Untitled Document
Sign Up | Login    
Dynamic website and Portals
  
August 16, 2015

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನದ ಯುಎಇ ಪ್ರವಾಸ ಆರಂಭ

ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ) ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ)

ನವದೆಹಲಿ : ಭಾನುವಾರದಿಂದ ತಮ್ಮ ಎರಡು ದಿನದ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗಲ್ಫ ರಾಷ್ಟ್ರವನ್ನು ಮಿನಿ ಭಾರತ ಎಂದು ಬಣ್ಣಿಸಿದ್ದಾರೆ.

ಸುಮಾರು 2.6 ಮಿಲಿಯನ್ ಭಾರತೀಯರು ಯುಎಇ ಅಲ್ಲಿ ವಾಸಿಸುತ್ತಾರೆ. 34 ವರ್ಷಗಳ ನಂತರ ಭಾರತದ ಪ್ರಧಾನಿಯ ಭೇಟಿ ಇದಾಗಿದೆ.

ಎಲ್ಲಾ ವಿಷಯಗಳಲ್ಲೂ ಭಾರತ ಮತ್ತು ಯುಎಇ ಪರಸ್ಪರ ಹೆಚ್ಚಿನ ಆದ್ಯತೆ ನೀಡಬೇಕು. ಯುಎಇ ಅನ್ನು ಈ ನಿಟ್ಟಿನಲ್ಲಿ ನಾನು ನೋಡುತ್ತೇನೆ. ಭಾರತದ ಆರ್ಥಿಕ, ಶಕ್ತಿ ಮತ್ತು ರಕ್ಷಣೆಯ ವಿಷಯದಲ್ಲಿ ಭಾರತಕ್ಕೆ ಯುಎಇ ಪ್ರಮುಖ ಪಾತ್ರವಹಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎರಡು ದೇಶಗಳ ನಡುವಿನ ವ್ಯಾಪಾರ ಮತ್ತು ಬಂಡವಾಳ ಸಂಬಂಧಗಳನ್ನು ಅಭಿವೃದ್ಧಿಪಡಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ಮುಖ್ಯ ಉದ್ದೇಶವಾಗಿದೆ.

ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಅಬುದಾಭಿಯಲ್ಲಿರುವ ಪ್ರಸಿದ್ದ ಶೇಖ್ ಝಾಯೇದ್ ಗ್ರಾಂಡ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಭಾರತವನ್ನು ಸೇರಿಸಿ ಪ್ರಪಂಚದ ಎಲ್ಲಾ ಭಾಗಗಳಿಂದ ತಂದ ಮಾರ್ಬಲ್ ಗಳಿಂದ ಈ ಮಸೀದಿ ಕಟ್ಟಲಾಗಿದೆ. ಇಲ್ಲಿ ಸಾವಿರಜನರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸಬಹುದಾದ ನೆಲಹಾಸು ಇದೆ.

ಇದಾದ ನಂತರ 28000 ಭಾರತೀಯ ಕೆಲಸಗಾರರ ವಸತಿ ಶಿಬಿರಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು 300 ಜನರ ಜೊತೆ ಮಾತುಕತೆ ನಡೆಸಲಿದ್ದಾರೆ.

ಸೋಮವಾರ, ದುಬೈ ಕ್ರಿಕೇಟ್ ಸ್ಟೇಡಿಯಂನಲ್ಲಿ ಸುಮಾರು 50000 ಭಾರತೀಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸ್ಟೇಡಿಯಂನ ಸಾಮರ್ಥ್ಯಕ್ಕಿಂತ ಹೆಚ್ಚಿನ ನೋಂದಣಿಗೆ ಅರ್ಜಿ ಬಂದ ಕಾರಣ ನೋದಂಣಿ ಪ್ರಾರಂಭಿಸಿದ ಒಂದೇ ದಿನದಲ್ಲಿ ಸಂಘಟಕರು ನೋಂದಣಿ ಕಾರ್ಯವನ್ನು ಸ್ಥಗಿತಗೊಳಿಸಬೇಕಾಯಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited