Untitled Document
Sign Up | Login    
Dynamic website and Portals
  
June 7, 2015

ಬಾಂಗ್ಲಾಗೆ ಸಾವಿರ ಮೆಗಾವ್ಯಾಟ್ ವಿದ್ಯುತ್ ಪೂರೈಸುತ್ತೇವೆ: ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಢಾಕಾ : ಬಾಂಗ್ಲಾದೇಶಕ್ಕೆ ಭಾರತ ಈವರೆಗೂ 500 ಮೆಗಾವ್ಯಾಟ್ ವಿದ್ಯುತ್ ಪೂರೈಸುತ್ತಿದ್ದು, ಇನ್ನು ಮುಂದೆ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಾಂಗ್ಲಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಢಾಕಾದಲ್ಲಿ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರ ಜತೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದು ಅತೀವ ಸಂತಸ ತಂದಿದೆ. ಬಾಂಗ್ಲಾದಲ್ಲಿ ಸಿಕ್ಕ ಸ್ವಾಗತದಿಂದ ಮನಸ್ಸು ತುಂಬಿ ಬಂದಿದೆ ಎಂದು ಮೋದಿ ಹೇಳಿದರು. ಅಲ್ಲದೆ ಪ್ರಧಾನಿ ಜತೆ ಬಾಂಗ್ಲಾ ಪ್ರವಾಸಕ್ಕೆ ತೆರಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಹಕಾರಕ್ಕೆ ಮೋದಿ ಧನ್ಯವಾದ ಹೇಳಿದರು.

ಬಾಂಗ್ಲಾದೇಶ ಹಾಗೂ ಭಾರತ ಕೇವಲ ನೆರೆ ರಾಷ್ಟ್ರಗಳಾಗಿ ಉಳಿದಿಲ್ಲ. ಸಂಸ್ಕೃತಿ, ಕ್ರಿಕೆಟ್‌ನಿಂದಾಗಿ ಭಾವನಾತ್ಮಕ ಸಂಬಂಧ ಹೊಂದಿವೆ. ಉಭಯ ರಾಷ್ಟ್ರಗಳ ನಡುವೆ ಹಲವು ಒಪ್ಪಂದಗಳು ನಡೆದಿವೆ. ಭೂ ಒಪ್ಪಂದದಿಂದಾಗಿ ನಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಕಗ್ಗಂಟಾಗಿಯೇ ಉಳಿದಿದ್ದ ಭೂಮಿ ಸಮಸ್ಯೆ ಬಗೆಹರಿದಿದೆ ಎಂದರು.

ಬಾಂಗ್ಲಾ - ಭಾರತ ನಡುವೆ ಬಸ್ ಸಂಚಾರ ಆರಂಭಿಸಿದ್ದೇವೆ. ಇದರಿಂದ ಭಾವನಾತ್ಮಕ ಬಂಧ ವೃದ್ದಿಯಾಗಲಿದೆ ಮತ್ತು ಅಭಿವೃದ್ಧಿ ಹಾದಿಯಲ್ಲಿ ಜೊತೆಗೂಡಿ ಮುನ್ನಡೆಯುತ್ತೇವೆ ಎಂದು ಮೋದಿ ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited