Untitled Document
Sign Up | Login    
Dynamic website and Portals
  
August 27, 2014

ಪ್ರಧಾನಿ ಮೋದಿ ಮುಸ್ಲಿಂ ವಿರೋಧಿ: ಪಾಕ್ ಮಾಜಿ ಅಧ್ಯಕ್ಷ ಮುಷರಫ್

ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್

ಇಸ್ಲಾಮಾಬಾದ್ : ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಹಾಗೂ ಪಾಕಿಸ್ತಾನ ವಿರೋಧಿ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪರ್ವೇಜ್ ಮುಷರಫ್ ಆರೋಪಿಸಿದ್ದಾರೆ.

ರಾಷ್ಟ್ರದ್ರೋಹಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಎದುರಿಸುತ್ತಿರುವ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರವೇಜ್ ಮುಷರಫ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನುಚಿತ ಭಾಷೆಯಿಂದ ನಿಂದಿಸಿದ್ದು ಮೋದಿ ನೀತಿ ಪಾಕಿಸ್ತಾನ ಹಾಗೂ ಮುಸ್ಲಿಮರ ವಿರುದ್ಧವಾಗಿದೆ ಎಂದು ಪಾಕಿಸ್ತಾನ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಭಾರತದಲ್ಲಿ ಅಸ್ಥಿತ್ವಕ್ಕೆ ಬಂದಿರುವ ನೂತನ ಸರ್ಕಾರದ ಕಾರ್ಯವೈಖರಿಯಿಂದ ಮೋದಿ ಮುಸ್ಲಿಂ ವಿರೋಧಿ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ ಎಂದು ಮುಷರಫ್ ಹೇಳಿದ್ದಾರೆ.

ಭಾರತದ ಪ್ರಧಾನಿಗೆ ಭಯಪಡುವ ಅಗತ್ಯವಿಲ್ಲ, ಪಾಕಿಸ್ತಾನ ಸಹ ಅಣುಶಕ್ತಿ ಹೊಂದಿರುವ ರಾಷ್ಟ್ರವಾಗಿದೆ. ನರೇಂದ್ರ ಮೋದಿ ಸರ್ಕಾರ ಪಾಲಿಸ್ತಾನದ ವಿರುದ್ಧ ಅಥವಾ ಮುಸ್ಲಿಮರ ವಿರುದ್ಧ ಮಾತನಾಡಿದರೆ ತಕ್ಕ ಉತ್ತರ ನೀಡಲು ಸಾಮರ್ಥ್ಯವಿದೆ. ಪಾಕಿಸ್ತಾನ ಸರ್ಕಾರ ಭಾರತದ ಮುಂದೆ ತಲೆ ಬಾಗಿಸುವುದನ್ನು ಬಿಡಬೇಕು ಎಂದು ಮುಷರಫ್ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಶಾಂತಿಯಿಂದ ಬದುಕಲು ಇಚ್ಛಿಸುತ್ತದೆ. ಭಾರತದ ಪ್ರಧಾನಿ ನಮ್ಮೊಂದಿಗೆ ಹೇಗೆ ಬೇಕಾದರೂ ವರ್ತಿಸಬಹುದು ಎಂದು ತಪ್ಪು ತಿಳಿಯಬಾರದೆಂದು ಮುಷರಫ್ ಎಚ್ಚರಿಸಿದ್ದಾರೆ. ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದಕ್ಕೆ ಭಾರತ ಸರ್ಕಾರ ಪಾಕ್ ರಾಯಭಾರಿಯೊಂದಿಗೆ ದಿಪಕ್ಷೀಯ ಮಾತುಕತೆ ರದ್ದು ಮಾಡಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited