Untitled Document
Sign Up | Login    
Dynamic website and Portals
  
September 17, 2014

ಕತ್ತೆಗಳು ರಾಜ್ಯ ಒಡೆಯುವ ಕನಸು ಕಾಣುತ್ತಿವೆ: ಪಾಪು

ನಾಡೋಜ ಪಾಟೀಲ್ ಪುಟ್ಟಪ್ಪ ನಾಡೋಜ ಪಾಟೀಲ್ ಪುಟ್ಟಪ್ಪ

ಧಾರವಾಡ : 'ಉತ್ತರ ಕರ್ನಾಟಕ'ವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಬೇಡಿಕೆ ಮುಂದಿಟ್ಟಿರುವ ಮಾಜಿ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸಾಹಿತಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಾಡೋಜ ಪಾಟಿಲ್ ಪುಟ್ಟಪ್ಪ ಕೆಲವು ಕತ್ತೆಗಳು ರಾಜ್ಯ ಒಡೆಯುವ ಕನಸು ಕಾಣುತ್ತಿವೆ ಆದರೆ ಎಂದಿಗೂ ರಾಜ್ಯ ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿರುವ ಪಾಟೀಲ್ ಪುಟ್ಟಪ್ಪ, ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎಂದು ಹೇಳುತ್ತಿರುವ ಕತ್ತಿ ಅವರು, ಸಚಿವರಾಗಿದ್ದಾಗ ಆ ಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಲು ಪ್ರತ್ಯೇಕ ರಾಜ್ಯ ಬೇಕೆ ಎಂದು ಉಮೇಶ್ ಕತ್ತಿ ಅವರನ್ನು ಪ್ರಶ್ನಿಸಿದ್ದಾರೆ.

ಉಮೇಶ್ ಕತ್ತಿ ಹುಚ್ಚಿಗೋಸ್ಕರ ರಾಜ್ಯವನ್ನು ಒಡೆಯುವ ಅಗತ್ಯವಿಲ್ಲ. ಕತ್ತಿ ಕತ್ತೆಯಾಗಿಯೇ ಉಳಿದಿದ್ದಾರೆ. ಅವರ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಪಾಟೀಲ್ ಪುಟ್ಟಪ್ಪ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ರಾಜ್ಯ ವಿಭಜನೆಯ ಮಾತನ್ನಾಡಿರುವ ಉಮೇಶ್ ಕತ್ತಿ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited