Untitled Document
Sign Up | Login    
Dynamic website and Portals
  
February 8, 2016

ಉಗ್ರ ಡೇವಿಡ್ ಹೆಡ್ಲಿ ವಿಚಾರಣಾ ಸಂದರ್ಭದಲ್ಲಿ ಇನ್ನಷ್ಟು ಸತ್ಯ ಬಹಿರಂಗ

ಮುಂಬೈ : ಲಷ್ಕರ್ ಇ-ತೈಯ್ಬಾ ಉಗ್ರ ಡೇವಿಡ್ ಹೆಡ್ಲಿಯನ್ನು ಸೋಮವಾರ ಬೆಳಗ್ಗೆ ವಿಚಾರಣೆಗೆ ಒಳಪಡಿಸಲಾಗಿದ್ದು, 26/11 ಮುಂಬಯಿ ದಾಳಿಯ ಕುರಿತು ಹಲವು ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ.

ಅಮೆರಿಕ ಜೈಲಿನಲ್ಲಿರುವ ಹೆಡ್ಲಿ ವಿಚಾರಣೆಯನ್ನು ಮುಂಬೈ ಕೋರ್ಟ್ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಲಾಗುತ್ತಿದೆ.

ಡೇವಿಡ್ ಹೆಡ್ಲಿ ಹೇಳಿಕೆಯ ಪ್ರಮುಖ ಅಂಶಗಳು ಃ

* 26/11 ಮುಂಬಯಿ ದಾಳಿಯ ಬಗ್ಗೆ ನನಗೆ ಸಾಮಾನ್ಯ ಕಲ್ಪನೆ ಇತ್ತು

* 26/11 ಮುಂಬಯಿ ದಾಳಿ ಯೋಜನೆ ರೂಪಿಸಿದ್ದು ಲಷ್ಕರ್ ಇ-ತೈಯ್ಬಾ. ಅದರ ಮುಖ್ಯಸ್ಥನಾದ ಹಫೀಝ್ ಸೈಯದ್ ನ ಹೆಸರು ಹೇಳಿ, ಅವನ ಭಾಷಣನನ್ನನ್ನು ಲಷ್ಕರ್ ಇ-ತೈಯ್ಬಾ ಕಡೆ ಆಕರ್ಷಿಸಿತು ಎಂದಿದ್ದಾನೆ. ಅದರ ಜೊತೆ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಸಹ ವಿವರಿಸಿದ್ದಾನೆ.

* ಲಷ್ಕರ್ ಇ-ತೈಯ್ಬಾ ಹಿಂಬಾಲಿಸಲು ಆರಂಭಿಸಿದ ಬಳಿಕ ‘ಡೇವಿಡ್ ಹೆಡ್ಲಿ’ ಎಂದು ಹೆಸರು ಬದಲಾಯಿಸಿಕೊಂಡಿದ್ದೆ. ಈ ವಿಚಾರವನ್ನು ನನ್ನ ಸಹೋದ್ಯೋಗಿ ಸಾಜಿದ್ ಮಿರ್ ಬಳಿ ಹಂಚಿಕೊಂಡಿದ್ದೆ. ಇದರಿಂದ ನನಗೆ ಭಾರತ ಪ್ರವೇಶಿಸಲು ಸಾಧ್ಯವಾಯಿತು. ಸಾಜಿದ್ ತನ್ನ ಉದ್ಯಮಕ್ಕೆ ಭಾರತದಲ್ಲಿ ಉತ್ತಮ ಅವಕಾಶವೊಂದನ್ನು ಮಾಡಿಕೊಡಲು ನನ್ನ ಬಳಿ ಕೇಳಿಕೊಂಡಿದ್ದ ಎಂದಿದ್ದಾನೆ.

* ಮುಂಬೈ ದಾಳಿ ಘಟನೆಗೂ ಮೊದಲು, ಅಂದರೆ ಹೊಸ ಪಾಸ್​ಪೋಟ್ ಪಡೆದ ಬಳಿಕ 8 ಬಾರಿ ಭಾರತಕ್ಕೆ ಭೇಟಿ ನೀಡಿದ್ದೆ. ಈ ಭೇಟಿಗಳ ಪೈಕಿ ಏಳು ಭಾರಿ ಪಾಕಿಸ್ತಾನದಿಂದಲೇ ನೇರವಾಗಿ ಮುಂಬೈಗೆ ಆಗಮಿಸಿದ್ದೆ. ಇನ್ನೊಂದು ಬಾರಿ ಯುಎಇಯಿಂದ ಆಗಮಿಸಿದ್ದೆ.

* ಮುಂಬೈ ನಗರದ ವಿಡಿಯೋ ಮಾಡಿಕೊಳ್ಳಲು ಸಾಜಿದ್ ನನಗೆ ಸಲಹೆ ನೀಡಿದ್ದ.

* ಮುಂಬೈ ದಾಳಿಯ ಬಳಿಕ ಮತ್ತೆ ನಾನು ಭಾರತಕ್ಕೆ ಬಂದಿದ್ದು, 2009ರ ಮಾರ್ಚ್ 7ರಂದು. ಅಂದು ಲಾಹೋರ್​ನಿಂದ ದೆಹಲಿಗೆ ಆಗಮಿಸಿದ್ದೆ.

* ವೀಸಾ ಮಾಡಿಸಿಕೊಳ್ಳಲು ತಂದೆ-ತಾಯಿ ಹೆಸರು, ನನ್ನ ವಿಳಾಸ, ಜನ್ಮ ದಿನಾಂಕ… ಈ ಎಲ್ಲಾ ಮಾಹಿತಿಯನ್ನು ತಪ್ಪಾಗಿ ನೀಡಿದ್ದೆ.

* 26/11 ದಾಳಿಯ ಮೊದಲು ಎರಡು ಬಾರಿ ರೂಪಿಸಿದ್ದ ಸಂಚು ವಿಫಲವಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited