ಅಲಹಾಬಾದ್ : ಜಾಗ್ವಾರ್ ಫೈಟರ್ ವಿಮಾನ ಪತನವಾಗಿರುವ ಘಟನೆ ಉತ್ತರ ಪ್ರದೇಶ ಸಮೀಪದ ಅಲಹಾಬಾದ್ ನಲ್ಲಿ ನಡೆದಿದ್ದು, ಇಬ್ಬರೂ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗ್ಗೆ 7.25ಕ್ಕೆ ಅಲಹಾಬಾದ್ ನಲ್ಲಿ ತರಬೇತಿಗಾಗಿ ಜಾಗ್ವಾರ್ ಫೈಟರ್ ಜೆಟ್ ಹಾರಾಟ ನಡೆಸಿತ್ತು. ಸುಮಾರು 8.47ಕ್ಕೆ 18 ಕಿಲೋ ಮೀಟರ್ ದೂರಕ್ಕೆ ನೆಗೆದಿದ್ದ ವಿಮಾನ ನೈನಿ ರೈಲ್ವೆ ನಿಲ್ದಾಣ ಬಳಿ ಪತನವಾಗಿದೆ.
ಇಬ್ಬರು ಪೈಲಟ್ ಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಫೈಟರ್ ವಿಮಾನ ಪತನಗೊಂಡ 2ನೇ ಘಟನೆ ಇದಾಗಿದೆ. ಮಾರ್ಚ್ ತಿಂಗಳಿನಲ್ಲಿ ತಾಂತ್ರಿಕ ದೋಷದಿಂದ ಹರ್ಯಾಣದ ಕುರುಕ್ಷೇತ್ರದಲ್ಲಿ ಜಾಗ್ವಾರ್ ಫೈಟರ್ ಜೆಟ್ ಪತನಗೊಂಡಿತ್ತು. ಅದೃಷ್ಟವಶಾತ್ ಆ ಘಟನೆಯಲ್ಲೂ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದರು.