Untitled Document
Sign Up | Login    
ಶ್ರೀಕೃಷ್ಣಜನ್ಮಾಷ್ಟಮಿಯ ಮಹತ್ವ


ಇಂದು ವಿಶ್ವದಾದ್ಯಂತ ಶ್ರೀಕೃಷ್ಣಾಷ್ಟಮಿಯನ್ನು ಆಚರಿಸುತ್ತಾರೆ. ಈ ಲೇಖನದಲ್ಲಿ ಶ್ರೀಕೃಷ್ಣಾಷ್ಟಮಿ ಎಂದರೇನು? ಶ್ರೀಕೃಷ್ಣನ ವಿವಿಧ ವೈಶಿಷ್ಠ್ಯಗಳು, ಇತರ ವಿಚಾರಗಳನ್ನು ತಿಳಿದುಕೊಳ್ಳೋಣ. ಯಾವಾಗ ಶ್ರೀಕೃಷ್ಣನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆಯೋ ಆಗ ಶ್ರೀಕೃಷ್ಣನ ಬಗ್ಗೆ ನಿಜವಾದ ಭಕ್ತಿ ಬಂದು ಅವನ ನಿಜವಾದ ರೀತಿ ಉಪಸಾನೆ ಮಾಡಲು ಸಾಧ್ಯವಾಗಬೇಕೆಂಬುದೇ ಈ ಲೇಖನದ ಉದ್ದೇಶ.

ಶ್ರೀಕೃಷ್ಣಷ್ಟಾಮಿ ಎಂದರೆ ಏನು?

ಈ ದಿನ ಶ್ರೀಕೃಷ್ಣಜನ್ಮಾಷ್ಟಮಿಯ ದಿನ ಶ್ರೀಕೃಷ್ಣ ತತ್ತ್ವವು ಬ್ರಹ್ಮಾಂಡ ಕಕ್ಷೆಯಲ್ಲಿ ಸಹಜ ಭಾವದಲ್ಲಿರುತ್ತದೆ. ಪರ ಬ್ರಹ್ಮನು ಈ ಬಾಲರೂಪವನ್ನು ಸಹಜ ಭಾವಾವಸ್ಥೆ ಯಲ್ಲಿ ಪ್ರಕಟಿಸಿ ಈ ಬ್ರಹ್ಮಾಂಡಕ್ಕೆ ನೀಲಿ ಕಣಗಳ ರೂಪದಲ್ಲಿ ಕೃಷ್ಣ ತತ್ತ್ವವನ್ನು ನೀಡಿ ಜೀವದಲ್ಲಿ ಭಕ್ತಿಯನ್ನು ಉಂಟು ಮಾಡುತ್ತಾನೆ.

ಕೃಷ್ಣಜನ್ಮಾಷ್ಟಮಿಯಂದು ಸಂಪೂರ್ಣ ಬ್ರಹ್ಮಾಂಡದಲ್ಲಿ ನೀಲಿ ಭಕ್ತಿರೂಪಿ ಕಣಗಳು ಹರಡಿರುತ್ತವೆ. ಈ ದಿನದಂದು ಕೃಷ್ಣನ ಸಹಜಾವಸ್ಥೆಯಲ್ಲಿರುವ ಈ ಬಾಲರೂಪವನ್ನು ಸ್ಮರಿಸುವುದರಿಂದ (ನಾಮವನ್ನು ಜಪಿಸುವುದ ರಿಂದ) ಜೀವದ ಸ್ಥೂಲ ಹಾಗೂ ಸೂಕ್ಷ್ಮ ದೇಹಗಳ ಶುದ್ಧೀಕರಣವಾಗಲು ಸಹಾಯವಾಗುತ್ತದೆ. ಶ್ರೀಕೃಷ್ಣ ತತ್ತ್ವವು ನಿರ್ಗುಣ, ನಿರಾಕಾರವಾಗಿರುವ ಭಕ್ತಿ ಭಾವಕ್ಕೆ ಸಂಬಂಧಿಸಿರುವುದರಿಂದ ಅದು ಎಲ್ಲ ದೇವತೆಗಳಿಗೆ ಇಷ್ಟವಾಗಿರುತ್ತದೆ. ಅಂದರೆ ಎಲ್ಲ ದೇವತೆಗಳು ಕೃಷ್ಣಭಕ್ತಿಯಿಂದ ಪ್ರಸನ್ನರಾಗಿ ಜೀವಗಳಿಗೆ ಅವಶ್ಯವಿರುವ ಆಯಾಯ ಭಾವವನ್ನು ಕಡಿಮೆ ಅವಧಿಯಲ್ಲಿ ಪ್ರಧಾನಿಸುತ್ತಾರೆ. ಈ ಕಾರಣಕ್ಕಾಗಿಯೇ ಕೃಷ್ಣಜನ್ಮಾಷ್ಟಮಿಗೆ ಅಗ್ರಗಣ್ಯ ಸ್ಥಾನವನ್ನು ನೀಡಲಾಗಿದೆ. ಶ್ರೀಕೃಷ್ಣನ ನಿರ್ಮಿತಿ ಬೀಜವನ್ನು ಸ್ಮರಿಸಿ ಅತ್ಯಧಿಕ ಲಾಭವನ್ನು ಪಡೆಯುವುದೆಂದರೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು.

ಶ್ರೀಕೃಷ್ಣ ಮತ್ತು ಅವನ ಕೆಲವು ವೈಶಿಷ್ಟ್ಯಗಳು:

ನವಿಲುಗರಿಯನ್ನು ಕೃಷ್ಣನ ಉಪಾಸನೆಗೆ ಯಾಕೇ ಉಪಯೋಗಿಸುತ್ತಾರೆ? ಅದರ ಮಹತ್ವ ಏನು?

ನವಿಲುಗರಿಯಲ್ಲಿ ನೀಲಿ ಬಣ್ಣದ ಪ್ರಾಬಲ್ಯವು ಹೆಚ್ಚಿರುತ್ತದೆ. ಈ ನೀಲಿ ಬಣ್ಣದ ಕಣಗಳಿಂದ ಸೂಕ್ಷ್ಮಬಣ್ಣದ ಲಹರಿಗಳು ಹೊರ ಬೀಳುತ್ತಿರುತ್ತವೆ. ಈ ಸೂಕ್ಷ್ಮ ಬಣ್ಣದ ಲಹರಿಗಳು ಬ್ರಹ್ಮಾಂಡದಲ್ಲಿನ ಕೃಷ್ಣತತ್ತ್ವದ ಲಹರಿಗಳನ್ನು ಗ್ರಹಣ ಮಾಡುತ್ತಿರುತ್ತವೆ. ಕೃಷ್ಣಲೋಕದಲ್ಲಿಯೂ ನೀಲಿ ಬಣ್ಣದ ಪ್ರಾಬಲ್ಯವು ಹೆಚ್ಚಿರುತ್ತದೆ. ನವಿಲುಗರಿಯ ಸಣ್ಣ ಸಣ್ಣ ಕೂದಲಿನಿಂದಲೂ ಕೃಷ್ಣತತ್ತ್ವವು ಹೊರ ಬೀಳುತ್ತಿರುತ್ತದೆ. ನವಿಲುಗರಿಯ ಮಧ್ಯ ಭಾಗದಲ್ಲಿರುವ ನೀಲಿ ಕಣ್ಣಿನಲ್ಲಿ ಕೃಷ್ಣತತ್ತ್ವವನ್ನು ಗ್ರಹಣ ಮಾಡುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿರುತ್ತದೆ.

ಶಂಖನಾದದಿಂದ ಶ್ರೀಕೃಷ್ಣತತ್ತ್ವವು ಕಾರ್ಯನಿರತವಾಗಿ ಕೆಟ್ಟ ಶಕ್ತಿಗಳು ದೂರ ಹೋಗುವುದು ಶಂಖದ ವಿಶಿಷ್ಟ ಆಕಾರದಿಂದಾಗಿ ಶಂಖನಾದದಿಂದ ನಿರ್ಮಾಣವಾಗುವ ಸೂಕ್ಷ್ಮಲಹರಿಗಳಲ್ಲಿ, ಕೆಟ್ಟ ಶಕ್ತಿಗಳನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆ ಇರುತ್ತದೆ. ಶಂಖನಾದದ ಉಪಯೋಗವು ಗಣಪತಿಯ ಪಾಶದಂತೆ ಆಗುತ್ತದೆ. ಶಂಖನಾದದಿಂದ ಕೃಷ್ಣತತ್ತ್ವವು ಕಾರ್ಯನಿರತವಾಗುವುದರಿಂದ ಕೆಟ್ಟ ಶಕ್ತಿಗಳಿಗೆ ತುಂಬ ತೊಂದರೆ ಆಗುತ್ತದೆ. ಶಂಖಲಹರಿಗಳಲ್ಲಿ ಬ್ರಹ್ಮಾಂಡ ದಲ್ಲಿನ ಕೃಷ್ಣತತ್ತ್ವವನ್ನು ಸೆಳೆದುಕೊಳ್ಳುವ ಕ್ಷಮತೆ ಇರುತ್ತದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಪವಾಸವನ್ನೇಕೆ ಮಾಡಬೇಕು?
ನಾನು ಜನಿಸುವ ಮೊದಲು ಕಂಸನು ಎಲ್ಲೆಡೆ ಹಾಹಾಕಾರ ಎಬ್ಬಿಸಿದ್ದನು. ಕಂಸನು ನನ್ನ ತಾಯಿಗೆ (ದೇವಕಿಗೆ) ಆಹಾರ ನೀಡದಿದ್ದುದರಿಂದ ಅವಳು ಉಪವಾಸ ಮಾಡಬೇಕಾಯಿತು. ಈ ರೀತಿ ಪರೋಕ್ಷ ಉಪವಾಸದಿಂದ ಅವಳಿಗೆ ಪುತ್ರಲಾಭದೊಂದಿಗೆ (ನನ್ನ ಜನ್ಮ) ಮುಕ್ತಿಯೂ ಲಭಿಸಿತು.

