Untitled Document
Sign Up | Login    
Dynamic website and Portals
  
October 11, 2014

ವಿವಿಧ 16 ಪ್ರಶಸ್ತಿಗಳ ಆಯ್ಕೆಗಾಗಿ ಸಮಿತಿ ಪ್ರಕಟ

ಬೆಂಗಳೂರು : 2014 ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ನೀಡಲಾಗುವ ವಿವಿಧ 16 ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಹಾಗೂ ನಾಡು-ನುಡಿಗೆ ಅತ್ಯುತ್ತಮ ಕೊಡುಗೆ ನೀಡಿದ ಗಣ್ಯ ಸಾಹಿತಿ/ಕಲಾವಿದರು/ಗಣ್ಯರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದ್ದು, ಅಧ್ಯಕ್ಷರನ್ನೊಳಗೊಂಡಂತೆ 7 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

1. ಶಾಂತಲಾ ನಾಟ್ಯ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ವಸುಂಧರಾ ದೊರೆಸ್ವಾಮಿ ಅವರು ಅಧ್ಯಕ್ಷರಾಗಿದ್ದು ಕುದ್ಕಾಡಿ ವಿಶ್ವನಾಥ ರೈ, ಗೀತಾ ದಾತಾರ, ಶುಭಾಂಗಿ,ಬಿ. ಕುಮುದಿನಿ ರಾವ್ ಅವರು ಸದಸ್ಯರಾಗಿರುತ್ತಾರೆ. ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

2. ಬಸವ ಪುರಸ್ಕಾರ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ.ಪಿ.ವಿ.ನಾರಾಯಣ, ಅವರು ಅಧ್ಯಕ್ಷರಾಗಿದ್ದು ಡಾ.ಎಸ್. ವಿದ್ಯಾಶಂಕರ್, ಕೆ.ಎಸ್. ಭಗವಾನ್, ಡಾ. ಮ.ನ. ಜವರಯ್ಯ, ಶಿವಾನಂದ ಗಾಳಿ ಅವರು ಸದಸ್ಯರಾಗಿರುತ್ತಾರೆ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

3. ಬಿ.ವಿ. ಕಾರಂತ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ. ಕೆ. ಮರುಳಸಿದ್ದಪ್ಪ ಅಧ್ಯಕ್ಷರಾಗಿದ್ದು ಸುರೇಶ್ ಅನಗಳ್ಳಿ, ಆರುಂಧತಿ ನಾಗ್, ಪ್ರಭಾಕರ್ ಸಾತಖೇಡ ಹಾಗೂ ನಿರ್ದೇಶಕರು, ರಂಗಾಯಣ, ಮೈಸೂರು ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

4. ಜಾನಪದ ಶ್ರೀ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ ಬಾನಂದೂರು ಕೆಂಪಯ್ಯ ಅಧ್ಯಕ್ಷರಾಗಿದ್ದು ಡಾ. ಬಸವರಾಜ ಪೊಲೀಸ ಪಾಟೀಲ, ಮುದೇನೂರು ನಿಂಗಪ್ಪ, ಶಿಗ್ಗಾಂವಿ, ಕೆರೆಮನೆ ಶಿವಾನಂದ ಹೆಗಡೆ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

5. ನಿಜಗುಣ ಪುರಂದರ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಬಿ.ಎಸ್. ಮಠ ಅಧ್ಯಕ್ಷರಾಗಿದ್ದು ರಾಜಪ್ರಭು ಧೋತ್ರೆ, ಸಂಗೀತಾ ಕಟ್ಟಿ ಕುಲಕರ್ಣಿ, ನಾಗರಾಜ್ ಹವಾಲ್ದಾರ್, ಮೃತ್ಯುಂಜಯ ಅಗಡಿ, ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

6. ಸಂತ ಶಿಶುನಾಳ ಷರೀಫ್ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಎಸ್. ಸೋಮಸುಂದರಮ್ ಅಧ್ಯಕ್ಷರಾಗಿದ್ದು ಶಂಕರ ಶ್ಯಾನಭಾಗ್, ಚರಣ್ ಕುಮಾರ್, ಕೆ. ಯುವರಾಜ್ ಹಾಗೂ ಜಯದೇವಿ ಜಂಗಮಶೆಟ್ಟಿ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

7. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ. ಎಸ್. ಚಂದ್ರಶೇಖರ್ ಅಧ್ಯಕ್ಷರಾಗಿದ್ದು ಲಕ್ಷ್ಮಣ್ ತೆಲಗಾವಿ, ರಾ.ನಂ. ಚಂದ್ರಶೇಖರ್, ಸಿದ್ದನಗೌಡ ಪಾಟೀಲ, ಕೆ. ನೀಲಾ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

