Untitled Document
Sign Up | Login    
Dynamic website and Portals
  
August 17, 2015

ಮೋದಿ ಮೋಡಿಗೆ ಮಂತ್ರಮುಗ್ದವಾದ ದುಬೈ

ದುಬೈ ಕ್ರಿಕೇಟ್ ಸ್ಟೇಡಿಯಂನಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದುಬೈ ಕ್ರಿಕೇಟ್ ಸ್ಟೇಡಿಯಂನಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ದುಬೈ : ಎರಡು ದಿನದ ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸೋಮವಾರ ಸಂಜೆ ದುಬೈ ಕ್ರಿಕೇಟ್ ಸ್ಟೇಡಿಯಂನಲ್ಲಿ 5000 ಭಾರತೀಯರನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು ಃ

* ಭಾರತ್ ಮಾತಾಕೀ ಜೈ ಎನ್ನುವ ಘೋಷಣೆಯೊಂದಿಗೆ ಭಾಷಣ ಪ್ರಾರಂಭಿಸಿದ ಪ್ರಧಾನಿ ಮೋದಿ, ನೆರೆದ ಜನರಿಂದ ಮೋದಿ ಮೋದಿ ಅನ್ನುವ ಮಂತ್ರ.
* ಭಾರತದ ಮೂಲೆ ಮೂಲೆಗಳಿಂದ ಬಂದ ಭಾರತೀಯರನ್ನು ನಾನು ಅಭಿನಂದಿಸುತ್ತೇನೆ.
* ನೀವೆಲ್ಲರೂ ಬಹಳ ವರ್ಷಗಳಿಂದ ತುಂಬಾ ಕಷ್ಟಪಟ್ಟು ದುಡಿಯುತ್ತಿರುವ ಜನ. ಜೊತೆಗೆ ಭಾರತದ ಹೆಮ್ಮೆಯನ್ನು ಹೆಚ್ಚಿಸಿದ್ದೀರಿ.
* ಈ ದೇಶದಲ್ಲಿ ನಿಮ್ಮ ವರ್ತನೆಯ ಬಗ್ಗೆ ನಮಗೆ ಹೆಮ್ಮೆ ಇದೆ.
* ಭಾರತದಲ್ಲಿ ಮಳೆಯಾದರೂ, ನಮ್ಮನ್ನು ಸುರಕ್ಷಿತವಾಗಿಡಲು ದುಬೈಯಲ್ಲಿ ಜನ ಛತ್ರಿ ಬಿಚ್ಚುತ್ತಾರೆ.
* ಅಟಲ್ ಬಿಹಾರಿ ವಾಜಪಾಯಿ ಜೀ ಪ್ರಧಾನಿಯಾಗಿದ್ದಾಗ ಭಾರತ ಅಣು ಶಕ್ತಿ ಪರೀಕ್ಷೆ ನಡೆಸಿತ್ತು. ಇದರಿಂದ ಇಡೀ ಪ್ರಪಂಚಕ್ಕೇ ಗಾಬರಿಯಾಗಿತ್ತು.
* ಭಾರತದ ಮೇಲೆ ನಿರ್ಬಂಧ ಹೇರಲಾಗಿತ್ತು. ಈ ಸಮಯದಲ್ಲಿ ಅಟಲ್ ಜೀ ಅವರು ಪ್ರಪಂಚದ ಎಲ್ಲೆಡೆ ಇರುವ ಭಾರತೀಯರನ್ನು ದೇಶಕ್ಕೆ ಸಹಾಯ ಮಾಡಿ ಎಂದು ಕೇಳಿದ್ದರು.
* ಭಾರತದ ಖಜಾನೆ ತುಂಬುವುದರಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಅಪಾರ ಕೊಡುಗೆ ಇದೆ.
* ಭಾರತದ ಸ್ವಾತಂತ್ರ್ಯೂತ್ಸವದ ಸಂದರ್ಭದಲ್ಲಿ, ನಾನು ತಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
* ದುಬೈಯಲ್ಲಿ ಪ್ರಪಂಚದ ಪ್ರತಿಯೊಂದು ದೇಶದ ಜನರು ವಾಸಿಸುತ್ತಾರೆ. ಪ್ರಪಂಚದ ಅತೀ ಶೀತ ಪ್ರದೇಶದ ಜನರೂ ಸಹ ಇಲ್ಲಿನ 40ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಇಷ್ಟಪಡುತ್ತಾರೆ.
* ತನ್ನ ಆಯಸ್ಕಾಂತ ಶಕ್ತಿಯಿಂದ ಇಡೀ ಪ್ರಪಂಚವನ್ನೇ ತನ್ನೆಡೆ ಸೆಳೆದುಕೊಂಡ ದುಬೈನ ಸಾಮರ್ಥ್ಯವನ್ನು ಊಹಿಸಿಕೊೞಿ.
* ಕೇರಳದವರು ಇಲ್ಲಿ ತುಂಬಾ ಜನರಿದ್ದಾರೆ.
* ಪ್ರತಿ ವಾರ ಸುಮಾರು 700 ವಿಮಾನಗಳು ಯುಎಇ-ಭಾರತದ ಮಧ್ಯೆ ಹಾರಾಡುತ್ತವೆ. ಆದರೆ ಭಾರತದ ಪ್ರಧಾನಿ ಈ ದೇಶಕ್ಕೆ ಭೇಟಿ ನೀಡಲು 34 ವರ್ಷಗಳೇ ಹಿಡಿಯಿತು.
* ನಾನು ನನ್ನ ಎದುರು ಮಿನಿ ಭಾರತವನ್ನು ನೋಡುತ್ತಿದ್ದೇನೆ.
* ನಾನು ಇದಕ್ಕೂ ಮೊದಲು ಇಲ್ಲಿಗೆ ಬಂದಿರಲಿಲ್ಲ. ಪ್ರಧಾನಿಯಾಗಿ ಇಲ್ಲಿಗೆ ಬರುವುದನ್ನು ಊಹಿಸಿಕೊೞಿ.
* ನೀವು ನನ್ನ ಮೇಲೆ ಪ್ರೀತಿಯ ಮಳೆಗೈದಿದ್ದೀರಿ.
* ಯು.ಎ.ಇ. ಯ ಯುವರಾಜ ಮತ್ತು ಅವರ ಐದು ಜನ ಸಹೋದರರು ವಿಮಾನ ನಿಲ್ದಾಣದಲ್ಲಿ ನನ್ನನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಅವರಿಗೆ ನಾನು ಕೃತಜ್ನನಾಗಿರುತ್ತೇನೆ. ಅವರ ನನಗೆ ಈ ಎರಡು ದಿನಗಳಲ್ಲಿ ಕೊಟ್ಟ ಪ್ರೀತಿ ಗೌರವವನ್ನು ನಾನು ಜೀವನ ಪರ್ಯಂತ ಮರೆಯಲಾರೆ.
* ಈ ಪ್ರೀತಿ, ಗೌರವ ಒಬ್ಬ ವ್ಯಕ್ತಿಗಲ್ಲ. ಇದು 125 ಕೋಟಿ ಜನರಿಗೆ ಸಂದ ಗೌರವ.
* ಇದು ಬದಲಾಗುತ್ತಿರುವ ಭಾರತ್ಕ್ಕೆ ಸಂದ ಗೌರವ. ಭಾರತ ನಿಧಾನವಾಗಿ ಪ್ರಪಂಚದಲ್ಲಿ ತನ್ನದೇ ಆದ ಗುರುತನ್ನು ರೂಪಿಸಿಕೊೞುತ್ತಿದೆ.
* ಭಯೋತ್ಪಾದನೆಯ ಆಟಗಳಲ್ಲಿ ಅಮಾಯಕರು ಕೊಲ್ಲಲ್ಪಡುತ್ತಾರೆ. ಅವರು ಆತಂಕದ ವಾತವರಣ ಸೃಷ್ಟಿಸಲು ಬಯಸುತ್ತಾರೆ.
* ಇಂತಹ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಜಾಗ ಕೊಡಲು ಒಪ್ಪಿದ್ದಾರೆ.
* ಯು.ಎ.ಇ ಯ ಯುವರಾಜರನ್ನು ತಾವೆಲ್ಲ ಚಪ್ಪಳೆಯ ಮೂಲಕ ಅಭಿನಂದಿಸಬೇಕೆಂದು ಆಗ್ರಹಿಸುತ್ತೇನೆ.
* ಇಲ್ಲಿರುವ ಜನರಿಗೆ ಈ ನಿರ್ಧಾರದ ಪ್ರಾಮುಖ್ಯತೆ ಮತ್ತು ಮಹತ್ವ ಅರ್ಥವಾಗುತ್ತದೆ.
* ಭಾರತ- ಯುಎಇ ಇಂದು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಿಂದ ನನಗೆ ಖುಷಿಯಾಗಿದೆ. ನಿಮಗೂ ಈ ವಿಷಯ ತಿಳಿದು ಸಂತೋಷವಾಗುತ್ತದೆ. ಯುವರಾಜ ಅವರು ಭಾರತದಲ್ಲಿ 4.5 ಲಕ್ಷ ಕೋಟಿ ರೂ. ಹೂಡಿಕೆಯ ವಾಗ್ದಾನ ಮಾಡಿದ್ದಾರೆ.
