನಿಖಾಧಿಕಾರಿ ಸುಪ್ರಿಯದಿ ಹೇಳಿದ್ದಾರೆ.

ರಾಷ್ಟ್ರೀಯ ಶೋಧನಾ ಮತ್ತು ರಕ್ಷಣಾ ಏಜೆನ್ಸಿಯ ಸಂಯೋಜಕರಾಗಿರುವ ಸುಪ್ರಿಯದಿ ಅವರು ಹೇಳಿರುವಂತೆ, 'ನನ್ನ ಸಂಶೋಧನೆಗಳ ಪ್ರಕಾರ ಮತ್ತು ವಿಮಾನದ ಅವಶೇಷಶಗಳನ್ನು ಪರೀಕ್ಷಿಸಿದಾಗ ವಿಮಾನವು ತೀವ್ರ ವಾಯು ಒತ್ತಡದಿಂದಾಗಿ ಸ್ಫೋಟಗೊಂಡಿರಬಹುದು. ಆ ಬಳಿಕ ಸಮುದ್ರಕ್ಕೆ ಬಿದ್ದಿದೆ. ವಿಮಾನದ ಎಡಭಾಗದ ಲೋಹದ ತಡೆಗೋಡೆಯಲ್ಲಿ ಉಂಟಾದ ಬಿರುಕು ವಿಮಾನದಲ್ಲಿ ತೀವ್ರ ವಾಯು ಒತ್ತಡ ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ವಿಮಾನ ಸ್ಫೋಟಗೊಂಡಿರಬಹುದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಏರ್‌ಏಷ್ಯಾ ವಿಮಾನದ ಎರಡೂ ಬ್ಲಾಕ್‌ ಬಾಕ್ಸ್ ಗಳ ಪತ್ತೆಯಾಗಿದ್ದು, ವಿಮಾನ ಪತನಗೊಳ್ಳುವ ಮುನ್ನ ಪೈಲಟ್ ಆಡಿದ ಮಾತುಗಳನ್ನು ಆಧರಿಸಿ ವಿಮಾನ ಹೇಗೆ ಪತನಗೊಂಡಿತು ಎನ್ನುವುದರ ಮಾಹಿತಿ ದೊರೆಯಲಿದೆ. ಈಗಾಗಲೇ ಎರಡೂ ಬ್ಲಾಕ್‌ಬಾಕ್ಸ್ ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ತಜ್ಞರು ಬ್ಲಾಕ್‌ಬಾಕ್ಸ್ ನಲ್ಲಿ ರೆಕಾರ್ಡ್ ಆಗಿರುವ ಮಾಹಿತಿಗಳನ್ನು ಡಿಕೋಡ್ ಮಾಡುವ ಕಾರ್ಯದಲ್ಲಿ ತೊಡಗಲಿದ್ದಾರೆ.

ಕಳೆದ ಡಿಸೆಂಬರ್ 28ರಂದು ಸುರಬಯಾ ವಿಮಾನ ನಿಲ್ದಾಣದಿಂದ ಸಿಂಗಾಪುರದತ್ತ ಪ್ರಯಾಣ ಬೆಳೆಸಿದ್ದ ಏರ್‌ಏಷ್ಯಾ ವಿಮಾನ ಟೇಕ್‌ಆಫ್ ಆದ ಕೆಲವೇ ಗಂಟೆಗಳಲ್ಲಿ ಪತನಗೊಂಡು, ಜಾವಾ ಸಮುದ್ರದಲ್ಲಿ ಬಿದ್ದಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited