Untitled Document
Sign Up | Login    
Dynamic website and Portals
  
April 21, 2016

ಪಶ್ಚಿಮ ಬಂಗಾಳ ಚುನಾವಣೆ: ಕಚ್ಚಾ ಬಾಂಬ್ ಸ್ಫೋಟಗೊಂಡು ವ್ಯಕ್ತಿ ಸಾವು

ಕೋಲ್ಕತ್ತಾ : ಪಶ್ಚಿಮ ಬಂಗಾಳದ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನದ ವೇಳೆ ಬಾಂಬ್ ಸ್ಫೋಟಗೊಂಡಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಮುರ್ಷಿದಾಬಾದ್ ನಲ್ಲಿ ಮತದಾನ ನಡೆಯುತ್ತಿದ್ದ ವೇಳೆ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು ಸಿಪಿಐ-ಎಂ ಕಾರ್ಯಕರ್ತ ಮತದಾನದ ಏಜೆಂಟ್ 30 ವರ್ಷದ ತಹಿದುಲ್ ಇಸ್ಲಾಂ ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ.

ಮೇಲ್ನೋಟಕ್ಕೆ ಕಚ್ಚಾ ಬಾಂಬ್ ಸ್ಫೋಟದಿಂದ ವ್ಯಕ್ತಿ ಮೃತಪಟ್ಟಿರುವುದಾಗಿ ಕಂಡುಬಂದಿದ್ದು ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿಪಿಐ(ಎಂ) ತಹಿದುಲ್ ಇಸ್ಲಾಂ ನನ್ನು ಹತ್ಯೆಗೆ ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿದ್ದು ಆಡಳಿತ ಪಕ್ಷ ಟಿಎಂಸಿ ಆರೋಪವನ್ನು ನಿರಾಕರಿಸಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದ ಟಿಎಂಸಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದೆ. ಪರಿಣಾಮ ತಹಿದುಲ್ ಇಸ್ಲಾಂ ಹತ್ಯೆ ನಡೆದಿದೆ ಎಂದು ಸಿಪಿಐ-ಎಂ ನ ಅಭ್ಯರ್ಥಿ ರೆಹಮಾನ್ ಹೇಳಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist