Untitled Document
Sign Up | Login    
Dynamic website and Portals
  
November 13, 2014

ಆಂಗ್ ಸ್ಯಾನ್ ಸೂ ಕಿ ಭೇಟಿಯಾದ ಪ್ರಧಾನಿ ಮೋದಿ

ಮಯನ್ಮಾರ್ : ಏಸಿಯಾನ್-ಭಾರತ ಶೃಂಗ ಸಭೆಗೆ ಮಯನ್ಮಾರಿಗೆ ತೆರಳಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಮಯನ್ಮಾರಿನ ವಿರೋಧ ಪಕ್ಷದ ನಾಯಕಿ, ಪ್ರಜಾಪ್ರಭುತ್ವ ಹೋರಾಟಗಾರ್ತಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸ್ಯಾನ್ ಸೂ ಕಿ ಅವರನ್ನು ಭೇಟಿ ಮಾಡಿದರು.

12 ನೇ ಭಾರತ-ಏಸಿಯಾನ್ ಶೃಂಗ ಸಭೆಯಲ್ಲಿ ವಿವಿಧ ವಿಶ್ವ ನಾಯಕರ ಜೊತೆ ಯಶಸ್ವಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಉಳಿದಿಕೊಂಡಿರುವ ಪಾರ್ಕ್ ರಾಯಲ್ ಹೋಟೆಲ್ ನಲ್ಲಿ ಆಂಗ್ ಸ್ಯಾನ್ ಸೂ ಕಿ ಅವರನ್ನು ಭೇಟಿಯಾದರು.

ಸೂ ಕಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಭಾರತ ಅವರಿಗೆ ಎರಡನೇ ಮನೆಯಿದ್ದಂತೆ ಎಂದು ತಿಳಿಸದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಯ ಅಧ್ಯಕ್ಷೆ ಮತ್ತು ಕಾರ್ಯದರ್ಶಿ ಆಗಿರುವ ಸೂ ಕಿ ಅವರನ್ನು 2015 ರ ಲೋಕಸಭಾ ಚುನಾವಣೆ ಎದುರಿಸಲು ಅವಕಾಶ ನೀಡಬೇಕೋ ಬೇಡವೋ ಎಂಬ ಚರ್ಚೆಯ ಮಧ್ಯದಲ್ಲಿ ಮಯನ್ಮಾರ್ ಇದೆ. ಮಯನ್ಮಾರಿನ ಸಂವಿಧಾನ ನೀಡುವ ಏರ್ಪಾಟಿನಲ್ಲಿ ಸದ್ಯಕ್ಕೆ ಅವರನ್ನು ಚುನಾವಣೆಯಲ್ಲಿ ಭಾಗವಹಿಸದಂತೆ ತಡೆಯೊಡ್ಡಲಾಗಿದೆ. ಸೂ ಕಿ ಯವರು ನವೆಂಬರ್ 2012 ರಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited