ಸೌದಿ ಅರೇಬಿಯಾ : ಗುರುವಾರ ಮೆಕ್ಕಾದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಸುಮಾರು 700 ಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವನಪ್ಪಿದ್ದು ಅವರಲ್ಲಿ 14 ಭಾರತೀಯರೂ ಸೇರಿದ್ದಾರೆ. ಸುಮಾರು 860 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
14 ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ತಿಳಿಸಿದ್ದಾರೆ.
ನಮ್ಮ ಕಾನ್ಸುಲ್ ಜನರಲ್ ಜೆಡ್ಡಾ 14 ಭಾರತೀಯರು ಪ್ರಾಣ ಕಳೆದುಕೊಂಡಿರುವುದನ್ನು ವರದಿ ಮಾಡಿದ್ದಾರೆ. 13 ಜನ ಗಾಯಗೊಂಡವರು ಆಸ್ಪತ್ರೆಯಲ್ಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಸರಿಯಾದ ಸಂಖ್ಯೆ ಸೌದಿಯ ಅಧಿಕಾರಿಗಳು ಧೃಢೀಕರಿಸಿದ ನಂತರ ತಿಳಿಯಲಿದೆ ಎಂದೂ ಹೇಳಿದ್ದಾರೆ.
ಸಹಾಯವಾಣಿ ನಂ. ಗಳು ಈ ಕೆಳಗಿನಂತಿವೆಃ
ಮೆಕ್ಕಾ: 00966125458000, 00966125496000
ಸೌದಿ ಅರೇಬಿಯಾದಲ್ಲಿರುವ ಯಾತ್ರಾರ್ಥಿಗಳಿಗೆ ಟೋಲ್ ಫ್ರೀ ನಂ. : 8002477786