Untitled Document
Sign Up | Login    
Dynamic website and Portals
  
November 23, 2014

ಸಿಬಿಐಗೆ ನೂತನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಆರಂಭ

ನವದೆಹಲಿ : ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ರಂಜಿತ್ ಸಿನ್ಹಾ ನಿವೃತ್ತಿಗೆ ದಿನಗಣನೆ ಆರಂಭವಾಗಿರುವಂತೆಯೇ ಸಂಸ್ಥೆಗೆ ಹೊಸ ಮುಖ್ಯಸ್ಥರ ನೇಮಕಾತಿಗೆ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ.

ನೂತನ ಸಿಬಿಐ ನಿರ್ದೇಶಕರ ಆಯ್ಕೆಗೆ ಅನುಸರಿಸಲಾಗುವ ಮಾನದಂಡಗಳಲ್ಲಿ ಅರ್ಹತೆ ಪಡೆದ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಪಟ್ಟಿ ಮಾಡುವಂತೆ ಅಧಿಕಾರಿಗಳು ಹಾಗೂ ತರಬೇತಿ ಇಲಾಖೆಗೆ (ಡಿಒಪಿಟಿ) ಸೂಚಿಸಲಾಗಿದೆ.

ಪ್ರಸಕ್ತ ರಂಜಿತ್ ಸಿನ್ಹಾ ಅವರ ಅವಧಿ ಡಿಸೆಂಬರ್ 2ಕ್ಕೆ ಪೂರ್ಣಗೊಳ್ಳಲಿದೆ. ಮುಂದಿನ ಹೊಸ ಸಿಬಿಐ ನಿರ್ದೇಶಕನ ಆಯ್ಕೆಗೆ ಚಾಲನೆ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಡಿಒಪಿಟಿ ಈಗಾಗಲೇ ಹುಡುಕಾಟ ಆರಂಭಿಸಿದೆ. ಬಹುತೇಕ ಸಿನ್ಹಾ ಅವಧಿ ಮುಗಿಯುವ ಮುನ್ನವೇ ಹೊಸ ಸಾರಥಿ ನೇಮಕಾತಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ವಿರೋಧ ಪಕ್ಷದ ನಾಯಕ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ಸೂಚಿಸುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅವರನ್ನೊಳಗೊಂಡ ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುವುದು ಲೋಕ್‌ಪಾಲ್ ಕಾಯ್ದೆ ಪ್ರಕಾರ ವಾಡಿಕೆಯಲ್ಲಿ ಬಂದಿರುವ ವ್ಯವಸ್ಥೆ.

ಕೇಂದ್ರ ಗೃಹ ಖಾತೆ ಸಚಿವಾಲಯವು ಡಿಒಪಿಟಿಗೆ ಐಪಿಎಸ್ ಅಧಿಕಾರಿಗಳ ಹೆಸರುಗಳ ಮಾಹಿತಿಯನ್ನು ಕಳುಹಿಸಿಕೊಡುತ್ತದೆ. ಅದನ್ನು ಪರಿಶೀಲಿಸಿದ ಡಿಒಪಿಟಿ, ಭ್ರಷ್ಟಾಚಾರ ವಿರೋಧಿ ಪ್ರಕರಣಗಳಲ್ಲಿ ನಡೆಸಿದ ತನಿಖೆಗಳ ಅನುಭವ, ಸೇವಾ ಜೇಷ್ಠತೆ ಹಾಗೂ ಪರಿಪೂರ್ಣತೆಗಳ ಆಧಾರದ ಮೇಲೆ ಡಿಒಪಿಟಿ ಹೆಸರುಗಳ ಶಿಫಾರಸು ಮಾಡುತ್ತದೆ. ಬಹುಕೋಟಿ 2ಜಿ ಸ್ಪೆಕ್ಟ್ರಮ್ ಹಗರಣದ ತನಿಖೆಯಲ್ಲಿ ವಿವಾದ ಉಂಟುಮಾಡಿದ ಪ್ರಸಕ್ತ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರನ್ನು ಸುಪ್ರೀಂಕೋರ್ಟ್ ಕಳೆದ ಗುರುವಾರ ತನಿಖೆಯಿಂದ ದೂರ ಸರಿಯುವಂತೆ ಸೂಚಿಸಿತ್ತು.

ಈ ಮಧ್ಯೆ ಲೋಕಸಭೆಯಲ್ಲಿ ಮಾನ್ಯತೆ ಪಡೆದ ವಿರೋಧ ಪಕ್ಷ ಇಲ್ಲದಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕನಿಲ್ಲದೆಯೇ ಸಿಬಿಐ ಮುಖ್ಯಸ್ಥರ ಆಯ್ಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 1946ರ ಲೋಕ್‌ಪಾಲ್ ಹಾಗೂ ದೆಹಲಿ ವಿಶೇಷ ಪೊಲೀಸ್ ಆಯ್ಕೆ (ಡಿಎಸ್‌ಪಿಇ) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಯೋಜಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited