Untitled Document
Sign Up | Login    
Dynamic website and Portals
  
August 17, 2015

ಮೋದಿ ಮೋಡಿ ಸವಿಯಲು ಸಜ್ಜಾದ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

ಯು.ಎ.ಇ. ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯು.ಎ.ಇ. ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ

ದುಬೈ : ಯುಎಐ ಯಲ್ಲಿ ನೆಲೆಸಿರುವ ಭಾರತೀಯರಿಗೆ ಇಂದು ಹಬ್ಬದ ದಿನ. ತಮ್ಮ ಮೆಚ್ಚಿನ ನಾಯಕನನ್ನು ಕಣ್ಣಾರೆ ಕಾಣುವ, ಅವರ ಭಾಷಣವನ್ನು ಸವಿಯುವ ಅವಕಾಶ ಅವರಿಗೆ ಒದಗಿದೆ.

ಎರಡು ದಿನಗಳ ಯು.ಎ.ಐ. ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಸೋಮವಾರ ಸಂಜೆ ದುಬೈ ನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ವಲಸಿಗ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.

'ಮರ್ಹಬ ನಮೋ' (ಮೋದಿಗೆ ಸ್ವಾಗತ) ಎಂಬ ಹೆಸರಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 50,000ಕ್ಕೂ ಮಿಕ್ಕಿ ಜನರು ಸ್ಪಂದಿಸಿದ್ದಾರೆ. ಸ್ಟೇಡಿಯಂ ಒಳಗಡೆ ಸುಮಾರು 30,000 ಜನರು ಕುಳಿತುಕೊೞಬಹುದಾಗಿದ್ದು, ಇತರ 15,000 ಜನರಿಗೆ ಸ್ಟೇಡಿಯಂ ಹೊರಗಡೆ ವ್ಯವಸ್ಥೆ ಮಾಡಲಾಗಿದೆ. ಅವರ ಅನುಕೂಲಕ್ಕಾಗಿ ಬೃಹತ್ ವಿಡಿಯೋ ಪರದೆಗಳನ್ನೂ ಅಳವಡಿಸಲಾಗಿದೆ. ಅಲ್ಲದೆ, ಆಹಾರ, ಪಾನೀಯದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದು ಅಮೆರಿಕದ ಮ್ಯಾಡಿಸನ್ ಸ್ಕ್ಯೇರ್ ಗಾರ್ಡನ್ ನಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮವನ್ನೂ ಮೀರಿಸುವ ರೀತಿಯಲ್ಲಿ ಆಯೋಜನೆಗೊಂಡಿದೆ.

'ಮರ್ಹಬ ನಮೋ' ಯು.ಎ.ಇ ಹಿಂದೆಂದೂ ಕಾಣದ ಅಭೂತಪೂರ್ವ ಕಾರ್ಯಕ್ರಮವೆಂದು ಹೇಳಲಾಗಿದೆ. ಯು.ಎ.ಇ. ಪ್ರವಾಸದಲ್ಲಿರುವ ಯಾವುದೇ ರಾಷ್ಟ್ರದ ನಾಯಕನಿಗೆ ಇಂಥ ಬೃಹತ್ ಪ್ರಮಾಣದ ಸ್ವಾಗತವನ್ನು ಆ ದೇಶದಲ್ಲಿ ಈವರೆಗೆ ಆಯೋಜಿಸಲಾಗಿಲ್ಲ.

ದುಬೈ ಪೊಲೀಸರ ಸಲಹೆ ಮೇರೆಗೆ ಆಯೋಜಕರು ಜನರನ್ನು ಮಧ್ಯಾಹ್ನ್ನ 3 ಗಂಟೆಯಿಂದಲೇ (ಭಾರತೀಯ ಕಾಲಮಾನ 4.30) ಸ್ಟೇಡಿಯಂ ಒಳಗೆ ಬಿಡಲು ಸೂಚಿಸಿದ್ದಾರೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗುವ 'ಮರ್ಹಬ ನಮೋ' ದಲ್ಲಿ ಪ್ರಧಾನಿ ಮೋದಿ ಸುಮಾರು 8 ಗಂಟೆಗೆ (ಭಾರತೀಯ ಕಾಲಮಾನ 9.30) ತಮ್ಮ ಭಾಷಣ ಮಾಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿಯೇ 35 ಅಂತಾರಾಷ್ಟ್ರೀಯ ಕಲಾವಿದರನ್ನು ವಿವಿಧೆಡೆಯಿಂದ ದುಬೈ ಗೆ ಕರೆಸಲಾಗಿದೆ.

ಈ ಬೃಹತ್ ಸಮಾರಂಭಕ್ಕೆ ದುಬೈ ರಸ್ತೆ ಹಾಗೂ ಸಾರಿಗೆ ಸಂಸ್ಥೆಯೂ ಧನಾತ್ಮಕವಾಗಿ ಸ್ಪಂದಿಸಿದ್ದು, ಸಭೆಗೆ ಬರುವ ಜನರ ಅನುಕೂಲಕ್ಕಾಗಿ 200ಕ್ಕೂ ಹೆಚ್ಚು ಬಸ್ ಗಳನ್ನು ವ್ಯವಸ್ಥೆ ಮಾದಿದೆ.

ಸ್ಟೇಡಿಯಂ ಒಳಗೆ ಸ್ಥಳದ ಅಭಾವದ ಕಾರಣಕ್ಕಾಗಿ ಆನ್ ಲೈನ್ ನಲ್ಲಿ ಬುಕ್ ಮಾಡಿದ ಜನರಿಗೆ 'ಮೊದಲು ಬಂದವರಿಗೆ ಪ್ರಥಮ ಆದ್ಯತೆ' ಪ್ರಕಾರ ಒಳಗೆ ಬಿಡಲಾಗುವುದು ಎಂದು ಆಯೋಜಕರು ತಮ್ಮ ವೆಬ್ ಸೈಟಿನಲ್ಲಿ ತಿಳಿಸಿದ್ದಾರೆ.

ಐದು ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲದೆ, ಯಾವುದೇ ತಿಂಡಿ-ತಿನಿಸು, ವಿಡಿಯೋ ಕ್ಯಾಮೆರಾ, ಕ್ಯಾಮೆರಗಳನ್ನೂ ಒಳಗಡೆ ತರಲು ನಿಷೇಧ ಹೇರಲಾಗಿದೆ.

ಕಾರ್ಯಕ್ರಮದ ಆಯೋಜನಾ ಸಮಿತಿಯ ಸದಸ್ಯರಾದ ಕನ್ನಡಿಗ ಬಿ.ಆರ್.ಶೆಟ್ಟಿಯವರು ಮಾಧ್ಯಮದೊಂದಿಗೆ ಮಾತನಾಡುತ್ತ, 'ಇದು ಎಲ್ಲ ವಲಸಿಗ ಭಾರತೀಯರಿಗೆ ಕನಸು ನನಸಾಗುತ್ತಿರುವ ವಿಚಾರ. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಬೇಕೆಂಬುದು ನಮ್ಮೆಲ್ಲರ ಬಯಕೆ. ಇದರಿಂದಾಗಿ ಯು.ಎ.ಇ. ಮತ್ತು ಭಾರತ ಸರಕಾರಗಳು ಇಲ್ಲಿ ನೆಲೆಸಿರುವ ಭಾರತೀಯರ ಬಗ್ಗೆ ಹೆಮ್ಮೆಪಡುವಂತಾಗಬೇಕೆಂಬುದು ನಮ್ಮ ಆಶಯ' ಎಂದರು.

ವ್ಯಾಪಕ ವ್ಯವಸ್ಥೆಯನ್ನು ಮಾಡಲಾಗಿದ್ದು, ತುರ್ತು ಸೇವೆಗಾಗಿ 5 ಆಂಬುಲೆನ್ಸ್ ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಅಲ್ಲದೆ, 30 ವೈದ್ಯರನ್ನು, 12 ಪ್ಯಾರಾಮೆಡಿಕ್ಸ್ ಗಳನ್ನು ಮತ್ತು 13 ದಾದಿಯರನ್ನು ತುರ್ತು ಸೇವೆಗಾಗಿ ನಿಯೋಜಿಸಲಾಗಿದೆ. ಇವರನ್ನು ಒಟ್ಟು ೫ ತಂಡಗಳನ್ನಾಗಿ ವಿಂಗಡಿಸಲಾಗಿದ್ದು, ಸ್ಟೇಡಿಯಂ ಒಳಗೆ ಮತ್ತು ಹೊರಗೆ ತುರ್ತು ಸೇವೆಗಾಗಿ ಅವರು ತಯಾರಿರುತ್ತಾರೆ.

ಭಾಗವಹಿಸುವ ಜನರ ಸಹಾಯಕ್ಕಾಗಿ 1,000ಕ್ಕೂ ಮಿಕ್ಕಿ ಕಾರ್ಯಕರ್ತರು ನಿಂತರೆ, ರಕ್ಷಣೆಗೆ 340 ಖಾಸಗಿ ರಕ್ಷಣಾ ದಳವಲ್ಲದೆ, ದುಬೈ ಪೊಲೀಸ್ ಪಡೆ ಸಹ ಕಾರ್ಯನಿರ್ವಹಿಸುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited