ಮುಂಬಯಿ : 26/11 ಮುಂಬಯಿ ದಾಳಿ ನಡೆಸಲು ಲಷ್ಕರ್-ಎ-ತಯ್ಯಬಾ ಉಗ್ರರ ಜೊತೆ ಒಲಸಮ್ಚು ರೂಪಿಸಿದ್ದ, ಡೇವಿಡ್ ಹೆಡ್ಲಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಒಪ್ಪಿಗೆ ಸೂಚಿಸಿದ ನಂತರ ಮುಂಬಯಿ ವಿಶೇಷ ನ್ಯಾಯಾಲಯ ಕ್ಷಮಾದಾನ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.
ಈಗ ಅಮೆರಿಕದ ಜೈಲಿನಲ್ಲಿರುವ ಹೆಡ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ಸಂಜೆ ಮುಂಬಯಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದ. ಹೆಡ್ಲಿಯ ಮೇಲೆ ೧೧ ಅಪರಾಧಗಳ ಅರೋಪಗಳು ಇವೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದೆ ಹೆಡ್ಲಿ, ನಾನು ಮುಂಬಯಿ ದಾಳಿಯಲ್ಲಿ ಪಾತ್ರವಹಿಸಿದ್ದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕೋರ್ಟ್ ನನಗೆ ಕ್ಷಮಾದಾನ ನೀಡಿದರೆ ಸಾಕ್ಷಿ ಹೇಳಲು ಸಿದ್ಧ ಎಂದು. ಬಳಿಕ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಅವರು ಹೆಡ್ಲಿ ಕೋರಿಕೆಯನ್ನು ಪ್ರಾಸಿಕ್ಯೂಶನ್ ಒಪ್ಪಿಕೊಳ್ಳಲಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಜಿ.ಎ. ಸನಪ್ ಅವರು ಹೆಡ್ಲಿ ಕೋರಿಕೆಯನ್ನು ಮನ್ನಿಸಿ, ಕ್ಷಮೆ ನೀಡಿ ಮಾಫಿ ಸಾಕ್ಷಿಯನ್ನಾಗಿ ಮಾಡಿದರು.