Untitled Document
Sign Up | Login    
Dynamic website and Portals
  
December 25, 2014

ಶಿಕ್ಷಣ ವ್ಯವಸ್ಥೆ ಕೇವಲ ರೋಬೋಟ್ ಸೃಷ್ಠಿಗೆ ಮಾತ್ರ ಸೀಮಿತವಾಗಬಾರದು: ಮೋದಿ

ಶಿಕ್ಷಣ ವ್ಯವಸ್ಥೆ ಎಂಬುದು ಸಮಗ್ರ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿರಬೇಕು

ನರೇಂದ್ರ ಮೋದಿ ನರೇಂದ್ರ ಮೋದಿ

ನವದೆಹಲಿ : 'ಶಿಕ್ಷಣ ವ್ಯವಸ್ಥೆ' ವಿಶ್ವಕ್ಕೆ ಕೊಡುಗೆ ನೀಡುವಂತಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಡಿ.25ರಂದು ಹಿಂದೂ ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ವ್ಯವಸ್ಥೆ ಎಂಬುದು ರೋಬೋಟ್ ಗಳನ್ನು ಉತ್ಪಾದನೆ ಮಾಡಲು ಮಾತ್ರ ಸೀಮಿತವಾಗಬಾರದು, ರೋಬೋಟ್ ಗಳನ್ನು ಸೃಷ್ಠಿಸಲು ಪ್ರಯೋಗಾಲಯಗಳಿವೆ. ಶಿಕ್ಷಣ ವ್ಯವಸ್ಥೆ ಎಂಬುದು ದೇಶಕ್ಕೆ ಉತ್ತಮ ನಾಗರಿಕರನ್ನು ನೀಡುವ ಸಮಗ್ರ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಡಿ ವಿಶ್ವಕ್ಕೆ ಇಂದು ಉತ್ತಮ ಶಿಕ್ಷಕರ ಅಗತ್ಯವಿದೆ. ಉತ್ತಮ ಶಿಕ್ಷಕರಿಂದ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಉತ್ತಮ ಶಿಕ್ಷಕರನ್ನು ಹೊಂದುವುದು ಹೇಗೆ ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಇಡಿ ವಿಶ್ವ, ಭಾರತದತ್ತ ನೋಡುತ್ತಿದೆ ಎಂಬುದು ಕಳೆದ 6 ತಿಂಗಳ ಅಧಿಕಾರದಲ್ಲಿ ನನಗೆ ಅರಿವಾಗಿದೆ. ವಾರಾಣಸಿಯಲ್ಲಿರುವ ಒಂದೊಂದು ಅದ್ಭುತ ವಿಷಯವನ್ನು ಪ್ರತಿ ಶಾಲೆಯೂ ಅಭಿವೃದ್ಧಿ ಪಡಿಸಬೇಕು ಹಾಗಾದಲ್ಲಿ ಇತಿಹಾಸ ಪ್ರಸಿದ್ಧ ಕಾಶಿಯನ್ನು ವಿಶ್ವಮಟ್ಟದಲ್ಲಿ ಸೆಳೆಯಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited