ವಾಷಿಂಗ್ಟನ್ : ಟೈಮ್ ಮ್ಯಾಗಜಿನ್ ನ ವರ್ಷದ ವ್ಯಕ್ತಿ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮೋದಿ ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ ಶೇ.12.8ರಷ್ಟು ಮತಗಳಿಸಿರುವ ಮೋದಿ ಮತ್ತೊಮ್ಮೆ ಪ್ರಥಮ ಸ್ಥಾನಕ್ಕೇರಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಹಿಂದಿಕ್ಕಿದ್ದ 'ಫರ್ಗ್ಯುಸನ್ ಶೂಟೌಟ್' ಖಂಡಿಸುತ್ತಿರುವ ಪ್ರತಿಭಟನಾಕಾರರು ಮೊದಲ ದಿಢೀರನೆ ಮೊದಲ ಸ್ಥಾನಕ್ಕೇರಿದ್ದರು. ನ.26ರವರೆಗೆ ಟೈಮ್ ಓದುಗರು ಮೋದಿ ಅವರತ್ತ ಹೆಚ್ಚಿನ ಆಸಕ್ತಿ ತೋರಿದರು. ಪರಿಣಾಮ ಮೋದಿ ಶೇ.11.1ರಷ್ಟು ಮತಗಳ ಮೂಲಕ ಮುಂಚೂಣಿಯಲ್ಲಿದ್ದರು. ಆದರೆ ಫರ್ಗ್ಯುಸನ್ ಪ್ರತಿಭಟನಾಕಾರರು ಶೇ. 10.8ರಷ್ಟು ಮತಗಳಿಂದ ಮುನ್ನಡೆ ಸಾಧಿಸಿದ್ದರು.
ಮೋದಿ ಶೇ.12.8 ಮತಗಳ ಮೂಲಕ ಮೊದಲನೇ ಸ್ಥಾನಕ್ಕೇರಿದ್ದು. ನಂತರದ ಸ್ಥಾನಗಳಲ್ಲಿ ಫರ್ಗ್ಯುಸನ್ ಶೂಟೌಟ್ ಪ್ರತಿಭಟನಾಕಾರರು, ಹಾಂಕಾಂಗ್ ಪ್ರಜಾಪ್ರಭುತ್ವ ಪರ ಹೋರಾಟಗಾರ ಜೊಷುವಾ ವೋಂಗ್, ಮಲಾಲಾ ಯೂಸಫ್ ಝಾಯ್, ರಷ್ಯಾ ಅಧ್ಯಕ್ಷ ಪುಟಿನ್ ಇದ್ದಾರೆ. ಡಿ.6ರಂದು ಈ ವಾರ್ಷಿಕ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಡಿ.8ರಂದು ವಿಜೇತನ ಹೆಸರನ್ನು ಘೋಷಿಸಲಾಗುತ್ತದೆ.