ಭಾವಪೂರ್ಣ ಉಪವಾಸದ ಲಾಭಗಳು:

1.ಕಲಿಯುಗದಲ್ಲಿನ ಹಾಹಾಕಾರವು ಮುಗಿದು ಎಲ್ಲೆಡೆ ಈಶ್ವರೀ ಚೈತನ್ಯ ನಿರ್ಮಾಣ ವಾಗಬೇಕು ಎಂಬ ಭಾವದಿಂದ ಉಪವಾಸ ಮಾಡಿದರೆ ಶೇ.25ರಷ್ಟು ಫಲ ಸಿಗುವುದು.
2.ಜೀವಕ್ಕೆ ಸಾಧನೆಯಲ್ಲಿ ಬರುವ ಅಡಚಣೆಗಳು ದೂರವಾಗಿ ಅವಶ್ಯಕತೆಯಂತೆ ಪ್ರಗತಿಯಾಗುವುದು.
3.ಸ್ಥೂಲದೇಹವು ಸ್ಥೂಲ ವಿಷಯ ದಲ್ಲಿ ಸಿಲುಕಿಕೊಳ್ಳದೇ ಮುಂದಿನ ಹಂತಕ್ಕೆ ಹೋಗುವುದು.
4.ನನ್ನ ತತ್ತ್ವಲಹರಿಗಳು (ಶ್ರೀಕೃಷ್ಣ ಲಹರಿ) ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತ ವಾಗಿ ಅವು ಉಪವಾಸದ ನಿಮಿತ್ತ ಜೀವದ ಕಡೆಗೆ ಶೇ.2೦ರಷ್ಟು ಆಕರ್ಷಿಸಲ್ಪಡುತ್ತವೆ.

ಗೋಪಾಳಕಾಲಾ (ಮೊಸರು ಕುಡಿಕೆ)

ಗೋಪಾಳಕಾಲಾದ ದಿವ್ಯ ರುಚಿ: ಅವಲಕ್ಕಿ, ಮೊಸರು, ಹಾಲು, ಮಜ್ಜಿಗೆ, ಬೆಣ್ಣೆ ಇವೆಲ್ಲ ಪದಾರ್ಥ ಗಳನ್ನು ಮಿಶ್ರಣ ಮಾಡಿ ಸ್ವೀಕರಿಸಿದರೆ ಅದರ ರುಚಿಯು ಅವರ್ಣನೀಯವಾಗಿದ್ದು ಅತ್ಯಂತ ದಿವ್ಯವಾಗಿರುತ್ತದೆ.

ಮೊಸರು ಕುಡಿಕೆಯನ್ನು ಒಡೆಯುವುದು: ಮೊಸರು ಕುಡಿಕೆಯು ಜೀವದ ಪ್ರತೀಕವಾಗಿದೆ. ಮೊಸರು ಕುಡಿಕೆಯನ್ನು ಒಡೆಯುವುದೆಂದರೆ ಜೀವವು ದೇಹಬುದ್ಧಿಯನ್ನು ಬಿಟ್ಟು ಆತ್ಮಬುದ್ಧಿಯಲ್ಲಿ ಸ್ಥಿರವಾಗುವುದು ಮತ್ತು ದಿವ್ಯರುಚಿಯಿಂದ ಆನಂದದ ಅನುಭೂತಿಯನ್ನು ಪಡೆಯುವುದು.
ಗೋವಿಂದನು ಎಲ್ಲರಿಗೂ ಆನಂದದ ಅನುಭೂತಿಯನ್ನು ನೀಡಿದನು: ಪ್ರವೃತ್ತಿ ಹಾಗೂ ನಿವೃತ್ತಿ ಮಾರ್ಗಿಗಳಿಗೂ ಈಶ್ವರನೇ ಆನಂದ ನೀಡುತ್ತಾನೆ. ಅವನ ಸತ್ಸಂಗದಿಂದ ಸಮಾಜಕ್ಕೂ ಆನಂದದ ಅನುಭೂತಿ ಬರುತ್ತದೆ.

