Untitled Document
Sign Up | Login    
Dynamic website and Portals
  
November 3, 2014

ಭಾರತ ಸೂಪರ್ ಪವರ್ ಆಗಬೇಕಾದರೆ ಮೋದಿ ವಾಜಪೇಯಿ ಅವರನ್ನು ಅನುಸರಿಸಲಿ:ಪಿಡಿಪಿ

ಜಮ್ಮು-ಕಾಶ್ಮೀರ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಮ್ಮು-ಕಾಶ್ಮೀರದ ವಿಪಕ್ಷ ಪಿಡಿಪಿ ಮತ್ತೊಮ್ಮೆ ಉಪದೇಶ ನೀಡಿದೆ! ಭಾರತವನ್ನು ಸೂಪರ್ ಪವರ್ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿರುವ ಪಿಡಿಪಿ, ಭಾರತ ಸೂಪರ್ ಪವರ್ ಆಗಬೇಕಾದರೆ ಮೋದಿ ಅವರು ವಾಜಪೇಯಿ ಅವರ ದಾರಿ ಹಿಡಿಯಬೇಕು ಎಂದು ಹೇಳಿದೆ.

ವಿವಾದಗಳನ್ನು ಬಗೆಹರಿಸಿಕೊಳ್ಲಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿದ್ದರು. ಹಾಗೆಯೇ ಪ್ರಧಾನಿ ಮೋದಿ ಸಹ ಪಾಕ್ ನೊಂದಿಗೆ ಮಾತುಕತೆ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು, ಈ ಮೂಲಕ ವಾಜಪೇಯಿ ಅವರ ಹಾದಿಯಲ್ಲೇ ನಡೆದು ಭಾರತವನ್ನು ಸೂಪರ್ ಪವರ್ ರಾಷ್ಟ್ರವನ್ನಾಗಿಸಬೇಕು ಎಂದು ಪಿಡಿಪಿ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಯ್ಯೀದ್ ಹೇಳಿದ್ದಾರೆ.

1998ರಿಂದ ಪಕ್ಷ ಸ್ಥಾಪನೆಯಾದಾಗಿನಿಂದಲೂ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಎದುರಿಸಲು ಯಾರೂ ಸಿದ್ಧರಿರಲಿಲ್ಲ. ಆದರೆ ವಾಜಪೇಯಿ ಅವರು ನಿಷ್ಪಕ್ಷಪಾತ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದರಿಂದ ಅಭ್ಯರ್ಥಿಗಳು ಸ್ಪರ್ಧಿಸುವಂತಾಗಿದೆ. ಮೋದಿ ಅವರೂ ಸಹ ವಾಜಪೇಯಿ ಅವರ ಸೂತ್ರವನ್ನೇ ಅನುಸರಿಸಬೇಕೆಂದು ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited