ನವದೆಹಲಿ : ಅಂಕಣಕಾರ ಮತ್ತು ಲೇಖಕ ತರೇಕ್ ಫತಾಹ್ ಶುಕ್ರವಾರ ಪ್ರವಾದಿ ಮೊಹಮದ್ ಮತ್ತು ಗೋಹತ್ಯೆಯ ಕುರಿತು ಹೇಳಿಕೆ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಶುಕ್ರವಾರ ಟ್ವಿಟ್ಟರ್ ನಲ್ಲಿ ಫತಾಹ್ ಅವರು ಪ್ರವಾದಿ ಮೊಹಮ್ಮದ್ ಗೋಹತ್ಯೆಯನ್ನು ವಿರೋಧಿಸುತ್ತಿದ್ದರು ಮತ್ತು ಅದನ್ನು ತಮ್ಮ ಅನುನ್ಯಾಯಿಗಳಿಗೆ ಹೇಳಿದ್ದರು ಎಂದು ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ ಅವರು ಯಾವತ್ತೂ ಗೋಮಾಂಸ ತಿಂದಿರಲಿಲ್ಲ. ಗೋಹತ್ಯೆ ಮಾಡಬೇಡಿ ಎಂದು ವಿಶೇಷವಾಗಿ ಮುಸ್ಲಿಂಮರಿಗೆ ಹೇಳಿದ್ದರು. ಗೋವಿನ ಹಾಲು ಕುಡಿಯಿರಿ ಎಂದು ಮಾತ್ರ ಹೇಳಿದ್ದರು ಎಂದು ಫತಾಹ ಟ್ವೀಟ್ ಮಾಡಿದ್ದಾರೆ.
ಇಸ್ಲಾಂ ಧರ್ಮದ ಕುರಿತು ಯಾವಾಗಲೂ ತಮ್ಮ ನೇರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಫತಾಹ್ ಅವರು ಟ್ವಿಟ್ಟರ್ ನಲ್ಲೊಬ್ಬರು ಗೋಹತ್ಯೆಯ ಕುರಿತು ಅವರ ಅಭಿಪ್ರಾಯ ಕೇಳಿದಾಗ ಅದಕ್ಕೆ ಈ ರೀತಿಯಾಗಿ ಉತ್ತರಿದ್ದಾರೆ.