Untitled Document
Sign Up | Login    
Dynamic website and Portals
  
October 7, 2014

ಸರ್ಕಾರಿ ನೌಕರರ ಸಮಯ ಪಾಲನೆ ಬಗ್ಗೆ ಗಮನವಿಡಲು ಮೋದಿ ಸರ್ಕಾರದಿಂದ ವೆಬ್ ಸೈಟ್ ಗೆ ಚಾಲನೆ

attendance.gov.in ವೆಬ್ ಸೈಟ್ attendance.gov.in ವೆಬ್ ಸೈಟ್

ನವದೆಹಲಿ : ಸರ್ಕಾರಿ ಅಧಿಕಾರಿಗಳ ಹಾಜರಾತಿ ಹಾಗೂ ಸಮಯ ಪಾಲನೆ ಬಗ್ಗೆ ಗಮನವಿಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಹೊಸ ವೆಬ್ ಸೈಟ್ ಗೆ ಚಾಲನೆ ನೀಡಿದೆ. attendance.gov.in ವೆಬ್ ಸೈಟ್ ಮೂಲಕ ಸರ್ಕಾರಿ ಅಧಿಕಾರಿಗಳ ಹಾಜರಾತಿ ಬಗ್ಗೆ ಸರ್ಕಾರ ಹದ್ದಿನ ಕಣ್ಣಿಡಲಿದೆ.

ಸರ್ಕಾರ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಯುಐಡಿಎಐ ಬಳಸುವ ಮೂಲಕ ಸರ್ಕಾರಿ ನೌಕರರ ಕಚೇರಿ ಕಾಲಾವಧಿಯ ಮೇಲೆ ನಿಗಾ ವಹಿಸಲಿದೆ. ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಹೊಸ ವ್ಯವಸ್ಥೆಯಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ವಿವಿಧ ಇಲಾಖೆಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.

ನೂತನ ಸರ್ಕಾರ ಅಸ್ಥಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಸರ್ಕಾರಿ ನೌಕರರು ಕೆಲಸಗಳಲ್ಲಿ ತೋರುತ್ತಿದ್ದ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿ ಸಚಿವರ ಗಮನಕ್ಕೆ ಬಂದಿತ್ತು. ಮಾಹಿತಿ ಮತ್ತು ಪ್ರಸಾರ ಇಲಾಖೆ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಕಚೇರಿಗೆ ದಿಢೀರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಚೇರಿಯಲ್ಲಿನ ಖಾಲಿ ಖುರ್ಚಿಗಳನ್ನು ನೋಡಿ ದಂಗಾಗಿದ್ದರು.

ಸರ್ಕಾರಿ ಅಧಿಕಾರಿಗಳು ನಿಗದಿತ ಸಮಯಕ್ಕೆ ಆಗಮಿಸದೇ ಇರುವುದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರ ಗಮನಕ್ಕೂ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಮಯ ಪಾಲನೆ ಬಗ್ಗೆ ಗಮನ ಹರಿಸಲು ಮೋದಿ ಸರ್ಕಾರ ಪ್ರತ್ಯೇಕ ವೆಬ್ ಸೈಟ್ ಗೆ ಚಾಲನೆ ನೀಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited