Untitled Document
Sign Up | Login    
Dynamic website and Portals
  
June 17, 2016

ಹಿಂದೂಸ್ತಾನ್ ಟರ್ಬೋ ಟ್ರೈನರ್-40 ವಿಮಾನ ಲೋಕಾರ್ಪಣೆ

ಬೆಂಗಳೂರು : ಸ್ವದೇಶಿ ನಿರ್ಮಿತ ಹಿಂದೂಸ್ತಾನ್ ಟರ್ಬೋ ಟ್ರೈನರ್-40 (ಹೆಚ್​ಟಿಟಿ-40) ತರಬೇತಿ ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಲೋಕಾರ್ಪಣೆ ಮಾಡಿದ್ದಾರೆ.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಸಂಸ್ಥೆ (ಹೆಚ್ ಎಎಲ್)ನಿರ್ಮಿಸಿರುವ ಈ ಲಘು ವಿಮಾನ ಇನ್ನು ಭಾರತೀಯ ವಾಯುಸೇನೆಯ ಯೋಧರ ತರಬೇತಿಗೆ ಲಭ್ಯವಾಗಲಿದೆ.

ಸುಮಾರು 2,800 ಕೆಜಿ ತೂಕದ ಈ ಲಘು ವಿಮಾನ, 950ಎಸ್ ಹೆಚ್ ಪಿ ಕ್ಲಾಸ್ ಟರ್ಬೋ ಪ್ರಾಪ್ ಎಂಜಿನ್ ಹೊಂದಿದೆ. ವಾಯುಸೇನೆಯ ಪೈಲಟ್ ಗಳ ತರಬೇತಿಗಾಗಿ ಸೂಕ್ತ ವಿಮಾನದ ಬೇಡಿಕೆ ಇಟ್ಟಿದ್ದ ವಾಯುಸೇನೆಗೆ ಆಗಸ್ಟ್ 2013ರಲ್ಲಿ ಹೆಚ್ ಎಎಲ್ ಸಂಸ್ಥೆ, ವಿಮಾನದ ಡಿಸೈನ್, ತಾಂತ್ರಿಕತೆ ಕುರಿತಂತೆ ಮಾಹಿತಿ ನೀಡಿತ್ತು. ಹೆಚ್ ಎಎಲ್ ನ ಈ ಮಾದರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುತ್ತಿದ್ದಂತೆಯೇ 2015ರ ಮೇ ತಿಂಗಳಲ್ಲಿ ವಿಮಾನದ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು.

12 ತಿಂಗಳ ನಂತರ ಮೊದಲ ವಿಮಾನದ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು. ಭಾರತೀಯ ವಾಯುಸೇನೆ ಈಗಾಗಲೇ 70 ಹೆಚ್​ಟಿಟಿ-40 ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ ಎಂದು ಹೆಚ್​ಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 31ರಂದು ಈ ಹಿಂದೂಸ್ತಾನ್ ಟರ್ಬೋ ಟ್ರೈನರ್ 40 ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಅಂದು ವಿಮಾನ ಯಶಸ್ವಿ ಹಾರಾಟ ನಡೆಸಿದ್ದ ಹಿನ್ನಲೆಯಲ್ಲಿ ಈಗ ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಲೋಕಾರ್ಪಣೆ ಮಾಡಿದ್ದಾರೆ.
ಹಿಂದೂಸ್ತಾನ್ ಟರ್ಬೋ ಟ್ರೖನರ್-40,ತರಬೇತಿ ವಿಮಾನ,ಮನೋಹರ್ ಪರಿಕ್ಕರ್,ಲೋಕಾರ್ಪಣೆ,ಹೆಚ್ ಎಎಲ್

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited