ನವದೆಹಲಿ : ರಿಯೋ ಒಲಂಪಿಕ್ಸ್ ಅಥ್ಲಿಟ್ಗಳು ಪದಕ ಗೆಲ್ಲುವುದನ್ನು ಹೊರೆ ಎಂದುಕೊಳ್ಳದೆ ಧೈರ್ಯದಿಂದ ಮುನ್ನುಗ್ಗುವಂತೆ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಾಳುಗಳಿಗೆ ಹುರಿದುಂಬಿಸಿದ್ದಾರೆ.
ರಿಯೋ ಕ್ರೀಡಾಪಟುಗಳಿಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕ್ರೀಡಾಪಟುಗಳಿಗೆ ಹುರಿದುಂಬಿಸಲು ದಿನಕಾಯುವ ಅಗತ್ಯವಿಲ್ಲ. ಕ್ರೀಡಾಪಟುಗಳು ತಮ್ಮಲ್ಲಿನ ಉತ್ಯುತ್ತಮ ಆಟವನ್ನು ಹೊರಹಾಕಿ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪ್ರಧಾನಿಯವರಿಗೆ ಸ್ವಾತಂತ್ರ್ಯ ದಿನದಂದು ರಿಯೋ ಅಥ್ಲಿಟ್ಗಳ ಬಗ್ಗೆ ಮಾತನಾಡುವಂತೆ ಮನವಿ ಮಾಡಿದ್ದರು. ಆಗಸ್ಟ್ 15 ರವರೆಗೆ ಕಾಯುವುದು ಏಕೆ? ಕ್ರೀಡಾಪಟುಗಳಿಗೆ ಹುರಿದುಂಬಿಸಲು ದಿನಕಾಯುವ ಅಗತ್ಯವಿಲ್ಲ ಎಂದ ಮೋದಿ ತಮ್ಮ ಖಾಸಗಿ ಟ್ವೀಟರ್ ಅಕೌಂಟಿನಿಂದ ಟ್ವೀಟ್ ಮಾಡಿದ್ದಾರೆ.
ರಿಯೋ ಸ್ಪರ್ಧೆಯಲ್ಲಿರುವ ಹುರಿಯಾಳುಗಳು ತಮ್ಮ ಅತ್ಯುತ್ತಮ ಆಟ ಹೊರಹಾಕುವ ನಿಶ್ಚಯ ಮಾಡಿ ಆಟದಲ್ಲಿ ಪಾಲ್ಗೊಳ್ಳುವಂತೆ ಹೇಳಿರುವ ಮೋದಿ ಆಟದ ಫಲಿತಾಂಶ ಏನೇ ಆಗಿದ್ದರು ಸಮರ್ಪಣಾ ಭಾವದೊಂದಿಗೆ ಆಟವಾಡಬೇಕು. ರಿಯೋ ಕ್ರೀಡಾಪಟುಗಳು ಭಾರತದ ಹೆಮ್ಮೆಯ ಪ್ರತೀಕ ಎಂದು ಮೋದಿ ತಿಳಿಸಿದ್ದಾರೆ.