Untitled Document
Sign Up | Login    
Dynamic website and Portals
  
November 7, 2015

ಜಮ್ಮು ಕಾಶ್ಮೀರದ ಅಭಿವೃದ್ಧಿಗೆ 80,000 ಕೋಟಿ ರೂ. : ಪ್ರಧಾನಿ ಮೋದಿ ಘೋಷಣೆ

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಶ್ರೀನಗರ : ಶನಿವಾರ ಶ್ರೀನಗರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಅಭಿವೃದ್ಧಿಗೆ 80,000 ಕೋಟಿ ರೂ. ಗಳನ್ನು ಘೋಷಿಸಿದ ಪ್ರಧಾನಿ ಮೋದಿ, ಜಮ್ಮು ಕಾಶ್ಮೀರವನ್ನು ಮತ್ತೊಮ್ಮೆ ಪ್ರವಾಸಿಗರ ಕನಸಿನ ತಾಣವನ್ನಾಗಿಸಲು ಬಯಸುತ್ತೇನೆ ಎಂದರು. ಬೃಹತ್ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಸಮಸ್ತರ ಜೊತೆಗೆ ಸಮಸ್ತರ ವಿಕಾಸ' ಎನ್ನುವ ಸರಕಾರದ ಉದ್ದೇಶವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿಯವರ ಭಾಷಣದ ಮುಖ್ಯಾಂಶಗಳು ಃ

* ಈ ಪ್ರೀತಿಯೇ (ಜಮ್ಮು ಕಾಶ್ಮೀರದ ಬಗ್ಗೆ) ನನ್ನನ್ನು ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ಇಲ್ಲಿಗೆ ಕೆರೆತಂದಿತು.

* ನಾನು ದೆಹಲಿಯಲ್ಲಿ ಇದ್ದುಕೊಂಡು ನನ್ನ ಸ್ನೇಹಿತರೊಡನೆ ದೀಪಾವಳಿ ಆಚರಿಸಬಹುದಿತ್ತು. ಆದರೆ, ನಾನು ಇಲ್ಲಿಗೆ ಬಂದು ಇಲ್ಲಿಯ ಜನರೊಡನೆ ಇರಬೇಕೆಂದು ನಿರ್ಧರಿಸಿದೆ.

* ಚೀನಾದ ರಾಷ್ಟ್ರಪತಿ ಭಾರತಕ್ಕೆ ಭೇಟಿ ನೀಡಿದಾಗ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಇಚ್ಚೆ ಹೊಂದಿದ್ದರು. ಆದರೆ ಕಾಶ್ಮೀರದಲ್ಲಿರುವ ನನ್ನ ಸ್ನೇಹಿತರು ಪ್ರವಾಹದಿಂದ ಕಷ್ಟಕ್ಕೆ ಸಿಲುಕಿರುವಾಗ ನಾನು (ನನ್ನ ಹುಟ್ಟುಹಬ್ಬವನ್ನು) ಆಚರಿಸಲಾರೆ ಎಂದು ಅವರಿಗೆ ಹೇಳಿದೆ.

* ನನ್ನ ಹುಟ್ಟುಹಬ್ಬದ ದಿನ ನಾನು ನನ್ನ ತಾಯಿಯ ಆಶೀರ್ವಾದ ಪಡೆಯುತ್ತೇನೆ. ಪ್ರತಿವರ್ಷ ಅವರು ನನಗೆ ರೂ.5 ಅಥವಾ ರೂ.11 ಉಡುಗೊರೆಯಾಗಿ ಕೊಡುತ್ತಿದ್ದರು. ಆದರೆ ಕಳೆದ ವರ್ಷ ಅವರು ರೂ.5,000 ಕೊಟ್ಟು ಅದನ್ನು ಕಾಶ್ಮೀರದ ಪ್ರವಾಹ ಪೀಡಿತ ಜನರಿಗಾಗಿ ವಿನಿಯೋಗಿಸುವಂತೆ ಹೇಳಿದರು.

* ಈ ಸಂಸ್ಕಾರವೇ ನನ್ನನ್ನು ಪ್ರೇರೇಪಿಸುತ್ತದೆ ಅಲ್ಲದೆ, ನಿಮಗಾಗಿ ದುಡಿಯಲು ಶಕ್ತಿಯನ್ನು ತುಂಬುತ್ತದೆ. ಇದಕ್ಕಾಗಿ ನಾವು ಕಂಡುಕೊಂಡ ಮಂತ್ರವೇ 'ಎಲ್ಲರ ಜೊತೆ, ಎಲ್ಲರ ವಿಕಾಸ'.

* ದೇಶದ ಯಾವುದೇ ಮೂಲೆಯೂ ನಿರ್ಲಕ್ಷ್ಯಕ್ಕೊಳಗಾದರೆ ನನ್ನ ಕನಸು ನನಸಾಗಲಾರದು. ಅದಕ್ಕಾಗಿಯೇ ನಾನಗೆ ದೇಶದ ಮೂಲೆ ಮೂಲೆಯ ಹಾಗೂ, ಪ್ರತಿಯೊಬ್ಬ ನಾಗರಿಕನ ಬೆಂಬಲ ಬೇಕಾಗಿದೆ. ಹಿಂದೆ ಹೇಗೆ ಕಾಶ್ಮೀರಕ್ಕೆ ಭೇಟಿ ನೀದಿ ರಜಾ ದಿನಗಳನ್ನು ಕಳೆಯಲು ಜನರು ಹೇಗೆ ಹಣವನ್ನು ಒಟ್ಟುಗೂಡಿಸಿ ಎದುರು ನೋಡುತ್ತಿದ್ದರೋ, ಆ ದಿನಗಳನ್ನು ನಾನು ಮತ್ತೆ ತರಬೇಕಾಗಿದೆ. ಆ ಮೂಲಕ ಅವರು ನಿಮ್ಮ ಆತಿಥ್ಯವನ್ನು ಹಾಗೂ ಪ್ರಕೃತಿ ಮಾತೆಯ ಉಡುಗೊರೆಯನ್ನು ಅನುಭವಿಸಬಹುದು.

* ಜೀವನದಲ್ಲಿ ಸವಾಲುಗಳು ಎಷ್ಟೇ ದೊಡ್ಡದಿರಲಿ ಅವುಗಳನ್ನು ಮೀರಿ ನಿಲ್ಲಬಹುದು ಎಂಬುದನ್ನು ನಾನು ಕಂಡುಕೊಂಡಿದ್ದೇನೆ.

* 2001 ರಲ್ಲಿ ಗುಜರಾತಿನಲ್ಲಿ ಭೂಕಂಪ ಸಂಭವಿಸಿದಾಗ, ಆ ರಾಜ್ಯ ಇನ್ನೆಂದಿಗೂ ಮೇಲೇಳಲಾರದು ಎಂದು ಪ್ರಪಂಚವೇ ಅಂದುಕೊಂಡಿತು. ಸಾವಿರಾರು ಜನರು ಸಾವಿಗೀಡಾದರು ಹಾಗೂ ಮನೆ ಮಠಗಳನ್ನು ಕಳೆದುಕೊಂಡರು. ಆದರೆ ನಾನು ನನ್ನ ರಾಜ್ಯವನ್ನು ಸಂಕಷ್ಟದಿಂದ ಹೊರತರಬೇಕೆಂದು ನಿರ್ಧರಿಸಿದೆ. ಗೆಳೆಯರೇ, ವಿಶ್ವ ಬ್ಯಾಂಕ್ ಸಹ ಅಂತಹ ಸಂಕಷ್ಟದಿಂದ ರಾಜ್ಯವನ್ನು ಮರಳಿ ಸಹಜ ಸ್ಥಿತಿಗೆ ತರಲು ಕನಿಷ್ಠ 7 ವರ್ಷಗಳು ಬೇಕಾಗಬಹುದು ಎಂದು ಹೇಳಿತು. ಆದರೆ ಕೇವಲ 3 ವರ್ಷಗಳಲ್ಲಿ ನಾವು ಮಾಡಿದ ಕೆಲಸದಿಂದ ಅತ್ಯಂತ ತೀವ್ರ ಹಾನಿಗೊಳಗಾದ ಪ್ರದೇಶಗಳು ಸಹ ಮತ್ತೆ ತಮ್ಮ ಕಾಲ ಮೇಲೆ ನಿಲ್ಲುವಂತಾಯಿತು.

* ಆದ್ದರಿಂದಲೇ ನಾನು ಹೇಳುತ್ತೇನೆ, ಕಾಶ್ಮೀರವನ್ನು ಸಹ ಮತ್ತೆ ಸಹಜ ಸ್ಥಿತಿಗೆ ಮರಳಿಸಬಹುದು. ಸಂತೋಷ, ಸುಭಿಕ್ಷವಾಗಿರುವ ಕಾಶ್ಮೀರವನ್ನು ನಾನು ಕಾಣಬಲ್ಲೆ.

* ಕಾಶ್ಮೀರ ಸಾಕಷ್ಟು ಕಶ್ಟಗಳನ್ನು ಅನುಭವಿಸಿದೆ. ತಲೆಮಾರುಗಳಿಂದ ಜನರು ತಮ್ಮ ಕನಸುಗಳು ನುಚ್ಚು ನೂರಾಗುವುದನ್ನು ಕಂಡಿದ್ದಾರೆ.

* ನಾನು ಕಾಶ್ಮೀರವನ್ನು ಮತ್ತೆ ಹಿಂದಿನ ವೈಭವಕ್ಕೆ ಮರಳಿ ತರುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಆ ದಿನಗಳು ದೂರವಿಲ್ಲ ಎಂಬುದು ನನ್ನ ದೃಢವಾದ ನಂಬಿಕೆ.

* ಕಳೆದ 17 ತಿಂಗಳುಗಳ ಹಿಂದಿನ ಯಾವುದೇ ಪತ್ರಿಕೆ ಅಥವಾ ಸುದ್ಧಿ ಮಾಧ್ಯಮಗಳ ಚರ್ಚೆಗಳನ್ನು ಕೇಳಿದರೆ, ಅಂತಾರಾಷ್ಟ್ರೀಯ ಸಂಸ್ಥೆಗಳ ಅಭಿಪ್ರಾಯ ಕೇಳಿದರೆ ಭಾರತ ವಿನಾಶ ಹೊಂದಿತು ಅಂತಲೇ ಅವರು ಹೇಳುತ್ತಿದ್ದರು.

* ಭಾರತ ಚೀನಾಕ್ಕೆ ಸರಿಸಾಟಿಯಾಗಲು ಅಸಾಧ್ಯ ಎಂದು ಕೆಲವರು ಹೇಳುತ್ತಿದ್ದರು. ಆದರೆ ಇಂದು ಅವರು ಹೇಳುತ್ತಾರೆ, 'ಭಾರತ ಚೀನಾಕ್ಕೆ ಸರಿಸಾಟಿಯಷ್ಟೇ ಅಲ್ಲ, ಚೀನಾವನ್ನೂ ಹಿಂದಿಕ್ಕಿದೆ' ಎಂದು. ಇಂದು ಇಲ್ಲಿಗೆ ಬರುವುದಕ್ಕೆ ಮುಂಚೆ ನಾನು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ವರದಿಯೊಂದನ್ನು ಓದಿದೆ. ಕಳೆದ 50 ವರ್ಷಗಳಲ್ಲಿ ಭಾರತ ಪ್ರಥಮ ಬಾರಿಗೆ ಚೀನಾದಿಂದ ಮುಂದಿದೆ ಎಂದು ಅದು ಹೇಳಿದೆ.

* ಗೆಳೆಯರೇ, ಕಾಶ್ಮೀರಿಯತ್ ಇಲ್ಲದೆ ಭಾರತ ಅಪೂರ್ಣ. ಇದು ಎಲ್ಲರನ್ನೂ ಒಟ್ಟಿಗೆ ಸೇರಿಸುವ ಬಗ್ಗೆ ಕಲಿಸಿಕೊಟ್ಟ ಸೂಫಿಸ್ಂ ಗೆ ಜನ್ಮ ಕೊಟ್ಟ ನಾಡು.

* ಪ್ರಪಂಚ ಎಷ್ಟೆ ಮುಂದುವರಿಯಲಿ, ಮಾನವತೆ ಇಲ್ಲದಿದ್ದರೆ ನಾವು ಎಲ್ಲಿಯೂ ಸಲ್ಲುವುದಿಲ್ಲ. ಪ್ರಜಾಪ್ರಭುತ್ವ, ಮಾನವೀಯತೆ, ಕಾಶ್ಮೀರಿಯತ್ - ಇವು ಅತ್ಯಂತ ಅಗತ್ಯ. ಆದ್ದರಿಂದ ಇಲ್ಲಿಯ ಪ್ರತಿಯೊಂದು ಕುಟುಂಬವನ್ನೂ ಸಂಕಷ್ಟದಿಂದ ಹೊರತರುವುದು ಅವಶ್ಯಕವಾಗಿದೆ. ಇಂದು ಇಲ್ಲಿಯ ಜನರಿಗಾಗಿ ದೆಹಲಿ (ಸರಕಾರ) ಜಮ್ಮು ಕಾಶ್ಮೀರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಲು ತಯಾರಿದೆ.

* ಯುವ ಜನತೆಗೆ ಉದ್ಯೋಗವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ. ನಾನು ಕಾಶ್ಮೀರದ ಯುವ ಜನತೆಗೆ ಶುಭಾಷಯ ತಿಳಿಸುತ್ತೇನೆ. ಕೆಲವು ವರ್ಷಗಳಿಂದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಶ್ಮೀರದ ಯುವಕರು ಉತ್ತಮ ಪ್ರದರ್ಶನ ನೀಡಿದ್ದಾರೆ.

* ಭಾರತದಿಂದ 1.75 ಕೋಟಿ ಜನರು ತಮ್ಮ ರಜಾದಿನಗಳಲ್ಲಿ ಹೊರದೇಶಗಳಿಗೆ ಹೋಗಿತ್ತಾರೆ. ಅದರಲ್ಲಿ ಶೇ. 5 ರಷ್ಟು ಜನ ಇಲ್ಲಿಗೆ ಬಂದರೆ ಹೇಗಿರುತ್ತದೆ ನೀವೇ ಹೇಳಿ. ಪ್ರವಾಸೋದ್ಯಮದ ಜೊತೆಗೆ ನಾನು ಸಾಂಪ್ರದಾಯಿಕ ಅಭಿವೃದ್ಧಿ ಮಾದರಿಗಳಾದ ಕಾಶ್ಮೀರಿ ಶಾಲ್, ಕೇಸರಿ, ಸೇಬುಹಣ್ಣು ಮತ್ತು ಕೃಷಿ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಲು ಬಯಸುತ್ತೇನೆ.

* ಮೂಲಸೌಕರ್ಯದಲ್ಲಿ ನಾವು ಜಮ್ಮು-ಶ್ರೀನಗರ ಹೆದ್ದಾರಿಗೆ 34,000 ರೂ ಕೋಟಿ ಖರ್ಚು ಮಾಡುತ್ತೇವೆ. ಇದು ಪ್ರಯಾಣವನ್ನು 12 ಗಂಟೆಯಿಂದ 3 ಗಂಟೆಗೆ ಕಡಿತಗೊಳಿಸುತ್ತದೆ.

* ಇದರೊಂದಿಗೆ ನಾವು ಐ-ವೇ ಯ ಕನಸು ಕಾಣುತ್ತಿದ್ದೇವೆ. ಆಪ್ಟಿಕಲ್ ಫೈಬರ್, ಮೊಬೈಲ್, ಇಂಟರ್ನೆಟ್ ಎಲ್ಲಾವೂ ಇಲ್ಲಿ ಉತ್ತಮವಾಗಿರಬೇಕು. ಇದನ್ನು ಅಭಿವೃದ್ಧಿಪಡಿಸಿದರೆ ಯುವ ಜನತೆಗೆ ಇಲ್ಲಿಯೇ ಕೆಲಸ ದೊರೆಯುತ್ತದೆ. ಆಮೇಲೆ ಆರೋಗ್ಯ. ನಾವು ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿ, ಎಲ್ಲಾ ಔಷಧಗಳೂ ಸಿಗುವಂತೆ ಮಾಡಿದರೆ ಜನರಿಗೆ ಲಾಭವಾಗುತ್ತದೆ. ನಾವು ಇಲ್ಲಿಗೆ ಎಐಐಎಂ, ಐಐಟಿ ಮತ್ತು ಐಐಎಂ ತರಲು ಬಯಸುತ್ತೇವೆ.

* ಕಾಶ್ಮೀರದ ಕರಕುಶಲ ಕಲೆಗೆ ಪುನಶ್ಚೇತನ ನೀಡಬೇಕು.

* ಇವು ನಮ್ಮ ಕನಸುಗಳು. ಇವೆಲ್ಲವುದಕ್ಕಾಗೆ ನಾವು ಜಮ್ಮು-ಕಾಶ್ಮೀರ ಅಭಿವೃಧ್ಧಿಗೆ 80,000 ಕೋಟಿ ರೂ ನೀಡಲು ನಿರ್ಧರಿಸಿದ್ದೇವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited