Untitled Document
Sign Up | Login    
Dynamic website and Portals
  
December 30, 2015

ವಿಧಾನಪರಿಷತ್ ಚುನಾವಣೆಃ ಮತ ಎಣಿಕೆ ಆರಂಭ

ಬೆಂಗಳೂರು : ರಾಜ್ಯದ 20 ಕ್ಷೇತ್ರಗಳಲ್ಲಿನ 25 ವಿಧಾನಪರಿಷತ್‌ ಸ್ಥಾನಗಳಿಗೆ ನಡೆದ ಚುನಾವಣೆಫ‌ಲಿತಾಂಶ ಬುಧವಾರ ಪ್ರಕಟವಾಗಲಿದ್ದು, ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿದೆ.

ತೀವ್ರ ಪೈಪೋಟಿಯಿರುವ ಕ್ಷೇತ್ರಗಳಲ್ಲಿ ಪ್ರಾಶಸ್ತ್ಯ ಮತ ಎಣಿಕೆಯ ಸಂಕೀರ್ಣ ಪ್ರಕ್ರಿಯೆ ಆರಂಭವಾಗದಿದ್ದರೆ ಮಧ್ಯಾಹ್ನದ ವೇಳೆಗೆ ಬಹುತೇಕ ಒಂದು ಚಿತ್ರಣ ದೊರೆಯಬಹುದು. ಆದರೆ, ಪ್ರಾಶಸ್ತ್ಯದ ಮತಗಳ ಎಣಿಕೆ ಅನಿವಾರ್ಯವಾಗುವ ಕ್ಷೇತ್ರಗಳ ಫ‌ಲಿತಾಂಶ ಪ್ರಕಟವಾಗುವುದು ತಡ ರಾತ್ರಿಯಾದರೂ ಆಗಬಹುದು.

25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ತಲಾ 20 ಹಾಗೂ ಜೆಡಿಎಸ್‌ 18 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.

ರಾಜಕೀಯವಾಗಿ ಅಷ್ಟೇನೂ ಪ್ರಾಮುಖ್ಯ ಈ ಫ‌ಲಿತಾಂಶಕ್ಕೆ ಇಲ್ಲದಿದ್ದರೂ 75 ಸದಸ್ಯ ಬಲದ ಮೇಲ್ಮನೆಯಲ್ಲಿ ತಮ್ಮ ಸ್ಥಾನ ಬಲವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಮೂರು ಪಕ್ಷಗಳಿಗೂ ಈ ಚುನಾವಣೆ ಮೂಲಕ ಲಭ್ಯವಾಗಿತ್ತು. ಕಾಂಗ್ರೆಸ್ ಮೇಲ್ಮನೆಯಲ್ಲಿ ಬಹುಮತ ಕೊರತೆಯಿಂದ ಹೊರಬರಲು ಈ ಚುನಾವಣೆ ಸಹಕಾರಿಯಾಗುತ್ತಾ ಎಂದು ಕಾದುನೋಡಬೇಕಿದೆ. ಜೆಡಿಎಸ್​ಗೆ ಹೆಚ್ಚು ಸ್ಥಾನವಿರಲಿ, ಈಗಿರುವ 5 ಸ್ಥಾನವನ್ನಾದರೂ ಉಳಿಸಿಕೊಂಡು ಅಸ್ತಿತ್ವ ಕಾಪಾಡಿಕೊಳ್ಳುವುದು ಅನಿವಾರ್ಯ.

ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಿಟ್ಟಿಸಿಕೊಂಡರೆ ಬಿಜೆಪಿ ಹಿಡಿತದಲ್ಲಿರುವ ಸಭಾಪತಿ ಸ್ಥಾನಕ್ಕೂ ಸಂಚಕಾರ ಬರಲಿದೆ. ಹಾಗಾಗಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗಳಿಸುವ ಅನಿವಾರ್ಯತೆ ಇದೆ.

 

 

English Summary : Result of Karnataka Vidhana Parishth election will be announced n Wednesday Dec. 30.

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited