ನವದೆಹಲಿ : 'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿಯ ಶೇ.60ರಷ್ಟು ಅನುಯಾಯಿಗಳು ಮುಸ್ಲಿಮೇತರರು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮೆಹ್ದಿಯ ಟ್ವಿಟರ್ ಖಾತೆಯನ್ನು ಅನುಸರಿಸುತ್ತಿದ್ದ ಮುಸ್ಲಿಮರಲ್ಲಿ ಪಶ್ಚಿಮ ದೇಶದ ನಾಗರಿಕರು ಪ್ರಮುಖವಾಗಿ ಯು.ಕೆ ಯವರು ಎಂದು ಕೆಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಹೇಳಿಕೆ ನೀಡಿದ ರಾಜನಾಥ್ ಸಿಂಗ್, ಡಿಸೆಂಬರ್ 13 ರಂದು ಬಂಧಿತನಾಗಿರುವ 24 ವರ್ಷದ ಮೆಹ್ದಿ, ತನಿಖೆಯ ಸಮಯದಲ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಐ ಎಸ್ ಐ ಎಸ್ ಪರ ಟ್ವೀಟ್ ಗಳನ್ನು ಹಂಚಿಕೊಳ್ಳುತ್ತಿದ್ದನ್ನು ಒಪ್ಪಿಕೊಂಡಿದ್ದು, ಐ ಎಸ್ ಐ ಎಸ್ ಗೆ ಸೇರಿಕೊಂಡಿರುವುದನ್ನು ನಿರಾಕರಿಸಿದ್ದಾನೆ ಎಂದು ತಿಳಿಸಿದ್ದಾರೆ.
ಬಂಧನದ ನಂತರ ಕೆಂದ್ರ ತನಿಖಾ ದಳ, ಕರ್ನಾಟಕ ಪೋಲೀಸರ ಜೊತೆ ಜಂಟಿಯಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ. ಮೆಹ್ದಿಯ ಟ್ವಿಟರ್ ಖಾತೆಗೆ 17000 ಹಿಂಬಾಲಕರಿದ್ದರು ಅವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.