* ಯುಎನ್ ನಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ಬೆಂಬಲ ನೀಡಿದ ಇಲ್ಲಿನ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ.
* ಯುಎಇ ಮತ್ತು ಭಾರತ ಇಂದು ಉಗ್ರವಾದದ ಕುರಿತು ಸ್ಪಷ್ಟ ಹೇಳಿಕೆ ನೀಡಿವೆ. ಅರ್ಥವಾಗುವವರಿಗೆ ಇದು ಅರ್ಥವಾಗುತ್ತದೆ. ಬುದ್ಧಿವಂತರಿಗೆ ಕೇವಲ ಸನ್ನೆಯಷ್ಟೇ ಸಾಕು.
* 30 ವರ್ಷಗಳ ನಂತರ 125 ಕೋಟಿ ಭಾರತೀಯರು ಬಹುಮತದಿಂದ ಸ್ಥಿರ ಸರ್ಕಾರ ರಚನೆಗೆ ಮಾಡಿದ್ದಾರೆ.
* ಪ್ರಪಂಚದ ಅತ್ಯ್ನ್ನತ ನಾಯಕರುಗಳನ್ನು ನಾನು ಭೇಟಿಯಾಗುತ್ತೇನೆ. ಅವರು ಮೋದಿಯ ಕೈಕುಲುಕಿದರೆ ಅವರು 125 ಕೋಟಿ ಭಾರತೀಯರನ್ನು ನೋಡುತ್ತಾರೆ ವಿನಃ ನನ್ನನ್ನಲ್ಲ. ಹಾಗೂ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯನ್ನು ನೋಡುತ್ತಾರೆ.
* ನಾವು ಮೇಕ್ ಇನ್ ಇಂಡಿಯಾ ಯೋಜನೇಯನ್ನು ಜಾರಿಗೊಳಿಸಿದ್ದೇವೆ. ಭಾರತ ಅವಕಾಶಗಳ ದೇಶ. ನಾವು ಅಲ್ಲಿ ಎಲ್ಲರನೂ ಸ್ವಾಗತಿಸುತ್ತೇವೆ. ಭಾರತ ಅದೃಷ್ಟ ದೇಶ, ಇಲ್ಲಿ ಜನಸಂಖ್ಯೆಯ ಶೇ 65ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
* ಇಂದು ಎಲ್ಲಾ ಆರ್ಥಿಕ ರೇಟಿಂಗ್ ಸಂಸ್ಥೆಗಳೂ ಸಹ ಭಾರತ ಅತೀ ವೇಗವಾಗಿ ಬೆಳೆಯುತ್ತಿರುವ ದೇಶ ಎಂದು ಹೇಳಿವೆ. ಭಾರತದಲ್ಲಿ ವಿದೇಶೀ ಬಂಡವಾಳ ಹೂಡಿಕೆ ಕಳೆದೊಂದು ವರ್ಷದಲ್ಲಿ ಶೇಕಡಾ 48ರಷ್ಟು ಹೆಚ್ಚಿದೆ.
* ಒೞೆಯ ಉಗ್ರವಾದ, ಕೆಟ್ಟ ಉಗ್ರವಾದ ಎಂಬುದಿಲ್ಲ. ಪ್ರತಿಯೊಬ್ಬರೂ ತಾವು ಉಗ್ರಾವಾದದ ಜೊತೆಗಿದ್ದೇವೆಯೋ ಅಥವಾ ಮಾನವೀಯತೆಯ ಜೊತೆಗಿದ್ದೇವೋ ಎಂದಷ್ಟೇ ನಿರ್ಧರಿಸಬೇಕು.
* ನಾಗಾಲ್ಯಾಂಡ ಸ್ವಾತಂತ್ರಾ ಪೂರ್ವದಿಂದಲೂ ಬಂಡಾಯಗಾರರ ಪ್ರಭಾವಕ್ಕೆ ತುತ್ತಾಗಿತ್ತು. ಆದರೆ ನಾನು ಇಂದು ತೃಪ್ತಿಯಿಂದ ಹೇಳುತ್ತೇನೆ, 60-70 ವರ್ಷಗಳ ನಂತರ, ಕಳೆದ ತಿಂಗಳು ಅವರ ಜೊತೆ ಮಾತುಕತೆ ನಡೆಸಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ.
* ಯಾವುದೇ ಸಮಸ್ಯೆಯನ್ನಾಗಲಿ ಮಾತುಕತೆ ನಡೆಸಿ ಬಗೆಹರಿಸಬೇಕಾಗುತ್ತದೆ.
* ಬಾಂಗ್ಲಾದೇಶ ಮಾತ್ತು ಭಾರತದ ನಡುವೆ ಗಡಿ ಸಮಸ್ಯೆ ಇತ್ತು. ಒಳನುಸುಳುವಿಕೆ ಸುಲಭವಾಗಿತ್ತು. ಭಾರತ ಈ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲು ಮುಂದಾಳತ್ವ ವಹಿಸಿತು. ಕಳೆದ ತಿಂಗಳು ಬಾಂಗ್ಲಾದೇಶದ ಅಧ್ಯಕ್ಷರನ್ನು ಭೇಟಿ ಮಾಡಿ ಗಡಿ ಸಮಸ್ಯೆ ಬಗೆಹರಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
* ಈಗ ದೆಹಲಿಯಲ್ಲಿ ಎಲ್ಲರಿಗೂ ಎಲ್ಲಾ ಕಡೆ ಕಾಣುವ ಸರ್ಕಾರವಿದೆ. ನೇಪಾಳಕ್ಕೆ ಸಂಕಷ್ಟ ಬಂದಾಗ ಕೆಲವೆ ಗಂಟೆಗಳಲ್ಲಿ ಭಾರತೀಯರು ಹೋಗಿ ನೆರವಿನ ಸಹಾಯ ಹಸ್ತ ಚಾಚಿದ್ದಾರೆ.
* ಸಾರ್ಕ್ ದೇಶಗಳಲ್ಲಿ ಕೆಲವರಿಗೆ ನಮ್ಮ ಜೊತೆ ಸಮಸ್ಯೆ ಇದೆ. ಆದರೆ ಅವರಿಗೆ ಸಮಸ್ಯೆ ಇದೆ ಎಂದು ನಾವು ನಮ್ಮ ಕೆಲಸ ನಿಲ್ಲಿಸುವುದಿಲ್ಲ. ನಾನು ಸಾರ್ಕ್ ಗೆ ಹೊಸತನ ನೀಡಲು ಪ್ರಯತ್ನಿಸುತ್ತಿದ್ದೇವೆ.
* ಸಾರ್ಕ್ ದೇಶಗಳ ಉಪಗ್ರಹವನ್ನು ಅಂತರಿಕ್ಷಕ್ಕೆ ಹಾರಿ ಬಿಡಲು ನಿರ್ಧರಿಸಲಾಗಿದೆ. ಇದರಿಂದ ದೊರಕುವ ಸೌಲಭ್ಯಗಳನ್ನು ಎಲ್ಲಾ ಸಾರ್ಕ್ ದೇಶಗಳಿಗೆ ಉಚಿತವಾಗಿ ನೀಡಲಾಗುವುದು.
* ಗಲ್ಫ್ ರಾಷ್ಟ್ರಗಳಲ್ಲಿರುವವರು ತಮ್ಮ ಸಹೋದರಿಯರಿಗೆ ರಾಖಿ ಹಬ್ಬದ ಸಂದರ್ಭದಲ್ಲಿ ಈ ವರ್ಷ 600 ರೂ ಅನ್ನು ಅವರ ಖಾತೆಗೆ ಜಮೆ ಮಾಡಿ ಜೀವನ್ ಸುರಕ್ಷಾ ಯೋಜನೆಯ ವಿಮೆಯನ್ನು ಉಡುಗೊರೆಯಾಗಿ ನೀಡಬೇಕೆಂದು ಆಗ್ರಹಿಸುತ್ತೇನೆ.
* ನಿಮಗೆ ರಾಯಭಾರ ಕಚೇರಿಯಲ್ಲಿ ಯಾವುದಾದಾರೂ ಸಮಸ್ಯೆಗಲಿದ್ದರೆ ಸರ್ಕಾರ 'ಮದದ್' ಎನ್ನುವ ವೇದಿಕೆಯನ್ನು ಉದ್ಘಾಟಿಸಿದೆ. ಹೊರದೇಶದಲ್ಲಿರುವ ಭಾರತೀಯರು ಇದರ ಮೂಲಕ ಸೂಕ್ತ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಇ-ಮೈಗ್ರೇಟ್ ಪೋರ್ಟಲ್ ಸಹ ಬಳಸಬಹುದು.
* ಪ್ರಪಂಚದ ಯಾವುದೇ ಮೂಲೆಯಲ್ಲಿ ಭಾರತೀಯನಿದ್ದರೂ ನಾವು ಅವನ ಪಾಸ್ ಪೋರ್ಟ್ ಬಣ್ಣ ನೋಡುವುದಿಲ್ಲ. ಅವನ್ ರಕ್ತದ ಬಣ್ಣ ನೋಡುತ್ತೇವೆ, ತಾಯ್ನಾಡ ಜೊತೆಗಿನ ಸಂಬಂಧ ಮಾತ್ರ ಸಾಕು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited