Untitled Document
Sign Up | Login    
ಅಮೆರಿಕದಲ್ಲಿ ಭಾರತದ ವೇದ ವಿದ್ಯಾರ್ಥಿಗಳು ಕಣ್ಮರೆ....

ವೇದಿಕ್ ಸೆಂಟರ್

ಅಮೆರಿಕಾದಲ್ಲಿ ವೇದಾಧ್ಯಯನಕ್ಕಾಗಿ ಹೋಗಿದ್ದ ಹಲವು ವಿದ್ಯರ್ಥಿಗಳು ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂಬ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ. ಮಹರ್ಷಿ ಮಹೇಶ ಯೋಗಿ ಅವರ ವೇದ ಕೇಂದ್ರದಲ್ಲಿ ವೇದಾಧ್ಯಯನಕ್ಕೆ ಭಾರತದಿಂದ ಆಗಮಿಸಿದ್ದ ವಿದ್ಯಾರ್ಥಿಗಳಲ್ಲಿ ಹಲವರು ನಾಪತ್ತೆಯಾಗಿದ್ದಾರೆ.

ಕಳೆದ 12 ತಿಂಗಳಲ್ಲಿ 163 ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ. ಇವರು ನಾಪತ್ತೆಯಾಗಲು ಕಾರಣವೇನು? ಎಲ್ಲಿ ಹೋದರು ಎಂಬುದು ಈವರಗೆ ಯಾರಿಗೂ ಗೊತ್ತಿಲ್ಲ ಎಂಬುದು ಚಕಿತಗೊಳ್ಳುವ ವಿಚಾರವಾಗಿದೆ. ವೇದ ವಿದ್ಯಾರ್ಥಿಗಳ ನಾಪತ್ತೆ ಬಗ್ಗೆ ಷಿಕಾಗೋ ಮೂಲದ ಭಾರತೀಯ ಸಮುದಾಯದವರ ವಾರಪತ್ರಿಕೆ ’ಹೈ ಇಂಡಿಯಾ’ವರದಿ ಮಾಡಿದೆ.

ಮಹರ್ಷಿ ಮಹೇಶ್ ಯೋಗಿ ಸ್ಥಾಪಿತ ವೇದಿಕ್ ಸೆಂಟರ್ ಮತ್ತು ಮಹರ್ಷಿ ಯುನಿವರ್ಸಿಟಿ ಮ್ಯಾನೇಜ್ ಮೆಂಟ್ ಸಂಸ್ಥೆಗಳಿಗೂ ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಕುರಿತು ಮಾಹಿತಿ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಅಮೆರಿಕ ಫೇರ್ ಫೀಲ್ಡ್ ನಗರದ ಅಯೋವಾದಲ್ಲಿರುವ ವೇದಿಕ್ ಸೆಂಟರ್ ಗೆ ಕರೆಸಿಕೊಂಡ 1050 ವಿದ್ಯಾರ್ಥಿಗಳಲ್ಲಿ 19ರ ವರ್ಷದ 163 ವಿದ್ಯಾರ್ಥಿಗಳು 2013ರಲ್ಲಿ ಕಾಣೆಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಹರ್ಷಿ ಮಹೇಶ್ ಯೋಗಿ ಸ್ಥಾಪಿತ ಮತ್ತೊಂದು ಸಂಸ್ಥೆ ಗ್ಲೋಬಲ್ ಕಂಟ್ರಿ ಆಫ್ ವರ್ಡ್ ಪೀಸ್ ವ್ಯವಸ್ಥಾಪಕರು, ನಾಪತ್ತೆಯಾಗಿರುವವರು ಅಮೆರಿಕದಲ್ಲಿ ಭವ್ಯ ಬದುಕನ್ನು ಕಾಣುವ ಕನಸಿನಿಂದ ಕಣ್ಮರೆಯಾಗಿರಬಹುದು ಅಥವಾ ಅಮೆರಿಕದ ಬಿಗಿ ವಲಸೆ ಕಾನೂನಿನ ಕಾರಣಕ್ಕೆ ತಲೆತಪ್ಪಿಸಿಕೊಂಡು ಬದುಕುತ್ತಿರಬಹುದು ಎಂಬ ಉತ್ತರ ನೀಡಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಮಹರ್ಷಿ ಮಹೇಶ್ ಯೋಗಿ ಅವರಿಂದ ಸ್ಥಾಪನೆಗೊಂಡ ಫೇರ್ ಫೀಲ್ಡ್ ಕೌಂಟಿಯಲ್ಲಿ ವೇದಿಕ್ ಸೆಂಟರ್ ಹಾಗೂ ಮಹರ್ಷಿ ಯುನಿವರ್ಸಿಟಿ ಆಫ್ ಮ್ಯಾನೇಜ್ ಮೆಂಟ್ ನಿರ್ಮಾಣಗೊಂಡಿದೆ. ಭಾರತೀಯ ಧಾರ್ಮಿಕ ವಿಧಿ, ವಿಚಾರಗಳನ್ನು ಇಲ್ಲಿ ಕಲಿಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ 12ನೇ ತರಗತಿಯವೆಗೆ ಕಲಿಸಿ ಬಳಿಕ ಅವರಿಗೆ ವೇದಾಧ್ಯಯನ ಹೇಳಿಕೊಡಲಾಗುತ್ತದೆ. ಅಧ್ಯಯನ ಮುಗಿದು 10-15ವರ್ಷಗಳ ನಂತರ ವಿದ್ಯಾರ್ಥಿಗಳು ಸಂಸ್ಥೆಯೊಂದಿಗಿರುವುದೋ ಅಥವಾ ಸ್ವತಂತ್ರವಾಗಿ ಬದುಕುವುದೋ ಎಂಬ ವಿಚಾರವಾಗಿ ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದು.

 

Author : ವೇದಾ .

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited