Untitled Document
Sign Up | Login    
Dynamic website and Portals
  
November 15, 2014

ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೈನಿಕರಿಗೆ ಚೀನಾ ತರಬೇತಿ

ಸಾಂದರ್ಭಿಕ ಚಿತ್ರ ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ : ಪದೇ ಪದೇ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವ ಪಾಕಿಸ್ತಾನ ಸೈನಿಕರಿಗೆ ಚೀನಾ ನೆರವು ನೀಡುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೈನಿಕರಿಗೆ ಚೀನಾ ತರಬೇತಿ ನೀಡುತ್ತಿದ್ದು, ಭಾರತದ ಮೇಲೆ ದಾಳಿ ನಡೆಸಲು ಸಹಾಯ ಮಾಡುತ್ತಿರುವುದು ಖಾತ್ರಿಯಾಗಿದೆ.

ರಜೌರಿ ವಲಯದಲ್ಲಿರುವ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ವಿರುದ್ಧ ದಿಕ್ಕಿನಲ್ಲಿರುವ ಸೇನಾ ನೆಲೆಯಲ್ಲಿ ಚೀನಾ ಪಾಕ್​ ಸೇನೆಗೆ ಶಸ್ತ್ರಾಸ್ತ್ರ ಉಪಯೋಗಿಸುವ ತರಬೇತಿ ಕೊಡುತ್ತಿದೆ ಎಂದು ಬಿ.ಎಸ್.ಎಫ್ಗುಪ್ತಚರ ವಿಭಾಗ ತಿಳಿಸಿದೆ.

ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ವಿರುದ್ಧ ದಿಕ್ಕಿನಲ್ಲಿರುವ ಸೇನಾ ನೆಲೆಯಲ್ಲಿ ಚೀನಾ ಪಾಕ್​ ಸೇನೆಗೆ ಶಸ್ತ್ರಾಸ್ತ್ರ ತರಬೇತಿ ಕೊಡುತ್ತಿದ್ದು ಈ ಪ್ರದೇಶವನ್ನು ಪಾಕ್ ಸೈನಿಕರು ಕಾವಲು ಕಾಯುತ್ತಿದ್ದಾರೆ.

ಶ್ರೀಗಂಗಾನಗರ ವಲಯದ ವಿರುದ್ಧ ದಿಕ್ಕಿನಲ್ಲಿರುವ ಪ್ಯಾರಾಮಿಲಿಟರಿ ನೆಲೆಯನ್ನು ಪಾಕ್ ಸೇನೆ ತನ್ನ ವಶಕ್ಕೆ ಪಡೆದಿದೆ. ಪಂಜಾಬ್​ನ ಗುರುದಾಸ್​ಪುರ ವಲಯದಲ್ಲೂ ಪಾಕ್ ಸೇನೆ ವೀಕ್ಷಣಾ ಟವರ್ ಸ್ಥಾಪಿಸಿದೆ. ಗಡಿಯಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಲು ಶಾರ್ಪ್​ ಶೂಟರ್​ಗಳು ಮತ್ತು ಅಡಗಿ ಕುಳಿತು ದಾಳಿ ನಡೆಸುವವರನ್ನು ನೇಮಿಸಲು ಪಾಕಿಸ್ತಾನ ಸೇನೆ ಮುಂದಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited