Untitled Document
Sign Up | Login    
Dynamic website and Portals
  
December 4, 2015

ದೆಹಲಿ ಶಾಸಕರ ವೇತನವನ್ನು ಶೇ.400 ರಷ್ಟು ಹೆಚ್ಚಿಸಿದ ಆಪ್ ಸರ್ಕಾರ

ದೆಹಲಿ ಶಾಸಕರ ವೇತನವನ್ನು ಶೇ.400 ರಷ್ಟು ಹೆಚ್ಚಿಸಿದ ಆಪ್ ಸರ್ಕಾರ

ನವದೆಹಲಿ : ದಿಲ್ಲಿ ಶಾಸಕರು ಮತ್ತು ಮಂತ್ರಿಗಳ ವೇತನವನ್ನು 4 ಪಟ್ಟು ಹೆಚ್ಚಿಸುವ ಬೇಡಿಕೆಯಿದ್ದ ವಿಧೇಯಕವು ವಿಧಾನಸಭೆಯಲ್ಲಿ ಗುರುವಾರ ಅಂಗೀಕರಿಸಲಾಗಿದೆ. ಇದು ಜಾರಿಯಾದ ನಂತರ ದಿಲ್ಲಿ ಶಾಸಕರು ದೇಶದಲ್ಲೇ ಹೆಚ್ಚು ವೇತನ ಪಡೆವ ಶಾಸಕರು ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಇದರಿಂದಾಗಿ ಶಾಸಕರ ಒಟ್ಟಾರೆ ಮಾಸಿಕ ವೇತನ 88 ಸಾವಿರದಿಂದ 2.35 ಲಕ್ಷಕ್ಕೆ ಏರಲಿದೆ.

ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಬೆಲೆ ರಿಕೆಯ ಹಿನ್ನಲೆಯಲ್ಲಿ ವೇತನ ಏರಿಕೆಯ ಅಗತ್ಯತೆ ಬಗ್ಗೆ ಹೇಳಿ, ಇದರಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ.ಶಾಸಕರು ಮತ್ತು ಮಂತ್ರಿಗಳು ಅವರವರ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಉತ್ತೇಜನ ಸಿಗಲಿದೆ
ಎಂದು ಹೇಳಿದ್ದಾರೆ

ಈ ರೀತಿ ವೇತನ ಹೆಚ್ಚಳಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ಸರಳತೆಯ ಜೀವನ, ಜನಸಾಮಾನ್ಯರ ಬವಣೆ ಬಗ್ಗೆ ಮಾತನಾಡಿ ಅಧಿಕಾರಕ್ಕೆ ಬಂದಿದ್ದ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ, ಈಗ ಇಷ್ಟೊಂದು ಭಾರಿ ಪ್ರಮಾಣದಲ್ಲಿ ವೇತನ ಹೆಚ್ಚಳಕ್ಕೆ ಒಮ್ಮತದ ಅಂಗೀಕಾರ ನೀಡಿರುವುದು ಎಷ್ಟು ಸರಿ ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited