ಟರ್ಕಿ : ತಮ್ಮ ಮೂರು ದಿನಗಳ ಯುಕೆ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಜಿ-20 ಶೃಂಗಸಭೆಗಾಗಿ ಶನಿವಾರ ರಾತ್ರಿ ಟರ್ಕಿಯ ಅಂತಾಲಿಯಾ ತಲುಪಿದ್ದಾರೆ.
ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆಯ ಸಮಸ್ಯೆಗಳು, ಹವಾಮಾನ ಬದಲಾವಣೆ, ಕಪ್ಪುಹಣ ಹೊರತರಲು ಜಾಗತಿಕ ಸಹಕಾರ ಮುಂತಾದ ವಿಷಯಗಳ ಬಗ್ಗೆ ಮಾತನಾಡುವ ನಿರೀಕ್ಷೆ ಇದೆ. ಪ್ಯಾರಿಸ್ ನಲ್ಲಿ ಉಗ್ರರ ದಾಳಿ ಮತ್ತು ಸಿರಿಯಾ ಯುದ್ಧ ಪ್ರಮುಖವಾಗಿ ಚರ್ಚೆಯಾಗುವ ಸಂಭವವಿದೆ.
ಪ್ರಪಂಚದ 20 ಅಗ್ರ ರಾಷ್ಟ್ರಗಳ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ರಷ್ಯಾದ ಅಧ್ಯಕ್ಷ ವಾಲ್ಡಮಿರ್ ಪುಟಿನ್, ಬ್ರಿಟೀಷ ಪ್ರಧಾನಿ ಡೇವಿಡ್ ಕಾಮೆರಾನ್ , ಜರ್ಮನ್ ಚಾನ್ಸಲರ್ ಅಂಜೆಲಾ ಮಾರ್ಕೆಲ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೂ ಭಾಗವಹಿಸಲಿದ್ದಾರೆ.
ಪ್ಯಾರಿಸ್ ದಾಳಿಯಿಂದ ಪ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.