ಪಾಟ್ನಾ : 'ಬಿಹಾರ' ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ತಮ್ಮ ಅಳಿಯನನ್ನೇ ಖಾಸಗಿ ಸಹಾಯಕರಾಗಿ ನೇಮಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದಾರೆ.
ಸರ್ಕಾರಿ ನಿಯಮಗಳ ಪ್ರಕಾರ ಕುಟುಂಬ ಸದಸ್ಯರನ್ನು ಸರ್ಕಾರಿ ಕೆಲಸಗಳಿಗೆ ನೇಮಕ ಮಾಡಿಕೊಳ್ಳಬಾರದು. ಆದರೆ ನಿಯಮಗಳನ್ನು ಉಲ್ಲಂಘಿಸಿರುವ ಬಿಹಾರದ ಮುಖ್ಯಮಂತ್ರಿ, ತಮ್ಮ ಅಳಿಯ ದೇವೇಂದ್ರ ಕುಮಾರ್ ಅವರನ್ನು ಖಾಸಗಿ ಸಹಾಯಕರಾಗಿ ನೇಮಿಸಿಕೊಂಡಿದ್ದಾರೆ.
ಇದೇ ಅಲ್ಲದೆ, ಮಾಂಜಿ ಅವರು ತಮ್ಮ ಮತ್ತೊಬ್ಬ ಕುಟುಂಬದ ಸದಸ್ಯ ಸತ್ಯೇಂದ್ರ ಕುಮಾರ್ನನ್ನು ಜವಾನನಾಗಿ ನೇಮಕ ಮಾಡಿಕೊಂಡಿದ್ದಾರೆ. ಮಂತ್ರಿಗಳು ತಮ್ಮ ವೈಯಕ್ತಿಕ ಸಹಾಯಕರಾಗಿ ಸಂಬಂಧಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿತ್ತು. ಮೇ 23, 2000ರಿಂದ ಸಚಿವ ಸಂಪುಟ ಕಾರ್ಯದರ್ಶಿ ಇಲಾಖೆ ಈ ಆದೇಶ ಹೊರಡಿಸಿತ್ತು.