Untitled Document
Sign Up | Login    
Dynamic website and Portals
  
November 25, 2014

ಜಮ್ಮು-ಕಾಶ್ಮೀರದಲ್ಲಿ ಶೇ.70, ಜಾರ್ಖಂಡ್ ನಲ್ಲಿ ಶೇ.62ರಷ್ಟು ಮತದಾನ

ಜಮ್ಮುಕಾಶ್ಮೀರ : 'ಜಮ್ಮು-ಕಾಶ್ಮೀರ' ಹಾಗೂ ಜಾರ್ಖಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ.

ಉಭಯ ರಾಜ್ಯಗಳಲ್ಲೂ ಶಾಂತಿಯುತ ಮತದಾನ ಪ್ರಕ್ರಿಯೆ ನಡೆದಿದ್ದು ಸಂಜೆ 5:30ರವರೆಗೆ ಜಮ್ಮು-ಕಾಶ್ಮೀರದಲ್ಲಿ ಶೇ.70ರಷ್ಟು ಮತದಾನ ನಡೆದಿದೆ. ಮತದಾನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್ ನಲ್ಲಿ ಶೇ.62ರಷ್ಟು ಮತದಾನ ನಡೆದಿದೆ.

ಜಾರ್ಖಂಡ್ ನಲ್ಲಿ ಮತದಾನ ನಡೆಯಲಿರುವ ಎಲ್ಲ 13 ಕ್ಷೇತ್ರಗಳು ನಕ್ಸಲ್ ಪೀಡಿತವಾಗಿದ್ದರೂ ಮತದಾನ ಶಾಂತಿಯುತವಾಗಿ ನಡೆದಿದ್ದು ವಿಶೇಷವಾಗಿತ್ತು. ಇನ್ನು ಜಮ್ಮು-ಕಾಶ್ಮೀರದಲ್ಲಿ ಉಗ್ರರ ಬೆದರಿಕೆ ನಡುವೆಯೂ ದಾಖಲೆಯ ಮತದಾನ ನಡೆದಿದೆ.

ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಆರಂಭವಾಗುತ್ತಿರುವಂತೆ ಗಡಿಯಲ್ಲಿ ಭಾರಿ ಪ್ರಮಾಣದ ಐಇಡಿಗಳು ಹಾಗೂ ಸ್ಫೋಟಕಗಳನ್ನು ದೇಶದೊಳಕ್ಕೆ ತರಲು ಉಗ್ರರು ಯತ್ನಿಸುತ್ತಿದ್ದಾರೆ ಎಂದು ಸೇನೆ ತಿಳಿಸಿತ್ತು. ಆದರೆ ಮತದಾರರು ಯಾವುದನ್ನೂ ಲೆಕ್ಕಿಸದೇ ದಾಖಲೆಯ ಪ್ರಮಾಣದಲ್ಲಿ ಮತದಾನ ನಡೆಸಿದ್ದಾರೆ. ಜಾರ್ಖಂಡ್, ಜಮ್ಮು-ಕಾಶ್ಮೀರದಲ್ಲಿ 5 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited