Untitled Document
Sign Up | Login    
Dynamic website and Portals
  
June 30, 2015

ಇಂಡೊನೇಶ್ಯಾದ ವಾಯು ಪಡೆಗೆ ಸೇರಿದ ವಿಮಾನ ಪತನ: 38 ಜನ ಬಲಿ

ಮೇದಾನ್‌ : ಇಂಡೋನೇಶ್ಯದ ವಾಯು ಪಡೆಗೆ ಸೇರಿದ ವಿಮಾನವೊಂದು ಆಗಸಕ್ಕೆ ಟೇಕಾಫ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡು ಮೇದಾನ್‌ ನಗರದ ಮೇಲೆ ಪತನಗೊಂಡ ಪರಿಣಾಮ 38 ಮಂದಿ ಮೃತಪಟ್ಟಿದ್ದಾರೆ.

ಹರ್ಕ್ಯುಲಿಸ್ ಸಿ-130 ಸಂಖ್ಯೆಯ ವಾಯುಪಡೆ ವಿಮಾನ ಸುಮಾತ್ರ ದ್ವೀಪದಲ್ಲಿನ ಮೇದಾನ್‌ ನಗರದ ಮೇಲೆ ಪತನಗೊಂಡಾಗ ಹಲವಾರು ಕಟ್ಟಡಗಳು ತೀವ್ರವಾಗಿ ಹಾನಿಗೊಂಡಿದ್ದು, ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ.

ವಿಮಾನ ಪತನಗೊಂಡ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಈವರೆಗೆ ಒಂದು ಮಗು ಸೇರಿದಂತೆ ಒಟ್ಟು 38 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಮೇದಾನ್‌ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗುತ್ತಿರುವ ರೆಡ್‌ ಕ್ರಾಸ್‌ ಅಧಿಕಾರಿ ಎಕೋ ತ್ರಿಯಾಂಡಿ ತಿಳಿಸಿದ್ದಾರೆ.

ಇಂಡೋನೇಶ್ಯದ ಸೇನೆ ತಿಳಿಸಿರುವ ಪ್ರಕಾರ ವಾಯುಪಡೆ ವಿಮಾನದಲ್ಲಿ 12 ಚಾಲಕ ಸಿಬಂದಿಗಳಿದ್ದರು. ವಾಯುಪಡೆ ವಿಮಾನ ಇಂದು ಮಂಗಳವಾರ ಮಧ್ಯಾಹ್ನ 12.08 ಹೊತ್ತಿಗೆ ವಾಯುಪಡೆಯ ನೆಲೆಯಿಂದ ಗಗನಕ್ಕೆ ನೆಗೆದಿತ್ತು. ಅದಾಗಿ ಎರಡೇ ನಿಮಿಷಗಳಲ್ಲಿ ಅದು ವಾಯುಪಡೆ ನೆಲೆಯಿಂದ ಕೇವಲ ಐದು ಕಿ.ಮೀ. ದೂರದಲ್ಲಿ ಜನದಟ್ಟನೆಯ ನಗರದ ಮೇಲೆ, ಜನರು ವಾಸಿಸುವ ಕಟ್ಟಡಗಳ ಮೇಲೆ ಬೆಂಕಿಯ ಗೋಲವಾಗಿ ಸ್ಫೋಟಗೊಂಡು ಪತನಗೊಂಡಿತು ಎಂದು ಮಿಲಿಟರಿ ವಕ್ತಾರ ಫ‌ುವಾದ್‌ ಬಾಸ್ಯಾ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited