ಜಮ್ಮು : ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕಿಸ್ತಾನ, ಜಮ್ಮು ಕಾಶ್ಮೀರದ ಪೋಂಚ್ ಜಿಲ್ಲೆಯ ಗಡಿಯಲ್ಲಿ ಶುಕ್ರವಾರ ಬೆಳಗಿನ ಜಾವ ಗುಂಡಿನ ಮಳೆಗೈದಿದೆ.
ಬೆಳಗಿನ ಜಾವ ಸುಮಾರು 3:30 ಕ್ಕೆ ಪೋಂಚ್ನ ಸೌಜಿಯಾನ ಗಡಿಪ್ರದೇಶದಲ್ಲಿ ಪ್ರಾರಂಭವಾರ ಗುಂಡಿನ ಚಕಮಕಿ ಇವರೆಗೂ ಮುಂದುವರಿದಿದೆ.
ಪಾಕಿಸ್ತಾನದ ಈ ಅಟ್ಟಹಾಸಕ್ಕೆ ಭಾರತೀಯ ಯೋಧರು ಪ್ರತ್ಯುತ್ತರ ನೀಡುತ್ತಿದ್ದು, ಗುಂಡಿನ ಚಕಮಕಿ ನಿರಂತರವಾಗಿ ಸಾಗಿದೆ.
ಈ ತಿಂಗಳು ಈವರೆಗೆ ಪಾಕಿಸ್ತಾನ 12 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಜುಲೈನಲ್ಲಿ 18 ಬಾರಿ ಭಾರತ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆಯಾಗಿತ್ತು. ಇದರಲ್ಲಿ ಮೂವರು ಯೋಧರು ಸೇರಿ ನಾಲ್ವರು ಮರಣ ಹೊಂದಿದ್ದರು. 14 ಜನರಿಗೆ ಗಾಯಗಳಾಗಿತ್ತು.