ನವದೆಹಲಿ : ಪೆಟ್ರೋಲ್ ಬೆಲೆ ಸತತ 3ನೇ ಬಾರಿಗೆ ಇಳಿಕೆ ಕಂಡಿದೆ. ಆ.30ರಂದು ಮಧ್ಯರಾತ್ರಿಯಿಂದಲೇ ಪೆಟ್ರೋಲ್ ದರ ಲೀಟರ್ ಗೆ 1.82ರೂ ಇಳಿಕೆಯಾಗುವ ಮೂಲಕ ಪರಿಷ್ಕೃತ ದರ ಜಾರಿಯಾಗಿದೆ.
ಕರ್ನಾಟಕದಲ್ಲಿ ಸ್ಥಳೀಯ ತೆರಿಗೆ ಸೇರಿ ಅಂದಾಜು 2ರಿಂದ 2.10ರೂ ಇಳಿಕೆಯಾಗಿದೆ. ಆದರೆ ಡಿಸೆಲ್ 50ಪೈಸೆ ಏರಿಕೆಯಾಗಿದೆ.
ಆಗಸ್ಟ್ ತಿಂಗಳೊಂದರಲ್ಲೇ ಪೆಟ್ರೋಲ್ ಬೆಲೆ 3ನೇ ಬಾರಿಗೆ ಇಳಿಕೆಯಾಗಿದ್ದು, ಈ ಮೂಲಕ ಒಟ್ಟಾರೆ 5ರೂ ನಷ್ಟು ಪೆಟ್ರೋಲ್ ಬೆಲೆ ಕಡಿಮೆಯಾದಂತಾಗಿದೆ.
ತಿಂಗಳ ಹಿಂದೆ ಬೆಂಗಳೂರಿನಲ್ಲಿ 80-81ರೂ ನಷ್ಟಿದ್ದ ಪೆಟ್ರೋಲ್ ದರ ಇದೀಗ 75ರೂ ನಷ್ಟಾಗಿದೆ.