Untitled Document
Sign Up | Login    
Dynamic website and Portals
  

Related News

ಬನ್ನೇರುಘಟ್ಟ ಉದ್ಯಾನವನದಲ್ಲಿ ಹುಲಿ ದಾಳಿಗೆ ಕೇರ್ ಟೇಕರ್ ಸಾವು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ದಾಳಿಗೆ ಪ್ರಾಣಿ ಪಾಲಕನೊಬ್ಬ ಬಲಿಯಾಗಿದ್ದು, ಮೃತ ವ್ಯಕ್ತಿಯ ಕುಟುಂಬ ಸದಸ್ಯರು ನ್ಯಾಯದೊರಕಿಸಿಕೊಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. 7 ದಿನಗಳ ಹಿಂದಷ್ಟೆ ಸಹಾಯಕ ಪ್ರಾಣಿ ಪಾಲಕನಾಗಿ ಕೆಲಸಕ್ಕೆ ಸೇರಿದ್ದ 35 ವರ್ಷದ ಆಂಜನೇಯ ಹುಲಿಗಳ ದಾಳಿಗೆ ಬಲಿಯಾದ ವ್ಯಕ್ತಿ. ಸಂಜೆ...

ಟ್ರಕ್ ಮತ್ತು ಕಾರು ಡಿಕ್ಕಿ: ರಾಮನಗರದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವು

ಟ್ರಕ್​ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬಿಡದಿ ಸಮೀಪದ ಕೆಂಪನಹಳ್ಳಿಯಲ್ಲಿ ಸಂಭವಿಸಿದೆ. ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ಮೊದಲು ಡಿವೈಡರ್​ಗೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ...

ವರುಣನ ಅರ್ಭಟಕ್ಕೆ 8 ಜನರು ಬಲಿ: ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿದ ಕುಂಭದ್ರೋಣ ಮಳೆಗೆ ಎಂಟು ಜನರು ಬಲಿಯಾಗಿದ್ದಾರೆ. ವರುಣನ ಆರಭ್ಹಟಕ್ಕೆ ಸಂಭವಿಸಿದ ವಿವಿಧ ಅವಘಡಗಳಲ್ಲಿ ಹಾಗೂ ಸಿಡಿಲು ಬಡಿದು ಒಟ್ಟು 8 ಮಂದಿ ಸಾವಿಗೀಡಾಗಿದ್ದರೆ ನಾಲ್ವರೂ ಗಂಭೀರ ಗಾಯಗೊಂಡಿದ್ದಾರೆ. ಇನ್ನೂ ಎರಡು-ಮೂರು ದಿನಗಳ ಕಾಲ ಇದೇ ರೀತಿಯಲ್ಲೇ ಮಳೆ...

ಭಾರತೀಯ ವಾಯುಪಡೆ ತರಬೇತಿ ಹೆಲಿಕ್ಯಾಪ್ಟರ್ ಪತನ: ಐವರು ಸಾವು

ಭಾರತೀಯ ವಾಯು ಪಡೆಯ ತರಬೇತಿ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದು, ಐವರು ಮೃತಪಟ್ಟಿದ್ದಾರೆ. ಭಾರತೀಯ ವಾಯುಪಡೆಗೆ ಸೇರಿದ ಎಂಐ -17 ವಿ5 ಹೆಲಿಕ್ಯಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಇಂದು ಬೆಳಿಗ್ಗೆ ತರಬೇತಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಪತನಗೊಂಡಿದೆ. ದುರಂತ ಸಂಭವಿಸಿದ ವೇಳೆ...

ಸೆಲ್ಫಿ ಕ್ರೇಜ್: ರೈಲಿಗೆ ಸಿಲುಕಿ ಮೂವರು ಯುವಕರ ಸಾವು

ರೈಲು ಹಳಿಯ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋಗಿ ಮೂವರು ಯುವಕರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ಬಿಡದಿ ಬಳಿಯ ವಂಡರ್ ಲಾ ಗೇಟ್ ಬಳಿ ನಡೆದಿದೆ. ಬೆಳಗ್ಗೆ 9 ಗಂಟೆಗೆ ಬಿಡದಿ ಬಳಿಯ ವಂಡರ್ ​ಲಾ ಸಮೀಪ ಮಂಚನಾಯಕನ ಹಳ್ಳಿ...

ಮುಂಬೈ: ರೈಲ್ವೇ ನಿಲ್ದಾಣದ ಬಳಿ ಕಾಲ್ತುಳಿತ: 22 ಮಂದಿ ಸಾವು

ಮುಂಬೈನ ಎಲ್ಫಿನ್‍ಸ್ಟೋನ್ ರೈಲ್ವೇ ನಿಲ್ದಾಣದ ಬಳಿ ಕಾಲ್ತುಳಿತ ಉಂಟಾದ ಪರಿಣಾಮ 22 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಮುಂಬೈ ನಗರದಲ್ಲಿ ಭಾರಿ ಮಳೆಯಿಂದಾಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಬೆಳಗ್ಗೆ 10.30ರ ವೇಳೆ ಪರೇಲ್...

ಶೂಟಿಂಗ್ ವೇಳೆ ಸಾವನ್ನಪ್ಪಿದ ಅನಿಲ್, ಉದಯ್ ಮೃತದೇಹಕ್ಕಾಗಿ ಮುಂದುವರೆದ ಶೋಧ ಕಾರ್ಯ

ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ ಮೇಲಿನಿಂದ ಕೆರೆಗೆ ಜಿಗಿಯುವ ಸಾಹಸಮಯ ದೃಶ್ಯ ಚಿತ್ರೀಕರಿಸುತ್ತಿದ್ದ ಸಮಯದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಖಳನಟರಾದ ಉದಯ್ ಹಾಗೂ ಅನಿಲ್ ಶವಕ್ಕಾಗಿ ಕಳೆದ 20 ಗಂಟೆಗಳಿಂದ ಶೋಧಕಾರ್ಯ ನಡೆಸುತ್ತಿದ್ದು, ಮಂಗಳವಾರವೂ ಮುಂದುವರಿದಿದೆ. ಈ ಚಿತ್ರದಲ್ಲಿ ದುನಿಯಾ...

ಅರುಣಾಚಲ ಪ್ರದೇಶ: ಮಾಜಿ ಸಿಎಂ ಕಲಿಖೋ ಪೌಲ್ ನಿಗೂಢ ಸಾವು

ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪೌಲ್ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ಪೌಲ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಟಾನಗರದಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ ಅವರು ನೇಣು ಬಿಗಿದುಕೊಂಡಿರುವುದಾಗಿ ವರದಿಯಾಗಿದೆ. ಮುಖ್ಯಮಂತ್ರಿ ಪದದಿಂದ...

ಅಸ್ಸಾಂನಲ್ಲಿ ಉಗ್ರರ ದಾಳಿ: 14 ಜನ ಬಲಿ

ಅಸ್ಸಾಂನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಿದ ಪರಿಣಾಮ 14 ಮಂದಿ ನಾಗರಿಕರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಅಸ್ಸಾಂನ ಕೋಕ್ರಾಝರ್ ನ ಜನನಿಬಿಡ ಮಾರ್ಕೆಟ್ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದ್ದು, ನಾಲ್ವರು ಭಯೋತ್ಪಾದಕರು ಜನರ...

ಜರ್ಮನ್ ನ ಮ್ಯೂನಿಚ್ ನಗರದ ಮಾಲ್ ಮೇಲೆ ಉಗ್ರರ ದಾಳಿ: 9 ಜನರು ಸಾವು

ಜರ್ಮನಿಯ ಮ್ಯೂನಿಚ್ ನಗರದ ಮಾಲ್ ವೊಂದರ ಮೇಲೆ ನಾಗರಿಕರನ್ನು ಗುರಿಯಾಗಿಸಿಕೊಂಡು ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 9 ಮಂದಿ ಸಾರ್ವಜನಿಕರು ಮೃತಪಟ್ಟಿದ್ದಾರೆ. ಬಂದೂಕುದಾರಿ ಸಹ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಿಟಿ ಒಲಿಂಪಿಕ್ ಪಾರ್ಕ್ ಗೆ ಸ್ಥಳೀಯ ಕಾಲಮಾನ ಸಂಜೆ 5.50...

ನೆಲಬಾಂಬ್ ಸ್ಪೋಟ: 10 ಸಿಆರ್​ಪಿಎಫ್ ಕಮಾಂಡೋಗಳು ಸಾವು

ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್​ಪಿಎಫ್ ಕಮಾಂಡೋಗಳು ಸಾವನ್ನಪ್ಪಿದ್ದು, 5 ಯೋಧರು ಗಾಯಗೊಂಡಿರುವ ಘಟನೆ ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳ ಗಡಿಯಲ್ಲಿ ನಡೆದಿದೆ. ಇಲ್ಲಿನ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡು ಈ ಘಟನೆ ನಡೆದಿದೆ....

ಆಫ್ಘಾನಿಸ್ಥಾನದ ಕಾಬೂಲ್ ನಲ್ಲ್ಲಿ ಆತ್ಮಾಹತ್ಯಾ ಬಾಂಬ್ ದಾಳಿ: 14 ಜನರು ಸಾವು

ಆಪ್ಘಾನಿಸ್ಥಾನದ ರಾಜಧಾನಿ ಕಾಬುಲ್ ನಲ್ಲಿ ಭದ್ರಾತಾ ಪಡೆ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ 14 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಭದ್ರಾತಾ ಪಡೆ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ಇದಾಗಿದ್ದು, ಇದಕ್ಕೆ ಆತ್ಮಹತ್ಯಾ ಬಾಂಬ್...

ಪುಟ್ಟಿಂಗಲ್‌ ದೇವಾಲಯದಲ್ಲಿ ಭೀಕರ ಅಗ್ನಿ ದುರಂತ: 80ಕ್ಕೂ ಹೆಚ್ಚು ಜನರ ಸಾವು

ಕೊಲ್ಲಂನ ಪರವೂರ್‌ ನ ಪುಟ್ಟಿಂಗಲ್‌ ದೇವಾಲಯದಲ್ಲಿ ಭಾನುವಾರ ನಸುಕಿನ ವೇಳೆ ಭೀಕರ ಅಗ್ನಿ ದುರಂತ ನಡೆದಿದ್ದು 86 ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ 1.30 ರ ವೇಳೆ ಮೂಕಾಂಬಿಕಾ ದೇವಾಲಯದ ಜಾತ್ರಾ ಮಹೋತ್ಸವದ...

ಚೆನೈ ಪ್ರವಾಹ ಪರಿಣಾಮಃ ಎಟಿಎಂ ,ಪೆಟ್ರೋಲ್ ಪಂಪ್ ಗಳಲ್ಲಿ ಉದ್ದದ ಸಾಲುಗಳು

ಪ್ರವಾಹದಿಂದಾಗಿ ನಲುಗಿರುವ ತಮಿಳುನಾಡು ರಾಜಧಾನಿ ಚೆನ್ನೈ ಶನಿವಾರ ಸಹಜ ಸ್ಥಿತಿಯತ್ತ ಮರಳಲು ಪ್ರಯತ್ನಿಸುತ್ತಿದೆ. ಭಾಗಶಃ ದೂರಸಂಪರ್ಕ ಮತ್ತು ರೈಲು ಸಂಚಾರ ಪ್ರಾರಂಭವಾಗಿದೆ. ಕೆಲವು ಪ್ರದೇಶಗಳಲ್ಲಿ, ರಸ್ತೆಯ ಮೇಲೆ ನೀರು ನಿಂತಿದ್ದರೂ, ವಾಹನಗಳು ಸಂಚರಿಸಬಹುದು. ತಮಿಳುನಾಡು ಸರ್ಕಾರದ ಪ್ರಕಾರ, ಧಾರಾಕಾರ ಸುರಿದ ಮಳೆಗೆ ಅಕ್ಟೋಬರ್...

ಹೆಲಿಕಾಪ್ಟರ್ ಪತನ,ಮಹಿಳಾ ಪೈಲಟ್ ಸೇರಿ 7 ವೈಷ್ಣೋದೇವಿ ಭಕ್ತರ ಸಾವು

ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ವೈಷ್ಣೋದೇವಿ ದರ್ಶನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಹೆಲಿಕಾಪ್ಟರ್ ಪತನವಾಗಿರುವ ದುರ್ಘಟನೆ ಜಮ್ಮು ಕಾಶ್ಮೀರದ ಕಾಟ್ರಾ ಬಳಿ ಸೋಮವಾರ ಸಂಭವಿಸಿದ್ದು, ಘಟನೆಯಲ್ಲಿ ಮಹಿಳಾ ಪೈಲಟ್ ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಹಿಮಾಲಯ ಹೆಲಿ ಸರ್ವಿಸ್ ಖಾಸಗಿ ಸಂಸ್ಥೆಯ ಈ ಹೆಲಿಕಾಪ್ಟರ್...

ಬಿಎಂಟಿಸಿ ಬಸ್ ಹಾಗೂ ಬೈಕ್ ಡಿಕ್ಕಿ, ಓರ್ವ ಯುವಕನ ಸಾವು

ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯದಲ್ಲಿ ನಡೆದಿದೆ. 21 ವರ್ಷದ ಜಬೀವುದ್ದೀನ್ ಮೃತ ಯುವಕ. ಶನಿವಾರ ರಾತ್ರಿ 8.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ...

ಡಿ ಕೆ ರವಿ ಸಾವು ಕೊಲೆಯಲ್ಲ, ಆತ್ಮಹತ್ಯೆಃ ಸಿಬಿಐ

ದಕ್ಷ ಐಎಎಸ್ ಅಧಿಕಾರಿ ಡಿ ಕೆ ರವಿಯ ನಿಗೂಢ ಸಾವಿನ ತನಿಖೆ ನಡೆಸಿದ ಸಿಬಿಐ ಇದು ಕೊಲೆಯಲ್ಲ ಅತ್ಮಹತ್ಯೆ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು (ಬಿ ರಿಪೋರ್ಟ್) ಸೋಮವಾರ ಅಥವಾ ಮಂಗಳವಾರ ತಾಲೂಕು ಮ್ಯಾಜಿಸ್ಟ್ರೇಟ್‌ಗೆ...

ಹಜ್ ಕಾಲ್ತುಳಿತದಲ್ಲಿ 14 ಭಾರತೀಯರ ಸಾವು

ಗುರುವಾರ ಮೆಕ್ಕಾದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಸುಮಾರು 700 ಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವನಪ್ಪಿದ್ದು ಅವರಲ್ಲಿ 14 ಭಾರತೀಯರೂ ಸೇರಿದ್ದಾರೆ. ಸುಮಾರು 860 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. 14 ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವೆ...

ಹಳಿ ತಪ್ಪಿದ ದುರಂತೋ ಎಕ್ಸ್ ಪ್ರೆಸ್; ಇಬ್ಬರ ಸಾವು, ಎಂಟು ಜನರಿಗೆ ಗಾಯ

ಶನಿವಾರ ಮುಂಜಾನೆ ಕಲಬುರಗಿಯ ಚಿತ್ತಾಪುರ ತಾಲೂಕಿನ ಮರತೂರ ಎಂಬಲ್ಲಿ ದುರಂತೋ ಎಕ್ಸ್ ಪ್ರೆಸ್ ನ ಸುಮಾರು 8 ಬೋಗಿಗಳು ಹಳಿತಪ್ಪಿದ ಪರಿಣಾಮ ಇಬ್ಬರು ಮರಣ ಹೊಂದಿದ್ದು, ಎಂಟು ಜನರಿಗೆ ಗಾಯಗಳಾಗಿವೆ. ಕಲಬುರಗಿಯಿಂದ 20 ಕಿ.ಮಿ. ದೂರದಲ್ಲಿರುವ ಮರತೂರು ರೈಲ್ವೇ ನಿಲ್ದಾಣದಲ್ಲಿ ಈ ದುರ್ಘ‌ಟನೆ...

ಜಾರ್ಖಂಡ್ ನಲ್ಲಿ ಕಾಲ್ತುಳಿತಕ್ಕೆ 11 ಸಾವು, ಸುಮಾರು 50 ಜನರಿಗೆ ಗಾಯ

ಸೋಮವಾರ ಬೆಳಗಿನ ಜಾವ+- ಜಾರ್ಖಂಡ್ ನ ಡಿಯೋಘರ್ ಪಟ್ಟಣದ ಬೈದ್ಯನಾಥ್ ಧಾಮ್ ದೇವಾಲಯದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು ಸುಮಾರು 50 ಜನರಿಗೆ ಗಾಯಗಳಾಗಿವೆ. ಯಾತ್ರಾರ್ಥಿಗಳು ದೇವಸ್ಥಾನದ ಹೊರಗೆ ಬಾಗಿಲು ತೆರೆಯಲು ಕಾಯುತ್ತಿದ್ದರು. ಯಾತ್ರಾರ್ಥಿಗಳಿಗೆ ದರ್ಶನಕ್ಕಾಗಿ ಬೆಳಗ್ಗೆ 4:30 ಕ್ಕೆ ಬಾಗಿಲು...

ರೈತರ ಸರಣಿ ಆತ್ಮಹತ್ಯೆ: ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಜ್ಜು

ಕರ್ನಾಟಕ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿದಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲು ರಾಜ್ಯ ಬಿಜೆಪಿ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ 20 ಸಮಾವೇಶಗಳನ್ನು ನಡೆಸಿ ರೈತರ ಆತ್ಮಹತ್ಯೆ ತಡೆಯಲು ಜಾಗೃತಿ ಮೂಡಿಸಲು ಹಾಗೂ ರೈತರ ಸಾವು ತಡೆಯುವಲ್ಲಿ...

ಅಮೆರಿಕದಲ್ಲಿ ಥಿಯೇಟರ್ ಗೆ ನುಗ್ಗಿ ಗುಂಡಿನ ದಾಳಿ, ಇಬ್ಬರ ಸಾವು

ಅಮೆರಿಕದ ಗನ್ ಸಂಸ್ಕೃತಿ ಇನ್ನಷ್ಟು ಜೀವಗಳನ್ನು ಬಲಿತೆಗೆದುಕೊಂಡಿದೆ. ಅಮೆರಿಕದ ಲೂಸಿಯಾನಾದ ಲಫಾಯಟ್ಟೆಯ ಚಿತ್ರಮಂದಿರದೊಳಗೆ ನುಗ್ಗಿದ ೫೮ ವರ್ಷದ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ನಂತರ...

ಐಸಿಸ್ ಸೇರಿದ್ದ ಕರ್ನಾಟಕದ ಮೂವರು ಯುವಕರು ಸಾವು

ಕರ್ನಾಟಕದಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಮೂವರು ಯುವಕರು, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರು ಬೆಂಗಳೂರಿನವರಾಗಿದ್ದಾರೆ ದೆಹಲಿಯಿಂದ ಇತ್ತೀಚಿಗಷ್ಟೆ ಬಂದಿರುವ ಗುಪ್ತಚರ ಸಂಸ್ಥೆಯ ವರದಿಯಲ್ಲಿ ಈ ಯುವಕರು ಎರಡು ವರ್ಷದ ಮುಂಚೆಯೇ ಇಸ್ಲಾಮಿಕ್ ಸ್ಟೇಟ್ ಸೇರಿದ್ದು,...

