ನವದೆಹಲಿ : 192 ದೇಶ, 250ಕ್ಕೂ ಹೆಚ್ಚು ನಗರ, 200 ಕೋಟಿ ಜನ ಭಾನುವಾರದ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ದೆಹಲಿಯ ರಾಜಪಥ ವೊಂದರಲ್ಲೇ 40 ಸಾವಿರ ಜನ ಭಾಗವಹಿಸಿದ್ದಾರೆ. ಬೆಳಗ್ಗೆ 6.45ಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜಪಥಕ್ಕೆ ಆಗಮಿಸಿ ಭಾಷಣ ಮಾಡಿ, ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.
ಸಮಸ್ತ ಭಾರತೀಯರ ಒತ್ತಾಸೆ ಮೇರೆಗೆ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ಪರಿಣಾಮವಾಗಿ ಘೋಷಣೆಯಾದ ’ಅಂತಾರಾಷ್ಟ್ರೀಯ ಯೋಗ ದಿನ'ಕ್ಕೆ ಇಂದು ಮೊದಲ ಆಚರಣೆಯ ಸಂಭ್ರಮ. ಭಾರತವೂ ಸೇರಿದಂತೆ ವಿಶ್ವದ ಮೂಲೆಮೂಲೆಯಲ್ಲಿ ಭಾನುವಾರ ಇಡೀ ದಿನ ಯೋಗ ದಿನ ಆಚರಿಸಲಾಗುತ್ತಿದೆ.