ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಸಿಯಾಚಿನ್ ಗೆ ತೆರಳಲಿರುವ ಪ್ರಧಾನಿ ಮೋದಿ, ಯೋಧರನ್ನು ಭೇಟಿಯಾಗಲಿದ್ದಾರೆ.
ಈಗಾಗಲೇ ನವದೆಹಲಿಯಿಂದ ಪ್ರಧಾನಿ ಮೋದಿ ಸಿಯಾಚಿನ್ ಗೆ ತೆರಳಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣ ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ ಮೋದಿ, ಈ ಶುಭದಿನದಂದು ಯೋಧರನ್ನು ಭೇಟಿಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದ್ದಾರೆ.
ಸಿಯಾಚಿನ್ ನ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಅರಿವಿದೆ. ಮಾತೃ ಭೂಮಿ ರಕ್ಷಣೆಗಾಗಿ ಯೋಧರು ದುಡಿಯುತ್ತಿದ್ದಾರೆ. ದೇಶದ ಜನತೆಯ ಸಂದೇಶವನ್ನು ಯೋಧರಿಗೆ ತಿಳಿಸುತ್ತೇನೆ. ದೇಶದ ಜನತೆ ಯೋಧರ ಜತೆ ಸಧಾ ಇರುತ್ತಾರೆ ಎಂದು ತಿಳಿಸಿದ್ದಾರೆ.
ಸಿಯಾಚಿನ್ ಭೇಟಿ ಬಳಿಕ ಪ್ರಧಾನಿ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ಪ್ರವಾಹ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.