Untitled Document
Sign Up | Login    
Dynamic website and Portals
  
December 8, 2014

ಎಕೆ47 ಬಳಸುವ ಬೆರಳುಗಳಿಗಿಂತ ಇವಿಎಂ ಬಳಕೆ ಮಾಡುವ ಬೆರಳುಗಳಿಗೆ ಹೆಚ್ಚು ಶಕ್ತಿ: ಮೋದಿ

ನರೇಂದ್ರ ಮೋದಿ ನರೇಂದ್ರ ಮೋದಿ

ಜಮ್ಮು-ಕಾಶ್ಮೀರ : ಎಕೆ-47 ರೈಫಲ್ ಗಳ ಟ್ರಿಗರ್ ಚಲಾವಣೆ ಬೆರಳುಗಳಿಗಿಂತ ಇವಿಎಂ(ಎಲೆಕ್ಟ್ರಾನಿಕ್ ಓಟಿಂಗ್ ಮಿಷನ್) ಬಳಕೆ ಮಾಡುವ ಬೆರಳುಗಳು ಹೆಚ್ಚು ಶಕ್ತಿಯುತವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ 3ನೇ ಹಂತದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಡಿ.8ರಂದು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಜಮ್ಮು-ಕಾಶ್ಮೀರದ ಜನತೆ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಜ್ಯವನ್ನು ಅಭಿವೃದ್ಧಿ ಮಾಡಲು ನಿಮಗೂ ಶಕ್ತಿಯಿದೆ. ಅತಿ ಹೆಚ್ಚು ಮತ ಚಲಾವಣೆ ಮಾಡುವ ಮೂಲಕ ನಿಮ್ಮ ಶಕ್ತಿಯನ್ನು ನಿರೂಪಿಸಿ ಎಂದು ಮೋದಿ ಜನತೆಗೆ ಕರೆ ನೀಡಿದ್ದಾರೆ.

ಎಕೆ-47 ಬಂದೂಕು ಬಳಸುವ ಬೆರಳುಗಳಿಗಿಂತ ಎವಿಎಂ ಯಂತ್ರ ಬಳಸುವ ಬೆರಳುಗಳು ಅತಿ ಹೆಚ್ಚು ಶಕ್ತಿಯುತವಾಗಿರುತ್ತವೆ ಎಂಬುದಕ್ಕೆ ಜಮ್ಮು-ಕಾಶ್ಮೀರದ ಚುನಾವಣೆಯೇ ಸಾಕ್ಷಿ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸ್ವಾತಂತ್ರ್ಯ ನಂತರ ಜಮ್ಮು-ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮತದಾನ ನಡೆದಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.

ರಾಜ್ಯದ ಜನತೆ ಅಭಿವೃದ್ಧಿ ಬಯಸುತ್ತಿದ್ದು ಈ ಬಾರಿ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿ.9ರಂದು ಜಮ್ಮು-ಕಾಶ್ಮೀರದಲ್ಲಿ 3ನೇ ಹಂತದ ಚುನಾವಣೆ ನಡೆಯಲಿದ್ದು ಜಮ್ಮು-ಕಾಶ್ಮೀರ ರಾಷ್ಟ್ರದ ಕೇಂದ್ರಬಿಂದುವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited