Untitled Document
Sign Up | Login    
Dynamic website and Portals
  
March 4, 2016

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

ನವದೆಹಲಿ : ಕೇಂದ್ರ ಚುನಾವಣಾ ಆಯೋಗ ಶುಕ್ರವಾರ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚರಿ ಈ ಐದು ರಾಜ್ಯಗಳಲ್ಲಿ ನಡೆಯಬೇಕಾದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸಿದೆ.

ಈ ಐದು ರಾಜ್ಯಗಳಲ್ಲಿ ಏಪ್ರಿಲ್ 4 ಮತ್ತು ಮೇ 16 ರ ಮಧ್ಯೆ ಚುನಾವಣೆ ನಡೆಯಲಿದೆ. ಆದರೆ ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಮೇ 16 ರಂದು ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳದಲ್ಲಿ 6 ಹಂತಗಳಲ್ಲಿ, ಅಸ್ಸಾಂನಲ್ಲಿ 2 ಹಂತಗಳಲ್ಲಿ, ತಮಿಳುನಾಡು, ಕೇರಳ ಮತ್ತು ಪುದುಚೆರಿಯಲ್ಲಿ 1 ಹಂತದಲ್ಲಿ ಚುನಾವಣೆ ನಡೆಯಲಿದೆ.

ಪಶ್ಚಿಮ ಬಂಗಾಳ 6 ಹಂತ: ಏಪ್ರಿಲ್ 04, ಏ.17, ಏ.21, ಏ.25, ಏ.30 ಮೇ 05
ಅಸ್ಸಾಂ ವಿಧಾನಸಭಾ 2 ಹಂತ: ಏ.04, ಏ.11
ತಮಿಳುನಾಡು 1 ಹಂತ: ಮೇ 16
ಕೇರಳ ವಿಧಾನಸಭಾ 1 ಹಂತ: ಮೇ 16
ಪುದುಚೆರಿ 1 ಹಂತ: ಮೇ 16

ಒಟ್ಟು ೧೭ ಕೋಟಿಗೂ ಅಧಿಕ ಮತದಾರರು ಈ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿ ನಾಸೀಮ್ ಝೈದಿ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited