Untitled Document
Sign Up | Login    
Dynamic website and Portals
  
December 2, 2014

ಬಿಜೆಪಿ ಭಾರತೀಯ ಜೋಕರ್ ಪಾರ್ಟಿ: ಅಭಿಷೇಕ್ ಬ್ಯಾನರ್ಜಿ

ಕೋಲ್ಕತ್ತಾ : ಬಿಜೆಪಿ ಭಾರತೀಯ ಜೋಕರ್ ಪಕ್ಷ ಎಂದು ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿ, ಬಿಜೆಪಿ ನಾಯಕರು ದಿನದಲ್ಲಿ ಐದು ಬಾರಿ ಬಟ್ಟೆ ಬದಲಿಸುತ್ತಾರೆ, ಹಾಗಾಗಿ, ಇದು ಭಾರತೀಯ ಜೋಕರ್ ಪಾರ್ಟಿ ಎಂದು ವ್ಯಂಗ್ಯವಾಡಿದರು.

ಮಮತಾ ಬ್ಯಾನರ್ಜಿ ವಿರುದ್ಧ ಪ್ರಜಾಸತ್ತೀಯವಾಗಿ ಪ್ರತಿಭಟಿಸಲು ಬಿಜೆಪಿಗೆ ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಜನತೆಗೆ ಶಾಂತಿ ಮತ್ತು ಸೌಹಾರ್ಧ ಬೇಕಿದೆ. ಇಂತಹ ಶಾಂತಿಯನ್ನು ಬಿಜೆಪಿ ಕದಡಲು ಯತ್ನಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಗಲಭೆ ಹೆಚ್ಚಾಗುತ್ತಿದೆ ಎಂದು ಅಭಿಷೇಕ್ ಆರೋಪಿಸಿದ್ದಾರೆ.

ಭಾರತದ ಪ್ರಧಾನಿ ನಮ್ಮ ದೇಶದಲ್ಲಿ ಇರುವುದಕ್ಕಿಂತ ವಿದೇಶದಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಹಾಗಾಗಿ ಇವರು ವಿದೇಶಿ ಮಂತ್ರಿಯಾಗಿಬಿಟ್ಟಿದ್ದಾರೆ. ಇಂತಹವರು ನಮಗೆ ಬೇಕಿಲ್ಲ. ಖಾಸಗಿ ವಿಮಾನದಲ್ಲಿ ವಿದೇಶಕ್ಕೆ ತೆರಳಿ ದಿನಕ್ಕೆ ಐದಾರು ಬಾರಿ ಬಟ್ಟೆ ಬದಲಿಸುವುದೇ ಕೆಲಸವಾಗಿದೆ ನಮ್ಮ ಪ್ರಧಾನಿಗೆ ಎಂದು ವಾಗ್ದಾಳಿ ನಡೆಸಿದರು.

ಆದರೆ, ಮಮತಾ ಬ್ಯಾನರ್ಜಿ ಅವರು ಬಹಳ ಸರಳವಾಗಿದ್ದು, ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ, ಅಲ್ಲದೇ, ಈಗಲೂ ಹಾವಾಯ್ ಚಪ್ಪಲಿ ಹಾಕಿಕೊಳ್ಳತ್ತಾರೆ.ಮಮತಾ ಬ್ಯಾನರ್ಜಿ ಅಂತಹ ಸರಳಜೀವಿ ನಮ್ಮ ನಾಯಕರಾಗಬೇಕೇ ಹೊರತು, ಭಾರತದ ಪ್ರಧಾನಿಯಂತಲ್ಲ ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಹರಿಹಾಯ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited