ಹನೋಯಿ : ಮೂರುದಿನಗಳ ವಿಯೆಟ್ನಾಂ, ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲಿಗೆ ವಿಯೆಟ್ನಾಂ ಗೆ ಭೇಟಿ ನೀಡಿದ್ದು, ಹನೋಯಿಯ ರಾಷ್ಟ್ರಾಧ್ಯಕ್ಷರ ನಿವಾಸದಲ್ಲಿ ಪ್ರಧಾನಿಗೆ ಸ್ವಾಗತ ಕೋರಲಾಯಿತು.
ವಿಯೆಟ್ನಾಂ ತಲುಪುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹನೋಯಿಯ ರಾಷ್ಟ್ರಾಧ್ಯಕ್ಷರ ಅಧಿಕೃತ ನಿವಾಸದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿ- ವಿಯೆಟ್ನಾಯಂ ಅಧ್ಯಕ್ಷರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಹಿತು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ವಿಯೆಟ್ನಾಯಂ ನೊಂದಿಗೆ ರಕ್ಷಣಾ ಕ್ಷೇತ್ರ, ಆರೋಗ್ಯ ಸೇರಿದಂತೆ 12 ಮಹತ್ವದ ಒಪ್ಪಂದಗಳಿಗೆ ಸಹಿಹಾಕಿದ್ದಾರೆ.
ದ್ವಿಪಕ್ಷೀಯ ಮಾತುಕತೆಗೂ ಮುನ್ನ ವಿಯೆಟ್ನಾಯಂ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನಪ್ರಿಯ ನಾಯಕ ಹೊ ಚಿ ಮಿನ್ಹ್ ಗೆ ಗೌರವ ಅರ್ಪಿಸಿದ್ದಾರೆ. 15 ವರ್ಷಗಳ ಬಳಿಕ ವಿಯೆಟ್ನಾಯಂ ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ.