ಶ್ರೀನಗರ : ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಅತ್ಯಂತ ಕುತೂಹಲ ಕೆರಳಿಸಿರುವ ಈ ಚುನಾವಣೆಯು ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಸೋನಿಯಾ ಗಾಂಧಿಯವರ ಕಾಂಗ್ರೆಸ್ ಮತ್ತು ಪ್ರಬಲ ಸ್ಥಳೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ ಎನ್ನಿಸಿಕೊಂಡಿದೆ.
ಜಮ್ಮು- ಕಾಶ್ಮೀರದ ಕಾರ್ಗಿಲ್, ಲಡಾಖ್ ಪ್ರದೇಶದ ಲೇಹ್, ಗಂದರ್ಬಾಲ್, ಕಿಶ್ತಾರ್, ದೋಡಾ ಮತ್ತು ರಾಮ್ಬನ್ ಜಿಲ್ಲೆಗಳ 15 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಜಾರ್ಖಂಡ್ನ ನಕ್ಸಲ್ ಪೀಡಿತ 13 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಭಾರೀ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಈ ಹಂತದಲ್ಲಿ ಜಮ್ಮು ಕಾಶ್ಮೀರದಲ್ಲಿ 123 ಅಭ್ಯರ್ಥಿಗಳು ಮತ್ತು ಜಾರ್ಖಂಡ್ನಲ್ಲಿ 199 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿ.20ರವರೆಗೆ ಈ ಎರಡೂ ರಾಜ್ಯಗಳಲ್ಲಿ ಐದು ಹಂತದ ಚುನಾವಣೆ ನಡೆಯಲಿದ್ದು, ಡಿ.25ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಎರಡೂ ರಾಜ್ಯಗಳಲ್ಲಿ ಮೋದಿ ಅಲೆಯಲ್ಲೇ ಚುನಾವಣೆ ಯನ್ನು ಗಲ್ಲುವ ವಿಶ್ವಾಸಲ್ಲಿ ಬಿಜೆಪಿ ಇದೆ. ಆದರೆ ಕಾಶ್ಮೀರದಲ್ಲಿ ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಬಿಜೆಪಿ ಆಸೆಗೆ ತಣ್ಣೀರೆರಚಲು ಶತಪ್ರಯತ್ನ ನಡೆಸುತ್ತಿವೆ. ಇನ್ನು ಬಿಜೆಪಿ ಓಟಕ್ಕೆ ಜಾಂರ್ಖಂಡ್ನಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮತ್ತು ಜೆಎಂಎಂ ಅಡ್ಡಿಯಾಗಿವೆ.
ಕಾಶ್ಮೀರ ವಿಧಾನಸಭೆ 87 ಮತ್ತು ಜಾರ್ಖಂಡ್ ವಿಧಾನಸಭೆ 81 ಸದಸ್ಯರನ್ನು ಹೊಂದಿವೆ.