8. ಟಿ. ಚೌಡಯ್ಯ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಎಚ್. ಕೆ. ನರಸಿಂಹಮೂರ್ತಿ ಅಧ್ಯಕ್ಷರಾಗಿದ್ದು ಪಂಡಿತ್ ಆನೂರು ಅನಂತ ಕೃಷ್ಣಶರ್ಮ, ರಾಜೇಂದ್ರ ಸಿಂಗ್ ಪವಾರ್, ಶಿವಾನಂದ ಪಾಟೀಲ್ ಹಾಗೂ ಬಿ.ಕೆ. ಅನಂತರಾಂ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

9. ಜಕಣಾಚಾರಿ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಜಿ.ಬಿ. ಹಂಸಾನಂದಚಾರ್ಯ ಅವರು ಅಧ್ಯಕ್ಷರಾಗಿದ್ದು ವಿಶ್ವಕರ್ಮ ಆಚಾರ್ಯ, ಎಂ. ರಾಮಮೂರ್ತಿ, ಅಶೋಕ ಗುಡಿಗಾರ ಹಾಗೂ ವಿ.ಸೋಮಶೇಖರ್ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

10. ಕುಮಾರವ್ಯಾಸ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಮಾರ್ಕಂಡೇಯ ಅವಧಾನಿ ಅವರು ಅಧ್ಯಕ್ಷರಾಗಿದ್ದು, ಸುಮಾ ಪ್ರಸಾದ್, ಟಿ. ರಾಮಲಿಂಗಪ್ಪ ಬೇಗೂರು, ಡಾ. ಮೋಹನ ಕಲ್ಲೂರಾಯ ಮದೂರು, ಕಲ್ಯಾಣರಾವ್ ದೇಶಪಾಂಡೆ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

11. ಪಂಪ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ.ಬಿ.ಎ.ವಿವೇಕ ರೈ ಅವರು ಅಧ್ಯಕ್ಷರಾಗಿದ್ದು, ವಿಷ್ಣು ನಾಯಕ್, ಡಾ. ಕೆ. ಕೇಶವಶರ್ಮ, ಅಲ್ಲಮಪ್ರಭು ಬೆಟ್ಟದೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

12. ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಲಕ್ಷ್ಮೀಬಾಯಿ ಏಣಗಿ ಅವರು ಅಧ್ಯಕ್ಷರಾಗಿದ್ದು, ಪ್ರೇಮಾ ಗುಳೇದಗುಡ್ಡ, ಕಾಸರಗೋಡು ಚಿನ್ನ, ರಾಜಶೇಖರ ಕದಂಬ ಹಾಗೂ ಡಾ. ಸುಜಾ ಜಂಗಮಶೆಟ್ಟಿ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

13. ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಕುಂ. ವೀರಭದ್ರಪ್ಪ ಅವರು ಅಧ್ಯಕ್ಷರಾಗಿದ್ದು, ಪಾರ್ವತಿ ಐತಾಳ, ಡಾ. ಪ್ರಭು ಖಾನಪುರೆ, ಬಿ.ಬಿ. ಪೂಜಾರ, ಹಾಗೂ ಪ್ರೊ. ಸಿದ್ಧರಾಮಪ್ಪ ಮಾಸಿಮಾಡೆ ಅವರು ಸದಸ್ಯರಾಗಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

14. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಯು. ಭಾಸ್ಕರ ರಾವ್ ಅವರು ಅಧ್ಯಕ್ಷರಾಗಿದ್ದು ಬಿ.ಕೆ. ಹಿರೇಮಠ, ಕೆ.ವಿ. ಸುಬ್ರಹ್ಮಣ್ಯ, ಭವಾನಿ ಹಾಗೂ ಸಿ.ಡಿ. ಜಟ್ಟಣವರ್ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

15. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಬಿ.ಎನ್. ಸುಮಿತ್ರಾಬಾಯಿ ಅವರು ಅಧ್ಯಕ್ಷರಾಗಿದ್ದು ಡಾ. ಶಕುಂತಲಾ ದುರ್ಗೆ, ಡಾ. ಎಸ್.ಪಿ. ರೇಖಾ, ಡಾ. ಸವಿತಾ ನಾಗಭೂಷಣ್ ಅವರು ಸದಸ್ಯರಾಗಿರುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

16. ಕನಕಶ್ರೀ ಪ್ರಶಸ್ತಿ:
ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ ಅವರು ಅಧ್ಯಕ್ಷರಾಗಿದ್ದು ಡಾ.ಬಸವರಾಜ ಸಬರದ, ಡಾ. ಸುರೇಶ್ ನಾಗಲಮಡಕಿ, ಡಾ.ಶೀಲಾದಾಸ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited