ತಿರುವನಂತಪುರ : ಹಿರಿಯ ಗಾಯಕ ಕೆ.ಜೆ ಯೇಸುದಾಸ್ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.
ಮಹಿಳೆಯರು ಜೀನ್ಸ್ ಧರಿಸಬಾರದು ಎಂದು ಯೇಸುದಾಸ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಹಿಳಾ ಆಯೋಗದ ಸದಸ್ಯರು ಹಿರಿಯ ಗಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಯೇಸುದಾಸ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ, ಯೇಸುದಾಸ್ರಂಥ ವ್ಯಕ್ತಿಗಳು ಅಂಥ ಹೇಳಿಕೆ ನೀಡಿದ್ದು ಸರಿಯಲ್ಲ. ಅದು ಅವರ ವೈಯಕ್ತಿಕ ನಿಲುವೇ ಆಗಿರಬಹುದು. ಕಾನೂನು ಬದ್ಧವಾಗಿ ಯೇಸುದಾಸ್ ಹೇಳಿಕೆಯಲ್ಲಿ ಆಕ್ಷೇಪ ಇರದಿದ್ದರೂ ನೈತಿಕವಾಗಿ ಸರಿಯಲ್ಲ ಎಂದು ಅವರು ಹೇಳಿದ್ದಾರೆ.