ಮೊಸರು ಕುಡಿಕೆಯಲ್ಲಿನ ಮುಖ್ಯ ಘಟಕಗಳು: ಅವಲಕ್ಕಿ, ಮೊಸರು, ಹಾಲು, ಮಜ್ಜಿಗೆ ಮತ್ತು ಬೆಣ್ಣೆ ಇವು ಆಯಾಯ ಸ್ತರದ ಭಕ್ತಿಯ ಪ್ರತೀಕವಾಗಿವೆ.
ಮಜ್ಜಿಗೆ:ಗೋಪಿಯರ ವಿರೋಧ ಭಕ್ತಿಯ ಪ್ರತೀಕ.
ಬೆಣ್ಣೆ: ಎಲ್ಲರಿಗೆ ಕೃಷ್ಣನ ಮೇಲಿದ್ದ ಅಪಾರ ಪ್ರೇಮದ ನಿರ್ಗುಣಭಕ್ತಿಯ ಪ್ರತೀಕ.

ಧರ್ಮಪ್ರಿಯರೇ, ಮೊಸರು ಕುಡಿಕೆಯ ಉತ್ಸವವನ್ನು ಮನೋರಂಜನಾ ಕಾರ್ಯಕ್ರಮವನ್ನಾಗಿಸಬೇಡಿ!

ಗೋಕುಲಾಷ್ಟಮಿ ಉತ್ಸವದ ಧಾರ್ಮಿಕ ಮಹತ್ವವು ಲೋಪವಾಗಿ ಅದಕ್ಕೆ ಮನೋರಂಜನೆಯ ವಿಕೃತ ಸ್ವರೂಪ ಬಂದಿದೆ. ಇದರ ನಿಮಿತ್ತ ಸಂಘಟಿತರಾಗುವ ಯುವಕರು ತಮ್ಮ ಉದ್ದೇಶವನ್ನು ಮರೆತು ಈಗ ರಾಜಕೀಯ ಲಾಭಕ್ಕಾಗಿ ಮೊಸರು ಕುಡಿಕೆಗಳನ್ನು ಆಯೋಜಿಸುತ್ತಾರೆ. ದೊಡ್ಡ ಮೊತ್ತದ ಲೋಭದಿಂದಾಗಿ ಆಕಾಶದಷ್ಟು ಎತ್ತರದಲ್ಲಿನ ಮೊಸರು ಕುಡಿಕೆಗಳನ್ನು ಕಟ್ಟಿ ಜೀವ ತೆಗೆದುಕೊಳ್ಳುವಂತಹ ಸ್ಪರ್ಧೆಗಳನ್ನು ಆಯೋಜಿಸ ಲಾಗುತ್ತದೆ. ಈ ಸಂದರ್ಭದಲ್ಲಿ ಭಾರಿಸಲಾಗುವ ಕರ್ಣಕರ್ಕಶ ವಾದ್ಯ ಗಳಿಂದಾಗಿ ಆ ಪರಿಸರವೆಲ್ಲ ಜಾತ್ರೆಯ ಸ್ವರೂಪವನ್ನು ಪಡೆದಿರುತ್ತದೆ. ಅಲ್ಲಿ ನಡೆಯುವ ವಿವಿಧ ರೀತಿಯ ತಪ್ಪು ಕೃತಿಗಳು, ಜನದಟ್ಟಣೆಯಿಂದಾಗಿ ವಾಹನ ಸಂಚಾರದಲ್ಲಿ ಉಂಟಾಗುವ ಅಡಚಣೆ ಇತ್ಯಾದಿಗಳಿಂದಾಗಿ ಉತ್ಸವಕ್ಕೆ ವಿಕೃತ ಸ್ವರೂಪ ಬಂದಿರುತ್ತದೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿ ಹಬ್ಬಗಳಲ್ಲಿ ನಿರ್ಮಾಣವಾದ ಇಂತಹ ವಿಕೃತಿಗಳಿಗೆ ಎಲ್ಲಿಯೂ ಆಧಾರವಿಲ್ಲ. ಇದರಿಂದ ನಾವು ನಮ್ಮ ಸ್ವಂತದ ಹಾನಿಯನ್ನೂ ಮಾಡಿಕೊಳ್ಳುತ್ತೇವೆ, ಅಲ್ಲದೆ ವಿಶ್ವವ್ಯಾಪಿ ಹಿಂದೂ ಧರ್ಮದ ಅವಮಾನವಾಗುತ್ತದೆ.

ಓದುಗರಿಗೆ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು.

 

Author : - ಸಂಗ್ರಹ: ಮೋಹನ ಗೌಡ

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited