Untitled Document
Sign Up | Login    
Dynamic website and Portals
  
July 16, 2016

ಟರ್ಕಿಯಲ್ಲಿ ಸೇನಾ ದಂಗೆ: 60 ಜನರ ಸಾವು

ಟರ್ಕಿಯಲ್ಲಿ ಸೇನಾ ದಂಗೆ: 60 ಜನರ ಸಾವು

ಇಸ್ತಾಂಬುಲ್ : ಟರ್ಕಿಯಲ್ಲಿ ಸೇನಾ ಪಡೆಗಳು ಅನಿರಿಕ್ಷಿತವಾಗಿ ಕ್ರಿಪ್ರಕ್ರಾಂತಿ ನಡೆಸಿದ ಪರಿಣಾಮ ಉಂಟಾದ ಘರ್ಷಣೆಯಲ್ಲಿ ನಾಗರಿಕರು, ಪೊಲೀಸರು ಸೇರಿ ಸುಮಾರು 60 ಜನರು ಮೃತಪಟ್ಟಿದ್ದಾರೆ.

ಸಂಸತ್‌ ಮೇಲೆ ಬಾಂಬ್ ದಾಳಿಯೂ ನಡೆದಿದ್ದು, ಇದೂವರೆಗೂ 60 ಮಂದಿ ಗುಂಡಿನದಾಳಿಗೆ ಬಲಿಯಾಗಿದ್ದಾರೆ. ಮೃತ ಪಟ್ಟವರಲ್ಲಿ ಹೆಚ್ಚಿನ ಮಂದಿ ನಾಗರಿಕರೇ ಆಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಇಸ್ತಾಂಬುಲ್ ಸೇರಿದಂತೆ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದಿವೆ. ಆದರೆ ಸೇನಾ ಕ್ಷಿಪ್ರ ಕ್ರಾಂತಿಯನ್ನು ಅಧ್ಯಕ್ಷ ರಿಸೆಪ್ ಟಯ್ಯಿಪ್ ಎರ್ಡೋಗನ್ ತಳ್ಳಿಹಾಕಿದ್ದಾರೆ. ಸೇನೆಯ ಸಣ್ಣ ತುಕಡಿಯೊಂದು ದಂಗೆ ಎದ್ದಿದೆ. ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಟರ್ಕಿಯ ಜನರು ಸರ್ಕಾರಕ್ಕೆ ಬೆಂಬಲ ಸೂಚಿಸಬೇಕು, ಜನರು ರಸ್ತೆಗಿಳಿದು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದ್ದಾರೆ.

ವಿಶೇಷ ಪೊಲೀಸ್ ಪಡೆಯ ಹೆಡ್​ಕ್ವಾರ್ಟರ್ ಮೇಲೆ ನಡೆದ ದಾಳಿಯಲ್ಲಿ 17 ಪೊಲೀಸರು ಮೃತಪಟ್ಟಿದ್ದಾರೆ. ಜತೆಗೆ ಹತ್ತಾರು ನಾಗರಿಕರು ಸಹ ಮೃತಪಟ್ಟಿದ್ದಾರೆ. ಅಂಕಾರದಲ್ಲಿ ಸುಮಾರು 42 ಜನರು ಮತ್ತು ಇಸ್ತಾಂಬುಲ್​ನಲ್ಲಿ 6 ಜನರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited