ನವದೆಹಲಿ : 'ದೆಹಲಿ'ಯ ಕೆಲವು ಮೆಟ್ರೊ ನಿಲ್ದಾಣಗಳಿಗೆ ಮರುನಾಮಕರಣ ಮಾಡುವ ಸಂಬಂಧ ರಚಿಸಲಾಗಿದ್ದ ಸಮಿತಿತ ಸಲಹೆಯಂತೆಯೇ ಮೆಟ್ರೋ ನಿಲ್ದಾಣವೊಂದಕ್ಕೆ ಕನ್ನಡಿಗ, ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಹೆಸರಿಡಲು ನಿರ್ಧರಿಸಲಾಗಿದೆ.
ದೆಹಲಿಯಲ್ಲಿರುವ ಮೋತಿ ಬಾಗ್ ಮೆಟ್ರೋ ರೈಲು ನಿಲ್ದಾಣ ಇನ್ನು ಮುಂದೆ ಸರ್.ಎಂ. ವಿಶ್ವೇಶ್ವರಯ್ಯ ಮೋತಿ ಬಾಗ್ ರೇಲ್ವೆ ನಿಲ್ದಾಣವಾಗಿ ಮರು ನಾಮಕರಣಗೊಳ್ಳಲಿದೆ. ಮೋತಿ ಬಾಗ್ ರೇಲ್ವೆ ನಿಲ್ದಾಣ ಸೇರಿದಂತೆ ಒಟ್ಟು 10 ನಿಲ್ದಾಣಗಳನ್ನು ಮರುನಾಮಕರಣ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಸಂಸದರ ನಿಯೋಗವೊಂದು ಕೇಂದ್ರದ ಸಚಿವರನ್ನು ಭೇಟಿ ಮಾಡಿ, ದೆಹಲಿಯ ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡುವಂತೆ ಮನವಿ ಮಾಡಿತ್ತು. ಸಂಸದರ ನಿಯೋಗದ ಒತ್ತಾಯ ಫಲಿಸಿದ್ದು ಮೋತಿ ಬಾಗ್ ಮೆಟ್ರೋ ರೈಲು ನಿಲ್ದಾಣ ಇನ್ನು ಮುಂದೆ ವಿಶ್ವೇಶ್ವರಯ್ಯ ಮೆಟ್ರೋ ರೈಲು ನಿಲ್ದಾಣವಾಗಲಿದೆ.