ಮಣಿಪುರದಲ್ಲಿ ಉಗ್ರರ ದಾಳಿ: 20 ಸೈನಿಕರು ಬಲಿ

ಮಣಿಪುರದ ಚಂದೇಲ್‌ ಎಂಬಲ್ಲಿ ಉಗ್ರರು ಸೈನಿಕರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ 20 ಸೈನಿಕರು ಸಾವನ್ನಪ್ಪಿದ ದುರ್ಘ‌ಟನೆ ನಡೆದಿದೆ. 6 ನೇ ಡೋಗ್ರಾ ರೆಜಿಮೆಂಟ್‌ ನ ಸೈನಿಕರು ಇಂಪಾಲದ ಕಡೆಗೆ ತೆರಳುತ್ತಿದ್ದಾಗ ಹೊಂಚು ಹಾಕಿ ಕಾಯುತ್ತಿದ್ದ ಉಗ್ರರು...

ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಬಿಸಿಲಿಗೆ 225 ಜನರ ಸಾವು

ದೇಶಕ್ಕೆ ಮುಂಗಾರು ಆಗಮಿಸಲು ದಿನಗಣನೆ ಆರಂಭವಾಗಿರುವಂತೆಯೇ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣವೊಂದರಲ್ಲೇ ಕಳೆದ ಮೂರು ದಿನಗಳಲ್ಲಿ ಬಿಸಿ ಗಾಳಿಯಿಂದಾಗಿ ಬರೋಬ್ಬರಿ 225 ಜನರು ಸಾವನ್ನಪ್ಪಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್‌...

42 ವರ್ಷಗಳಿಂದ ಕೋಮಾಲ್ಲಿದ್ದ ಅರುಣಾ ಶಾನಭಾಗ್ ನಿಧನ

ಕಳೆದ 42 ವರ್ಷಗಳ ಹಿಂದೆ ಅತ್ಯಾಚಾರ ಹಾಗೂ ಹಲ್ಲೆಗೊಳಗಾಗಿ ಕೋಮಾದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ನರ್ಸ್ ಅರುಣಾ ಶಾನಭಾಗ್ ಮುಂಬೈನ ಕೆಇಎಂ (ಕಿಂಗ್ ಎಡ್ವರ್ಡ್ ಮೆಮೋರಿಯಲ್)ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಖಚಿತಪಡಿದ್ದಾರೆ. ಕಳೆದ ಮೂರು ದಿನಗಳಿಂದ ಅರುಣಾ ಶಾನಭಾಗ್ ನಿಮೋನಿಯಾದಿಂದ...

ಸುನಂದಾ ಪುಷ್ಕರ್ ಸಾವು ಪ್ರಕರಣ: ಸಾಕ್ಷಿಗಳ ಮಂಪರು ಪರೀಕ್ಷೆಗೆ ಮನವಿ

ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮುಖ್ಯ ಸಾಕ್ಷಿಗಳನ್ನು ಮಂಪರು ಪರೀಕ್ಷೆಗೊಳಪಡಿಸಲು ಅನುಮತಿ ಕೇಳಿ ದೆಹಲಿ ಪೊಲೀಸರು ಪಾಟಿಯಾಲ ಹೌಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾಜಿ ಕೇಂದ್ರ ಸಚಿವ ಶಶಿ ತರೂರ್ ಸಹಾಯಕ ನಾರಾಯಣ್ ಸಿಂಗ್, ಚಾಲಕ ಬಜರಂಗಿ ಹಾಗೂ...

ಕಾಬೂಲ್ ನಲ್ಲಿ ಉಗ್ರರ ದಾಳಿ: ಭಾರತೀಯರು ಸೇರಿ 7 ಜನರ ಸಾವು

ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನ ಅತಿಥಿಗೃಹವೊಂದರಲ್ಲಿ ವಿದೇಶಿಯರ ಔತಣಕೂಟದ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಭಾರತೀಯರು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಪಾರ್ಕ್ ಪ್ಯಾಲೇಸ್ ಗೆಸ್ಟ್ ಹೌಸ್ ಮೇಲೆ ಗನ್ ಧಾರಿ ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ...

ಪಾಕ್ ನಲ್ಲಿ ಭಯೋತ್ಪಾದಕರ ಅಟ್ಟಹಾಸ: 43 ಪ್ರಯಾಣಿಕರ ಬಲಿ

ಪಾಕಿಸ್ತಾನದ ಕರಾಚಿಯಲ್ಲಿ ಉಗ್ರರು ಅಟ್ಟಹಾಸ ಮೆರಿದ್ದಾರೆ. ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ 43 ಜನರು ಬಲಿಯಾಗಿದ್ದಾರೆ. ಕರಾಚಿಯ ಸಫೂರಾ ಚೌಕ್ ಬಳಿ ಮೂರು ಬೈಕ್ ಗಳಲ್ಲಿ ಬಂದ 6 ಜನ ಉಗ್ರರು ಏಕಾ ಏಕಿ ಬಸ್ ನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ....

ಪಶ್ಚಿಮ ಬಂಗಾಳ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 11 ಮಂದಿ ಬಲಿ

ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಸುಮಾರು 11 ಮಂದಿ ಸಾವನ್ನಪ್ಪಿದ್ದು, ಏಳು ಕಾರ್ಮಿಕರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಪಿಂಗ್ಲಾ ಎಂಬಲ್ಲಿ ಈ ಸ್ಫೋಟ ದುರಂತ ಸಂಭವಿಸಿದೆ. ಪಟಾಕಿ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 11...

ಐಸಿಸ್ ಸೇರಿದ್ದ ಹೈದರಾಬಾದ್ ಯುವಕ ಸಿರಿಯಾದಲ್ಲಿ ಬಲಿ

ಐಸಿಸ್ ಉಗ್ರಗಾಮಿ ಸಂಘಟನೆ ಸೇರಿದ್ದ ಹೈದರಾಬಾದ್ ನ ಇಂಜಿನಿಯರಿಂಗ್ ವಿದ್ಯಾರ್ಥಿ, ಸಿರಿಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾವನ್ನಪ್ಪಿರುವುದಾಗಿ ಗುಪ್ತಚರ ಮೂಲಗಳು ಮಾಹಿತಿ ತಿಳಿಸಿವೆ. ಸಾವನ್ನಪ್ಪಿರುವ ವಿದ್ಯಾರ್ಥಿ 25ವರ್ಷದ ಹನೀಫ್ ವಾಸೀಂ ಎಂದು ತಿಳಿದುಬಂದಿದೆ. 2014ರ ನವೆಂಬರ್ ನಲ್ಲಿ ಇಂಜಿನಿಯರಿಂಗ್ ಕಲಿಯಲು ಲಂಡನ್ ಗೆ ತೆರಳಿದ್ದ....

ಐಸಿಸ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಬಗ್ದಾದಿ ಸಾವು

ಸಿರಿಯಾ, ಇರಾಕ್ ಗಳಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಐಸಿಸ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ಸಾವನ್ನಪ್ಪಿರುವುದಾಗಿ ರೇಡಿಯೋ ಇರಾನ್ ವರದಿ ಮಾಡಿದೆ. ಅಬು ಬಕರ್ ಅಲ್ ಬಗ್ದಾದಿ ಸಾವನ್ನಪ್ಪಿರುವುದಾಗಿ ರೇಡಿಯೋ ಇರಾನ್ ವರದಿ ಮಾಡಿರುವುದಾಗಿ ಆಲ್ ಇಂಡಿಯಾ ರೇಡಿಯೋ(ಎಐಆರ್) ಟ್ವೀಟ್...

ರೈತನ ಆತ್ಮಹತ್ಯೆ ಪ್ರಕರಣ: ಲೋಕಸಭೆಯಲ್ಲಿ ಪ್ರತಿಧ್ವನಿ

ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿದ್ದ ರೈತರ ರ್ಯಾಲಿಯಲ್ಲಿ ಪ್ರತಿಭಟನಾಕಾರರ ಎದುರೇ ಆತ್ಮಹತ್ಯೆಗೆ ಶರಣಾಗಿದ್ದ ರಾಜಸ್ತಾನದ ರೈತ ಗಜೇಂದ್ರ ಸಿಂಗ್ ಪ್ರಕರಣ ಸಂಸತ್ ನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿ ಗದ್ದಲ, ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಆಪ್...

ಛತ್ತೀಸ್ ಗಢದಲ್ಲಿ ನಕ್ಸಲ್ ಅಟ್ಟಹಾಸ: 6 ಯೋಧರ ಸಾವು

ಛತ್ತೀಸ್‌ ಗಢದಲ್ಲಿ ಅಟ್ಟಹಾಸ ಮುಂದುವರಿಸಿರುವ ನಕ್ಸಲರು ಭದ್ರತಾ ಪಡೆಗಳ ಮೇಲೆ ಗುಂಡು ಹಾಗೂ ನೆಲಬಾಂಬ್‌ ಬಳಸಿ ಮತ್ತೆರಡು ದಾಳಿಗಳನ್ನು ನಡೆಸಿದ್ದಾರೆ. ಈ ಘಟನೆಗಳಲ್ಲಿ 6 ಯೋಧರು ಹತರಾಗಿ, 8 ಮಂದಿ ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ. ಶನಿವಾರದಿಂದ ಮಾವೋವಾದಿ ನಕ್ಸಲರು ನಡೆಸುತ್ತಿರುವ ನಾಲ್ಕನೇ...

ಛತ್ತೀಸ್ ಗಢದಲ್ಲಿ ಮುಂದುವರೆದ ನಕ್ಸಲ್ ಅಟ್ಟಹಾಸ: ಬಿ.ಎಸ್.ಎಫ್ ಜವಾನ ಬಲಿ

ಛತ್ತೀಸ್ ಗಢದ ಕಾಂಕೇರ್ ಜಿಲ್ಲೆಯಲ್ಲಿ ನಕ್ಸಲೀಯರು ತಮ್ಮ ಅಟ್ಟಹಾಸ ಮುಂದುವರಿಸಿದ್ದು, ನಕ್ಸಲ್ ದಾಳಿಗೆ ಬಿ.ಎಸ್.ಎಫ್ ಜವಾನನೊಬ್ಬ ಸಾವನ್ನಪ್ಪಿದ್ದಾರೆ. ಛೋಟೆ ಭಾಯ್ ತಿಯಾ ಬಿ.ಎಸ್.ಎಫ್ ಕ್ಯಾಂಪ್ ನಡಿಯಲ್ಲಿ ಬರುವ ಬಾಂಡೆ ಪೊಲೀಸ್ ಠಾಣೆ ಪ್ರದೇಶದಲ್ಲಿ ಮಾವೋವಾದಿಗಳು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ...

ಅಸ್ಸಾಂನಲ್ಲಿ ಗ್ರೆನೇಡ್ ಸ್ಫೋಟ: ಓರ್ವ ಸಾವು

ಗ್ರೆನೇಡ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂನ ರೌಟಾ ಮಾರ್ಕೆಟ್ ಪ್ರದೇಶದಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ರಾಮಚಂದ್ರ ಬರ್ಮನ್ ಎಂದು ಗುರಿತಿಸಲಾಗಿದ್ದು,...

44 ಕಾಲ್ ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ: ಸಿಎಂಗೆ ಎಚ್ ಡಿಕೆ ಸವಾಲು

ಐಎಎಸ್ ಅಧಿಕಾರಿ ಡಿ.ಕೆ.ರವಿ ಅನುಮಾನಾಸ್ಪದ ಸಾವಿನ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪಕ್ಕೆ ಬಿಜೆಪಿ ಮತ್ತು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ವಿರುದ್ಧವೆ ವಿಪಕ್ಷಗಳು ಮುಗಿಬಿದ್ದಿವೆ. ವಿಧಾನಸಭೆಯ ಕಲಾಪದಲ್ಲಿ ಡಿ.ಕೆ.ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾಗಿ ಘೋಷಿಸುವ...

ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ಕೊನೆಗೂ ಸಿಬಿಐ ತನಿಖೆಗೆ ಒಪ್ಪಿಸಿದ ಸರ್ಕಾರ

ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಜ್ಯದ ಜನತೆ, ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ನಿರೀಕ್ಷೆಯಂತೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಸೋಮವಾರ ವಿಧಾನಮಂಡಲದ ಕಲಾಪ ಆರಂಭವಾಗುತ್ತಿದ್ದಂತೆಯೇ ರವಿ ಸಾವಿನ ಪ್ರಕರಣದ...

ಡಿ.ಕೆ.ರವಿ ಸಾವು ಪ್ರಕರಣದ ತನಿಖೆ ಸಿಬಿಐಗೆ ವಹಿಸುವ ಬಗ್ಗೆ ಸೋಮವಾರ ಪ್ರಕಟ: ಸಿಎಂ

ದಕ್ಷ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಹಿನ್ನೆಲೆಯಲ್ಲಿ ದಟ್ಟೈಸುತ್ತಿರುವ ಜನಾಕ್ರೋಶ ರಾಷ್ಟ್ರಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ತುಸು ಮೆತ್ತಗಾದಂತಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸುವ ದಿಸೆಯಲ್ಲಿ ಗಂಭೀರ ಚಿಂತನೆ ಆರಂಭಿಸಿದೆ. ಡಿ.ಕೆ ರವಿ ಅವರ ನಿಗೂಢ ಸಾವಿನ ಬಗ್ಗೆ ಸಿಎಂ...

ಅಧಿಕಾರಿಗೆ ವರ್ತೂರು ಪ್ರಕಾಶ್ ಧಮ್ಕಿ: ಆಡಿಯೋ ಟೇಪ್ ಬಯಲು

ದಕ್ಷ ಐಎಎಸ್‌ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಆಘಾತಕಾರಿ ಮಾಹಿತಿಗಳು ಲಭ್ಯವಾಗುತ್ತಿವೆ. ರವಿ.ಕೋಲಾರ ಡಿಸಿಯಾಗಿದ್ದಾಗ ಶಾಸಕ ವರ್ತೂರು ಪ್ರಕಾಶ್, ಕೆಳಹಂತದ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿರುವ ಬಗ್ಗೆ ಜೆಡಿಎಲ್ ಪಿ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ...

ಸಿ.ಎಂ ಗೆ ಹೈಕಮಾಂಡ್ ತರಾಟೆ: ರವಿ ಸಾವು ಪ್ರಕರಣದ ಬಗ್ಗೆ ಸಿಬಿಐ ತನಿಖೆ ಸಾಧ್ಯತೆ

ಐ.ಎ.ಎಸ್ ಅಧಿಕಾರಿ ರವಿ ಅವರ ನಿಗೂಢ ಸಾವು ಪ್ರಕರಣದಲ್ಲಿ ರಾಜ್ಯದ ಜನತೆಯ ಒತ್ತಾಯಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದೆ. ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ...

ಡಿ.ಕೆ.ರವಿ ಸಾವಿನ ಪ್ರಕರಣದ ತನಿಖೆ ಬೆನ್ನಲ್ಲೇ ಸಿಐಡಿ ಐಜಿಪಿ ಎತ್ತಂಗಡಿ

ಐಎಎಸ್‌ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಮರುದಿನವೇ ಸಿಐಡಿ ಐಜಿಪಿ ಪ್ರಣವ್‌ ಮೊಹಾಂತಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಖಡಕ್‌ ಅಧಿಕಾರಿಯೆಂದೇ ಹೆಸರು ಪಡೆದ ಪ್ರಣವ್‌ ಮೊಹಾಂತಿ ಅವರನ್ನು ಸಿಐಡಿ ವಿಭಾಗದಿಂದ ಲೋಕಾಯುಕ್ತಕ್ಕೆ ಸರ್ಕಾರ...

ಸಿಐಡಿ ಅಧಿಕಾರಿ ಎತ್ತಂಗಡಿ: ತನಿಖೆ ದಿಕ್ಕು ತಪ್ಪಿಸುವ ಹುನ್ನಾರ -ಶೆಟ್ಟರ್

ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸಿಐಡಿ ಅಧಿಕಾರಿ ಪ್ರಣವ್ ಮೊಹಂತಿಯವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದರ ಹಿಂದೆ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರವಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣವನ್ನು...

ಪ್ರಣವ್ ಮೊಹಾಂತಿ ವರ್ಗಾವಣೆ ತಡೆ ಹಿಡಿದ ರಾಜ್ಯ ಸರ್ಕಾರ

ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ತನಿಖೆಯ ಹೊಣೆಯನ್ನು ರಾಜ್ಯ ಸರ್ಕಾರ ಮತ್ತೆ ಸಿಐಡಿ ಐಜಿಪಿ ಪ್ರಣವ್ ಮೊಹಾಂತಿ ಹೆಗಲಿಗೇರಿಸಿದೆ. ಆ ಮೂಲಕ ಪ್ರಣವ್ ಮೊಹಾಂತಿ ವರ್ಗಾವಣೆಯನ್ನು ತಡೆ ಹಿಡಿಯುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದೆ. ಡಿ.ಕೆ.ರವಿ...

ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ಸಿಂಹ ಎಂದೂ ಆತ್ಮಹತ್ಯೆ ಮಾಡಿಕೊಳ್ಳಲ್ಲ-ಈಶ್ವರಪ್ಪ

ಧಕ್ಷ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಪ್ರಾಮಾಣಿಕ ಅಧಿಕಾರಿ ಡಿ.ಕೆ ರವಿ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ತಿಳಿಸಿದ್ದಾರೆ. ಅವರಂತ ಪ್ರಾಮಾಣಿಕ ಅಧಿಕಾರಿ ನಮ್ಮನ್ನು ಅಗಲಿದ್ದಾರೆ ಎನ್ನಲು ದುಖವಾಗಿತ್ತದೆ....

ಪಾಕ್ ನ 2 ಚರ್ಚ್ ಮೇಲೆ ಆತ್ಯಾಹುತಿ ಬಾಂಬ್ ದಾಳಿ: 10ಕ್ಕೂ ಹೆಚ್ಚು ಜನರು ಬಲಿ

ತಾಲಿಬಾನ್ ಆತ್ಮಹತ್ಯಾ ಬಾಂಬರ್ ಗಳು ಲಾಹೋರ್ ನಲ್ಲಿನ ಎರಡು ಚರ್ಚ್ ಗಳನ್ನು ಗುರಿಯಾಗಿರಿಸಿಕೊಂಡು ನಡೆಸಿದ ದಾಳಿಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ತಾಲಿಬಾನ್ ಉಗ್ರರು ಯೂಹಾನಾಬಾದ್ ಪ್ರದೇಶದಲ್ಲಿರುವ ರೋಮನ್ ಕ್ಯಾಥೋಲಿಕ್ ಚರ್ಚ್ ಹಾಗೂ ಕ್ರೈಸ್ಟ್ ಚರ್ಚ್...

ನಾಗ್ಪುರದಲ್ಲಿ ಓವೈಸಿ ರ್ಯಾಲಿ ರದ್ದುಗೊಳಿಸಲು ಬಿಜೆಪಿ, ಶಿವಸೇನೆ ಒತ್ತಾಯ

ಫೆ.28ರಂದು ನಾಗ್ಪುರದಲ್ಲಿ ನಡೆಯಲಿರುವ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ರ್ಯಾಲಿಗೆ ಅನುಮತಿ ನೀಡಬಾರದು ಎಂದು ಬಿಜೆಪಿ ಹಾಗೂ ಶಿವಸೇನೆ ಒತ್ತಾಯಿಸಿವೆ. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ನಡೆಯಲಿರುವ ಅಸಾವುದ್ದೀನ್ ಓವೈಸಿಯ ಮೊದಲ ರ್ಯಾಲಿ ಇದಾಗಿದ್ದು, ಓವೈಸಿಯ ಪ್ರಥಮ ರ್ಯಾಲಿಗೆ ಬಿಜೆಪಿ, ಶಿವಸೇನೆಯಿಂದ ತೀವ್ರ ವೀರೊಧ...

ಅಸಾವುದ್ದೀನ್ ಓವೈಸಿ ಬೆಂಗಳೂರು ಪ್ರವೇಶ ನಿರ್ಬಂಧಕ್ಕೆ ಗೃಹ ಸಚಿವರ ಸಮರ್ಥನೆ

'ಎಂಐಎಂ' ಮುಖಂಡ ಅಸಾವುದ್ದೀನ್ ಓವೈಸಿಗೆ ನಿರ್ಬಂಧ ವಿಧಿಸಿರುವುದನ್ನು ಗೃಹ ಸಚಿವ ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಓವೈಸಿ ನಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ. ಪೊಲೀಸರು ತೆಗೆದುಕೊಂಡ ಕ್ರಮದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಶಿವಾಜಿನಗರದ...

ಎಂಐಎಂ ಸಮಾವೇಶ: ಬೆಂಗಳೂರು ಪ್ರವೇಶಿಸದಂತೆ ಅಸಾವುದ್ದೀನ್ ಓವೈಸಿಗೆ ನಿರ್ಬಂಧ

ಫೆ.20ರಂದು ಬೆಂಗಳೂರಿನ ಶಿವಾಜಿನಗರದಲ್ಲಿ ನಡೆಯಬೇಕಿದ್ದ ಎಂಐಎಂ ಸಮಾವೇಶದಲ್ಲಿ ಭಾಗವಹಿಸಂದತೆ ಎಂಐಎಂ ಪಕ್ಷ ಮುಖಂಡ ಅಸಾವುದ್ದೀನ್ ಓವೈಸಿಗೆ ಬೆಂಗಳೂರು ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಕಾರ್ಯಕ್ರಮದ ಕೇಂದ್ರಬಿಂದುವಾಗಬೇಕಿದ್ದ ಪಕ್ಷದ ಮುಖಂಡನಿಗೆ ಬೆಂಗಳೂರು ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ. ಅಸಾವುದ್ದೀನ್...

ಲಾಹೋರ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: 8ಕ್ಕೂ ಹೆಚ್ಚು ಸಾವು

ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 8ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಪೊಲೀಸರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿರುವ ಉಗ್ರರು ಪೊಲೀಸ್ ವಸತಿ ಸಮುಚ್ಚಯದ ಪಕ್ಕದಲ್ಲೇ ಈ ಕೃತ್ಯ ಎಸಗಿದ್ದಾರೆ. ಘಟನೆಯ...

ಅಸಾವುದ್ದೀನ್ ಒವೈಸಿಗೆ ನಿರ್ಬಂಧ ಹೇರಿದ ಪುಣೆ ಪೊಲೀಸರ ಕ್ರಮ ಸ್ವಾಗತಿಸಿದ ಶಿವಸೇನೆ

'ಮುಸ್ಲಿಂ ಮೀಸಲಾತಿ' ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪುಣೆ ಪೊಲೀಸರು ಮಜ್ಲಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌(ಎಂಐಎಂ) ಸಂಘಟನೆ ಮುಖಂಡ ಅಸಾವುದ್ದೀನ್ ಒವೈಸಿಗೆ ನಿರ್ಬಂಧ ಹೇರಿದ್ದಾರೆ. ಪುಣೆ ಪೊಲೀಸರ ಈ ಕ್ರಮವನ್ನು ಶಿವಸೇನೆ ಸ್ವಾಗತಿಸಿದೆ. ಅಸಾವುದ್ದೀನ್ ಒವೈಸಿ ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಹಿನ್ನೆಲೆಯಲ್ಲಿ ಮುಸ್ಲಿಂ...

ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್‌ಗೆ ನೋಟೀಸ್

ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರಿಗೆ ದೆಹಲಿ ಪೋಲೀಸರು ನೋಟೀಸ್ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿ ಶಶಿ ತರೂರ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಆಯುಕ್ತ...

ಸುನಂದಾ ಜತೆ ಸಣ್ಣ ಮನಸ್ತಾಪವಿತ್ತು: ತರೂರ್

ಪತ್ನಿ ಸುನಂದಾ ಪುಷ್ಕರ್‌ ಸಾವಿನ ಬಳಿಕ ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಪೊಲೀಸರಿಗೆ ನೀಡಿದ್ದ ಮೊದಲ ಹೇಳಿಕೆ ಈಗ ಬಹಿರಂಗಗೊಂಡಿದೆ. ಈ ಹೇಳಿಕೆಯಲ್ಲಿ ಸುನಂದಾ ಜತೆ ಸಣ್ಣ ಮನಸ್ತಾಪವಿತ್ತು. ಆದರೆ, ಅವೆಲ್ಲವೂ ಬಗೆಹರಿದಿದ್ದವು ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು. ಸುನಂದಾ ನಿಗೂಢವಾಗಿ...

ಸುನಂದಾ ಪುಷ್ಕರ್ ಸಾವು ಪ್ರಕರಣ: ದೆಹಲಿ ಪೊಲೀಸರಿಗೆ ತರೂರ್ ಪತ್ರ

ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣ ಕುರಿತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಸುನಂದಾ ಸಾವಿನ ಬಗ್ಗೆ ನನಗೆ ಹಲವು ಸಂದೇಹವಿದೆ. ಸುನಂದಾ ಪತಿಯಾಗಿ ಆಕೆಯ ಹತ್ಯೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ ಎಂದಿದ್ದಾರೆ. ಕೇವಲ...

ಸುನಂದಾ ಪುಷ್ಕರ್ ಪ್ರಕರಣ: ಶಶಿ ತರೂರ್ ಗೆ ನೋಟಿಸ್

ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ದೆಹಲಿ ಪೊಲೀಸರು ನೋಟೀಸ್ ನೀಡಿದ್ದಾರೆ. ಪ್ರಸ್ತುತ ಶಶಿ ತರೂರ್ ಕೇರಳದಲ್ಲಿದ್ದು, ಆದಷ್ಟು ಬೇಗ ತನಿಖೆಗೆ ಸಹಕರಿಸುವಂತೆ ನೋಟೀಸ್ ನೀಡಲಾಗಿದೆ. ಸೆಕ್ಷನ್ ಸಿಆರ್‌ಪಿಸಿ 160ರಡಿಯಲ್ಲಿ ತರೂರ್ ಅವರನ್ನು ವಿಚಾರಣೆಗೆ...

ಪಾಕಿಸ್ತಾನಕ್ಕೆ ಸುಷ್ಮಾಸ್ವರಾಜ್ ತಾಕೀತು

ಜಮ್ಮು ವಲಯದಲ್ಲಿ ಅಂತರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾಪಡೆಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪಾಕಿಸ್ತಾನ ಪಡೆಯ ರೇಂಜರುಗಳು ಮೃತ ಪಟ್ಟಿರುವ ಬಗ್ಗೆ ಪಾಕಿಸ್ತಾನದ ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿದೆ. ಅಂತರಾಷ್ಟ್ರೀಯ ಗಡಿ ಮತ್ತು ಗಡಿನಿಯಂತ್ರಣ ರೇಖೆಯಲ್ಲಿ ಶಾಂತಿ ಮತ್ತು ಪ್ರಶಾಂತತೆಯನ್ನು ಕಾಪಾಡಿಕೊಳ್ಳಲು...

ಉತ್ತರಾಖಂಡ್ ನಲ್ಲಿ ಶಾಲಾ ಆವರಣದಲ್ಲಿ ಬಾಂಬ್ ಸ್ಫೋಟ: ಬಾಲಕ ಸಾವು

ಉತ್ತರಾಖಂಡ್ ನ ರೂರ್ಕಿ ಪ್ರದೇಶದಲ್ಲಿನ ದಾವ್ ಕಾಲೇಜು ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಾಲೆಯ ಪಕ್ಕದಲ್ಲಿದ್ದ ಕಸದ ತೊಟ್ಟಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 6ನೇ ತರಗತಿಯ ಬಾಲಕ ಸ್ಫೋಟಕ್ಕೆ ಬಲಿಯಾಗಿದ್ದಾನೆ. ಮೃತ ಬಾಲಕ, ಶಾಲೆಯ ಪಕ್ಕದ ಕಸದ ತೊಟ್ಟಿಯಲ್ಲಿದ್ದ...

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ 21 ಬಲಿ

ಶಾಂತ ರೀತಿಯಿಂದ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಳಿ ತಪ್ಪಿಸಲು ವ್ಯವಸ್ಥಿತ ರೀತಿಯಲ್ಲಿ ಅಖಾಡಕ್ಕೆ ಇಳಿದಿರುವ ಉಗ್ರರು, ಜಮ್ಮು- ಕಾಶ್ಮೀರದ ವಿವಿಧೆಡೆ ಶುಕ್ರವಾರ ಒಂದೇ ದಿನ ನಾಲ್ಕು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 11 ಭದ್ರತಾ ಸಿಬ್ಬಂದಿ, ಇಬ್ಬರು ನಾಗರಿಕರು ಸೇರಿ 21...

ಉಗ್ರರ ದಾಳಿಗೆ ಯೋಧರು ಸೇರಿ 6 ಜನ ಬಲಿ

ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯ ಮುನ್ನಾದಿನ ಇಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಭಾರೀ ದಾಳಿ ನಡೆಸಿರುವ ಉಗ್ರರ ಗುಂಪೊಂದು, ಮೂವರು ಯೋಧರು ಸೇರಿದಂತೆ 6 ಜನರನ್ನು ಬಲಿ ಪಡೆದಿದೆ. ಈ ವೇಳೆ ಯೋಧರು ನಡೆಸಿದ...

ಛತ್ತೀಸ್ ಗಢದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ 8 ಮಹಿಳೆಯರು ಸಾವು

ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ8 ಜನ ಮಹಿಳೆಯರು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಬಿಲಾಸ್ ಪುರ್ ನಲ್ಲಿ ನಡೆದಿದೆ. ಇಲ್ಲಿನ ಪೆಂಡಾರಿ ಕ್ಷೇತ್ರದಲ್ಲಿ ನ.8ರಂದು ರಾಜ್ಯಸರ್ಕಾರದ ವತಿಯಿಂದ ಸಂತಾನ ಹರಣ ಶಸ್ತ್ರಚಿಕಿತ್ಸಾ ಕ್ಯಾಂಪ್ ಆಯೋಜಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಪಡೆದ 8 ಮಹಿಳೆಯರು...

ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ: ಉಗ್ರರು ಬಲಿ

ಮನೆಯೊಂದರಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟಗೊಂಡು ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬರ್ದ್ವಾನ್ ನಲ್ಲಿ ನಡೆದಿದೆ. ಇಲ್ಲಿನ ಖಗ್ರಗರ್ ನ ಮನೆಯೊಂದರಲ್ಲಿ ಶಂಕಿತ ಉಗ್ರರು ಬಾಂಬ್ ತಯಾರಿಸುತ್ತಿದ್ದರು. ಈ ವೇಳೆ ಘಟನೆ ಸಂಬಂವಿಸಿದೆ. ಈ ಮನೆ ತೃಣಮೂಲ...

ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ಪ್ರವಾಹ: ಸಾವಿನ ಸಂಖ್ಯೆ 200ಕ್ಕೇರಿಕೆ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ಭೀಕರ ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರೆದಿದೆ. ಲಕ್ಷಾಂತರ ಜನರು ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ರಾಜಧಾನಿ ಶ್ರೀನಗರ , ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಂಡಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ...

ಗಡಿಯಲ್ಲಿ ಎನ್ ಕೌಂಟರ್: ನಾಲ್ವರು ಉಗ್ರರ ಸಾವು

ಜಮ್ಮು-ಕಾಶ್ಮೀರದ ಕುಪ್ವಾರದ ಬಳಿ ನಡೆದ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಭಯೋತ್ಪಾದಕರನ್ನು ಎನ್ ಕೌಂಟರ್ ಮಾಡಲಾಗಿದೆ. ಜಮ್ಮು-ಕಾಶ್ಮೀರದ ಕುಪ್ವಾರ ಬಳಿ ಭಾರತೀಯ ಸೇನೆಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ...

ಪಾಕ್ ನಿಂದ ಗುಂಡಿನ ದಾಳಿ: ಇಬ್ಬರು ನಾಗರಿಕರು ಬಲಿ

ಜಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಬಿಎಸ್ ಎಫ್ ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಜಮ್ಮುವಿನ ಅಂತರಾಷ್ಟ್ರೀಯ ಗಡಿ ಭಾಗದ ಆರ್.ಎಸ್.ಪುರ ಸೆಕ್ಟರ್ ಹಾಗೂ ಅರ್ನಿಯಾ ಪ್ರದೇಶಗಳಲ್ಲಿ 22 ಬಿಎಸ್ ಫ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited