Untitled Document
Sign Up | Login    
Dynamic website and Portals
  
March 18, 2016

ಕರ್ನಾಟಕ ಬಜೆಟ್ 2016-17: ಬಜೆಟ್ ಗಾತ್ರ 1,63,419 ಕೋಟಿ ರೂ

ಕರ್ನಾಟಕ ಬಜೆಟ್ 2016-17: ಬಜೆಟ್ ಗಾತ್ರ 1,63,419 ಕೋಟಿ ರೂ

ಬೆಂಗಳೂರು : ಮುಖ್ಯಮಂತ್ರಿಯಾಗಿ ನಾಲ್ಕನೇ ಹಾಗೂ ಹಣಕಾಸು ಸಚಿವರಾಗಿ 11ನೇ ಬಜೆಟ್​ನ ಮಂಡನೆಯನ್ನು ಸಿ ಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದರು. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಕವನವೊಂದನ್ನು ಹೇಳಿ, ಬಜೆಟ್ ಭಾಷಣವನ್ನು ಪ್ರಾರಂಭಿಸಿದರು.

ಬಜೆಟ್ ನ ಪ್ರಮುಖಾಂದಗಳು ಃ

* 2016-17ನೇ ಸಾಲಿನ ಬಜೆಟ್ ಗಾತ್ರ 1,63,419 ಕೋಟಿ ರೂ

* ಕಲಬುರ್ಗಿಯಲ್ಲಿ 1320 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ಸ್ಥಾಪನೆಗೆ ಬಿಡ್

* ಸುವರ್ಣ ಕೃಷಿ ಗ್ರಾಮ ಯೋಜನೆ ಆರಂಭ, 100 ಮಾದರಿ ಕೃಷಿ ಗ್ರಾಮಗಳ ಅಭಿವೃದ್ಧಿಗೆ ಯೋಜನೆ

* ಕೃಷಿ ಇಲಾಖೆಗೆ 4,344 ಕೋಟಿ ರೂ. ಅನುದಾನ

* ಹನಿ ನೀರಾವರಿಗೆ ಪ್ರೋತ್ಸಾಹ ನೀಡಲು, 1 ಲಕ್ಷ ರೈತರಿಗೆ ಶೇ. ೯೦ ರಷ್ಠು ಸಬ್ಸಿಡಿ

* ಕೃಷಿಕರಿಗೆ ಹವಾಮಾನ ಮುನ್ಸೂಚನೆ ನೀಡುವ ಯೋಜನೆಗೆ 3 ಕೋಟಿ ರೂ. ಅನುದಾನ

* ನೀರಾವರಿ ಇಲಾಖೆಗೆ 14,477 ಕೋಟಿ ರೂ. ಅನುದಾನ, ಎತ್ತಿನಹೊಳೆ ಯೋಜನೆಗೆ ಸಮನ್ವಯ ಸಮಿತಿ ರಚನೆ

* ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆಗೆ 222 ಕೋಟಿ ರೂ.

* ಇ ಆಡಳಿತಕ್ಕೆ 115 ಕೋಟಿ ರೂ. ಅನುದಾನ

* ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ನೀಡಲಾಗುವ ಮಾಸಾಶನ 500 ರಿಂದ 2000 ರೂ.ಗೆ ಹೆಚ್ಚಳ

* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2,503 ಕೋಟಿ ರೂ. ಅನುದಾನ

* ಎಲ್​ಇಡಿ ಬಲ್ಬ್, ಹತ್ತಿ ಮೇಲಿನ ತೆರಿಗೆ ಇಳಿಕೆ

* ಬಿಯರ್ ಮೇಲೆ ಅಬಕಾರಿ ಸುಂಕ ಏರಿಕೆ

* ಮದ್ಯ ಮಾರಾಟ ಲೈಸನ್ಸ್ ಶುಲ್ಕ ಶೇ. 25 ರಷ್ಟು ಹೆಚ್ಚಳ

* ದೇಸಿ ಗೋ ತಳಿಗಳ ವೀರ್ಯ ಬ್ಯಾಂಕ್ ಸ್ಥಾಪನೆ, ಸ್ಥಳೀಯ ತಳಿ ಅಭಿವೃದ್ಧಿಗೆ 5 ಕೋಟಿ ರೂ. ಮೀಸಲು

* ಉನ್ನತ ಶಿಕ್ಷಣಕ್ಕೆ 4,651 ಕೋಟಿ ರೂ. ಅನುದಾನ

* ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರ ಸ್ಥಾಪನೆ

* ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಡಿಜಿಟಲ್ ಸಾಕ್ಷರತೆ ಉತ್ತೇಜನಕ್ಕೆ ‘ಐಟಿ @ ಸ್ಕೂಲ್ಸ್ ಇನ್ ಕರ್ನಾಟಕ’ ಕಾರ್ಯಕ್ರಮ ಆರಂಭ

* ಇನ್ವೆಸ್ಟ್ ಕರ್ನಾಟಕದ ಮೂಲಕ 1.77 ಲಕ್ಷ ಕೋಟಿ ಬಂಡವಾಳ ಹೂಡಿಕೆ.

* 5 ಸರ್ಕಾರಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣ

* ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ವಿಶೇಷ ಡಯಾಲಿಸಿಸ್ ಘಟಕ ಸ್ಥಾಪನೆ

* ಬೆಂಗಳೂರಿನಲ್ಲಿ 51.56 ಕಿ.ಮೀ. ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 112 ರಸ್ತೆಗಳ ಅಭಿವೃದ್ಧಿ

* ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ., ಘನ ತ್ಯಾಜ್ಯ ನಿರ್ವಹಣೆಗೆ 500 ಕೋಟಿ ರೂ. ಮತ್ತು ಮಳೆ ನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ ರೂ.

* ಕಂದಾಯ ಇಲಾಖೆಗೆ 5,532ಕೋಟಿ ರೂ ಪಾಯಿ .ಪಹಣಿ ಪತ್ರ ನೀಡಲು ಆಧಾರ್‌ ಮಾಹಿತಿ ಬಳಕೆ . ಗ್ರಾಮ ಸಹಾಯಕರ ಧನ 7 ರಿಂದ 10 ಸಾವಿರಕ್ಕೆ ಏರಿಕೆ .

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited