Untitled Document
Sign Up | Login    
Dynamic website and Portals
  
November 4, 2014

2015ರ ವೈಬ್ರೆಂಟ್ ಗುಜರಾತ್ ಗೆ ಅಮೆರಿಕಾ ಸಹಭಾಗಿತ್ವ

2015ರ ವೈಬ್ರೆಂಟ್ ಗುಜರಾತ್ ಗೆ ಅಮೆರಿಕಾ ಸಹಭಾಗಿತ್ವ

ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ವೈಂಬ್ರೆಟ್ ಗುಜರಾತ್ ಶೃಂಗಸಭೆಗೆ ಮತ್ತೊಂದು ರಾಷ್ಟ್ರದ ಸಹಭಾಗಿತ್ವ ದೊರೆತಿದೆ. 2015ರಿಂದ ಅಮೆರಿಕಾ ಕೂಡ ವೈಬ್ರೆಂಟ್ ಗುಜರಾತ್ ನಲ್ಲಿ ಸಹಭಾಗಿಯಾಗಲಿದೆ.

ಸೆ.26ರಂದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಅಮೆರಿಕಾ ಪ್ರವಾಸದ ನಂತರ ಅಮೆರಿಕಾ ವೈಬ್ರಂಟ್ ಗುಜರಾತ್ ಶೃಂಗಸಭೆಯ ಸಹಭಾಗಿತ್ವಕ್ಕೆ ಮುಂದಾಗಿದೆ. ವೈಂಬ್ರೆಟ್ ಗುಜರಾತ್ ಈವರೆಗೂ ಜಪಾನ್, ಕೆನಡಾ, ಯು.ಕೆ, ಹಾಲೆಂಡ್, ಆಸ್ಟ್ರೇಲಿಯಾ, ಸಿಂಗಪೂರ್, ದಕ್ಷಿಣ ಆಫ್ರಿಕಾ ಸೇರಿದಂತೆ 7 ರಾಷ್ಟ್ರಗಳ ಸಹಭಾಗಿತ್ವ ಹೊಂದಿದೆ. ಇದೀಗ 8ನೇ ರಾಷ್ಟ್ರದ ಸರದಿ ಅಮೆರಿಕಾದ್ದು.

2013ನೇ ಸಾಲಿನಲ್ಲಿ ನಡೆದಿದ್ದ ವೈಬ್ರೆಂಟ್ ಗುಜರಾತ್ ಗೆ ಸಹಭಾಗಿತ್ವ ವಹಿಸಿದ್ದು ಕೇವಲ 2 ದೇಶಗಳು ಮಾತ್ರ. ಆದರೆ ಒಂದೇ ವರ್ಷದಲ್ಲಿ 6 ದೇಶಗಳು ಸಹಭಾಗಿತ್ವ ವಹಿಸಿಕೊಳ್ಳಲು ಮುಂದಾಗಿವೆ. ಅಮೆರಿಕಾ ಹೊರತುಪಡಿಸಿ ಅನೇಕ ರಾಷ್ಟ್ರಗಳು ಲೋಕಸಭಾ ಚುನಾವಣೆಗೂ ಮುನ್ನ, ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಸಹಭಾಗಿತ್ವಕ್ಕೆ ಒಪ್ಪಿಗೆ ಸೂಚಿಸಿದ್ದವು. 2015ರಲ್ಲಿ ನಡೆಯಲಿರುವ ವೈಬ್ರೆಂಟ್ ಶೃಂಗಸಭೆಯಲ್ಲಿ 120ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಬಾರಿ ನಡೆಯಲಿರುವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗವಹಿಸಲಿದ್ದಾರೆ. ಇದೇ ವೇಳೆ ಅಮೆರಿಕಾ ಸಹಭಾಗಿತ್ವವನ್ನು ಸ್ಪಷ್ಟಪಡಿಸಿರುವ ಗುಜರಾತ್ ಸರ್ಕಾರದ ವಕ್ತಾರ ಸೌರಭ್ ಪಟೇಲ್, ಸಮಾರಂಭದಲ್ಲಿ ಅಮೆರಿಕಾ ನಿಯೋಗ ವಿಶೇಷ ವಿಚಾರಗೋಷ್ಠಿಯನ್ನು ಆಯೋಜಿಸಲಿದೆ ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited